ಶಿವಮೊಗ್ಗ: ದೇಶದಲ್ಲಿ ಧರ್ಮ, ಸಂಸ್ಖೃತಿಯನ್ನು ಉಳಿಸಿದಾಗ ಮಾತ್ರ ಭಾರತ ಪ್ರಪಂಚದಲ್ಲೇ ಉನ್ನತ ಸ್ಥಾನಕ್ಕೇರುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಬಬ್ಬೂರಕಮ್ಮೆ ಸೇವಾ ಸಮಿತಿಯ ಜಿಲ್ಲಾ ಘಟಕ ಆಯೋಜಿಸಿದ್ದ ರುದ್ರಹೋಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬ್ರಾಹ್ಮಣ ಸಮುದಾಯ ಧರ್ಮವನ್ನು ರೂಪಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿ?ಯ. ಜನರಿಗೆ ಧರ್ಮದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಜ್ಜನಿಕೆಯೇ ಕಡಿಮೆಯಾಗಿದೆ. ಅಂಥ ಸಂದರ್ಭದಲ್ಲಿ ಇಂಥಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರಾಜ್ಯ ಗಮಕ ಕಲಾ ಪರಿ?ತ್ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ಮಾತನಾಡಿ, ದರ್ಮ ಜಾಗೃತಿ, ಧರ್ಮ ಪುನಶ್ಚೇತನ ಇಂದಿನ ಅಗತ್ಯವಾಗಿದೆ. ಧರ್ಮದಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಕೆಲವರು ಬೇರೆ ಧರ್ಮಕ್ಕೆ ಆಕರ್ಷಿತರಾಗುತ್ತಿದ್ದಾರೆ. ನಮ್ಮ ಧರ್ಮದವರೇ ನಮ್ಮ ಧರ್ಮದ ಬಗ್ಗೆಯೇ ಪ್ರಶ್ನೆ ಕೇಳಿ ನಮ್ಮ ಧರ್ಮವನ್ನೇ ಕೀಳು ಮಟ್ಟಕೆ ತೆಗೆದುಕೊಂಡು ಹೋಗುತ್ತಿರುವುದು ವಿ?ದದ ಸಂಗತಿ ಎಂದರು.

ನಮ್ಮ ದೇಶಕ್ಕೆ ದೊಡ್ಡ ಗಂಡಾಂತರ ಒದಗಿದೆ. ಅಕ್ಬರ, ಬಾಬರನ ಕಾಲದಲ್ಲಿನ ಗಂಡಾಂತರಕ್ಕಿಂತ ಮಿಗಿಲಾದ ಗಂಡಾಂತರ ಎದುರಾಗಿದೆ. ನಾವೆಲ್ಲ ಜಾರೂಕತೆಯಿಂದ ಇರಬೇಕು ಎಂಬ ಎಚ್ಚರಿಕೆಯನ್ನು ನೀಡಿದ ಅವರು ವಿದ್ಯಾರ್ಥಿಗಳು ಸಮಾಜದ ಋಣವನ್ನು ತೀರಿಸಬೇಕು. ಮುಖ್ಯವಾಗಿ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆ, ಸಮಾಜ, ರಾ?ದ ಬಗ್ಗೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ, ದೇಶಕ್ಕೆ ಪ್ರತಿಭಾವಂತರನ್ನು ಕೊಟ್ಟ ಸಮಾಜ ಇದು. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಹೆಚ್ವು ಪ್ರಭಾವ ಬೀರಿದ ಸಮಾಜ. ಸಮಾಜಕ್ಕೆ ಪ್ರತಿಭೆ ಅನಿವಾರ್ಯ. ೮೦ರ ದಶಕದ ಬಳಿಕ ಸಮಾಜದ ವಿದ್ಯಾವಂತರು ಉತ್ತಮ ಶಿಕ್ಷಣ ಪಡೆದು ವಿದೇಶಗಳಿಗೆ ಹೋದರು ಹೋಗುವಾಗ ಪೋ?ಕರನ್ನು ಕರೆದೊಯ್ದರು. ಪರಿಣಾಮ ಸಮಾಜದ ಸಂಖ್ಯೆ ಕುಸಿಯಿತು. ಗಂಭೀರ ವಿಚಾರ. ಶಿಕ್ಷಣ ಯಾವುದೇ ಒಂದಕ್ಕೆ ಸೀಮಿತವಾಗಬಾರದು.
ರಾ?ಭಕ್ತ ಬಳಗದ ಅಧ್ಯಕ್ಷ ಕೆ.ಇ.ಕಾಂತೇಶ, ಕಾರಕೊಡ್ಲು ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿ ಎಸ್.ರಘುರಾಮ, ಪಿ.ಎ.ಸುಮಿತ್ರಮ್ಮ, ಎಸ್.ಎಚ್.ನಂಜುಂಡಯ್ಯ, ಪ್ರೊ.ಎಸ್.ಗೌರಿಶಂಕರ, ಎಸ್.ನಾಗೇಶ್,ಲಕ್ಷ್ಮೀ ಶ್ರೀಧರ, ಡಾ.ವಿದ್ಯಾಶಂಕರ ಮೊದಲಾದವರಿದ್ದರು.