ಶಿವಮೊಗ್ಗ : ಜೂನ್4ರಂದು ಕರ್ನಾಟಕದಲ್ಲಿ ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ 11 ಜನ ಬಲಿಯಾದ ಘಟನೆಯಲ್ಲಿ ತನಿಖಾ ವರದಿಯಲ್ಲಿ ಸಂಪೂರ್ಣವಾಗಿ ರಾಜ್ಯ ಸಕಾರವನ್ನು ರಕ್ಷಿಸುವ ಕಾರ್ಯ ಆಗಿದೆ ಎಂದು ಶಾಸಕ ಡಿ.ಎಸ್. ಅರುಣ್ ಆರೋಪಿಸಿದ್ದಾರೆ.

ಕೆಎಸ್ಸಿಎ, ಆರ್ಸಿಬಿ ಮತ್ತು ಡಿಎನ್ಎ ಮೇಲೆ ಈ ವರದಿ ಗೂಬೆ ಕೂರಿಸಿದೆ. ಆದರೆ ವಾಸ್ತವಸ್ಥಿತಿ ಬೇರೆಯೇ ಇದೆ. ಕೆ.ಎಸ್.ಸಿ.ಎ.ಯಲ್ಲಿ ಯಾವುದೇ ಕ್ರಿಕೇಟ್ ಕ್ರೀಡಾಕೂಟ ನಡೆದರೂ ಅದರ ಭದ್ರತಾ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಪೊಲೀಸ್ ಇಲಾಖೆ ಮೊದಲೇ ಸರ್ಕಾರಕ್ಕೆ ಭದ್ರತೆ ಒದಗಿಸುವುದು ಕಷ್ಟವೆಂದು ತಿಳಿಸಿದ್ದರೂ ಸರ್ಕಾರದ ಕಾರ್ಯದರ್ಶಿ ಸತ್ಯವತಿಯವರು ವಿಧಾನಸೌಧದ ಮೆಟ್ಟಿಲ ಮೇಲಿನ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಪ್ರಚಾರ ನೀಡುತ್ತಾರೆ. ನೇರವಾಗಿ ಸಿಎಂ-ಡಿಸಿಎಂ, ಹೆಚ್ಇಎಲ್ ಹೆಲಿಪ್ಯಾಡ್ಗೆ ಹೋಗಿ ವಿರಾಟ್ಕೋಯ್ಲಿ ಜೊತೆ ನಿಂತು ಫೋಟೋ ಹೊಡಿಸಿಕೊಂಡು ಅವರನ್ನು ಕರೆತರುತ್ತಾರೆ. ವಿರಾಟ್ಕೋಯ್ಲಿಗೆ 44 ಲಕ್ಷ ಫಾಲೋವರ್ಸ್ಗಳು ಅವರ ಖಾತೆಯನ್ನು ನೋಡಿದ್ದು ಹಾಗಾಗಿ ಜನಸಾಗರ ಹರಿದುಬಂತು. ಅವರ ಪೋಸ್ಟ್ ಈ ದುರಂತಕ್ಕೆ ಕಾರಣ ಎನ್ನುವುದು ಸರ್ಕಾರ ತನ್ನಮೇಲಿನ ಆರೋಪದಿಂದ ನುಣುಚಿಕೊಳ್ಳಲು ಮಾಡುವ ಕುತಂತ್ರ ಎಂದರು.

ಸರ್ಕಾರ ಅವರಿಗೆ ಗೌರವಿಸುತ್ತೇವೆ ಬನ್ನಿ ಎಂದಾಗ ಅವರು ಬಂದಿದ್ದಾರೆ. ವಿಧಾನಸೌಧದ ಮೆಟ್ಟಿಲಿನಲ್ಲಿ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಒಂದು ವಾರವಾದರೂ ಅನುಮತಿಗೆ ಓಡಾಡಬೇಕಾಗುತ್ತದೆ. ಆದರೆ ಏಕಾಏಕಿ ಅಲ್ಲಿ ಕಾರ್ಯಕ್ರಮ ಮಾಡಿ, ತಮ್ಮ ಕುಟುಂಬದೊಂದಿಗೆ ಸ್ಪರ್ಧೆಯಲ್ಲಿ ಫೋಟೋ ತೆಗೆಸಿಕೊಂಡ ಸರ್ಕಾರದ ಮಂತ್ರಿಗಳು ಮತ್ತು ಕುಟುಂಬಸ್ಥರು ಈಗ ಅನಾಹುತ ಸಂಭವಿಸಿದ ಮೇಲೆ ಕಾರ್ಯಕ್ರಮವನ್ನು ಆರ್ಸಿಬಿ ನಾಯಕ ವಿರಾಟ್ಕೋಯ್ಲಿ ಮತ್ತು ಅವರ ತಂಡ ಹಾಗೂ ಕೆಎಸ್ಸಿಎ, ಡಿಎನ್ಎ ಕಾರಣ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದರು.

ಕೆ.ಎಸ್.ಸಿ.ಎ.ಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲವಾದಲ್ಲಿ ಅಲ್ಲಿ ಕಾರ್ಯಕ್ರಮಕ್ಕೆ ಅನುಮತಿಕೊಟ್ಟವರು ಯಾರು ? ಸಿಎಂ-ಡಿಸಿಎಂ ಇದಕ್ಕೆ ನೇರಹೊಣೆಯಾಗಿದ್ದು, ಈ ಪ್ರಕರಣದ ಎ1 ಆಗಿ ಕಾಂಗ್ರೆಸ್ ಸರ್ಕಾರವೇ ಹೊಣೆ ಹೋರಬೇಕು. ವರದಿಯಲ್ಲಿ ಸತ್ಯವತಿಯವರ ಮಾಧ್ಯಮ ಪ್ರಕಟಣೆಯ ಬಗ್ಗೆ ಆಗಲಿ, ಸರ್ಕಾರ ಆಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬಗ್ಗೆ ಮತ್ತು ಇಂಟಲಿಜೆನ್ಸಿ ವೈಫಲ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪೊಲೀಸರನ್ನು ದೂಷಣೆ ಮಾಡಿದ ಸರ್ಕಾರ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಹೊಣೆಮಾಡಿದೆ. ಇದು ಕೂಡ ಸರ್ಕಾರದ ನಿರ್ಲಕ್ಷ್ಯಧೋರಣೆಯಾಗಿದೆ ಎಂದರು.

ಕೆಎಸ್ಸಿಎ ಅನುಮತಿ ಕೇಳಿದಾಗ ಕೊಟ್ಟು, ಈಗ ತಮಗೆ ಸಂಬಂಧ ಇಲ್ಲವೆನ್ನುವುದು ಸರ್ಕಾರದ ಧೋರಣೆ ಸರಿಯಲ್ಲ, ವಿರಾಟ್ಕೋಯ್ಲಿ ವಿರುದ್ಧ ಕೇಸ್ ದಾಖಲಿಸಿದ್ದೂ ಕೂಡ ಸಮಂಜಸವಲ್ಲ ಎಂದು ಡಿ.ಎಸ್. ಅರುಣ್ ಹೇಳಿದ್ದಾರೆ.