ಶಿವಮೊಗ್ಗ: ಅಂತಸ್ಸತ್ವವನ್ನು ಹಾಳು ಮಾಡಿಕೊಳ್ಳದೆ ಬದುಕುವುದು ಈ ನೆಲದ ಸತ್ವ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ಅವರು ರಾ?ತ್ಥಾನ ಬಳಗ, ಶಿವಮೊಗ್ಗ ಆಯೋಜಿಸಿದ್ದ ಕರಾಳ ತುರ್ತು ಪರಿಸ್ಥಿತಿಗೆ ೫೦ ವ? ಮರು ಮುದ್ರಿತ ಭುಗಿಲು ಪುಸ್ತಕದ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಭುಗಿಲು ರಮ್ಯತೆ ಇರುವ ಕಥಾನಕವಲ್ಲ. ಭುಗಿಲು ಬರೇ ಮಾಹಿತಿಗಲ್ಲ. ಪಾಠವಾಗಿ ಭುಗಿಲನ್ನು ಓದಬೇಕು. ತೆಳುವಾಗಿಸುವ ನೆನಪನ್ನೂ ಗಾಡವಾಗಿಸುವ ಶಕ್ತಿ ಈ ಗೃಂಥಕ್ಕೆ ಇz. ಸಂಘಕ್ಕೆ ಬೈಯುತ್ತಿರುವವರ ಹೆಸರೂ ಇದರಲ್ಲಿ ಇವೆ. ಸಮಾಜ ಜೀವನದಲ್ಲಿ ನಮಗೆ ಕಲಿಸುವ ಪಾಠ. ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಹೋದವರು ಇದನ್ನು ಕಲಿತಿದ್ದಾರೆ ಎಂದರು.

ಸಂವಿಧಾನದ ಜೊತೆ ಆಟ ಆಡಲು ಯಾವ ಕಾಲಕ್ಕೂ ಬಿಡುವುದಿಲ್ಲ. ಅದನ್ನು ಬ್ರಾಂಡ್ ಮಾಡಲೂ ಬಿಡುವುದಿಲ್ಲ. ಇಂದು ಬರವಣಿಗೆ ಅನಿವಾರ್ಯ. ಜಯದೇವರ ನೇತೃತ್ವದಲ್ಲಿ, ಹು.ವೆ. ಶೇ?ದ್ರಿಯವರ ಮಾರ್ಗದರ್ಶನದಲ್ಲಿ ಈ ಮೊದಲು ಈ ಗ್ರಂಥ ಬಿಡುಗಡೆಯಾಗಿತ್ತು ಎಂದು ನೆನಪಿಸಿಕೊಂಡರು.

ನಮ್ಮ ದೇಶದ ಶಾಲೆಗಳಲ್ಲಿ ನಮ್ಮ ದೇಶದ ಸತ್ಯವನ್ನು ಹೇಳಿಲ್ಲ. ವಿದೇಶಿ ಶಿಕ್ಷಣ ಕಲಿಸಿದ ಶಿಕ್ಷಣ ವ್ಯವಸ್ಥೆ ಇದೆ. ಇಲ್ಲಿಯ ಕೆಳದಿ ಚೆನ್ನಮ್ಮ, ಚೆನ್ನಭೈರಾದೇವಿ ಬಗ್ಗೆ ಗೊತ್ತಿಲ್ಲ. ಆದರೆ ಇಂಗ್ಲೆಂಡಿನ ರಾಣಿ ಎಲಿಜೆಬೆತ್, ಜಾರ್ಜಗಳ ಬಗ್ಗೆ ಹೇಳ್ತೀವಿ. ಇನ್ನೊಂದು ಬಾರಿ ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಬರಬಾರದು. ಆ ಪರಿಸ್ಥಿತಿ ಬರೋದಿಲ್ಲ. ಅದಕ್ಕೆ ಭುಗಿಲು ಓದಲೇಬೇಕು ಎಂದು ಸಲಹೆ ನೀಡಿದರು.
ಭಾರತ ತುತುಪರಿಸ್ಥಿತಿಯನ್ನು ಜೀರ್ಣಿಸಿಕೊಂಡಿದೆ. ೧೯೮೦ರ ಚುನಾವಣೆಯನ್ನು ಕಾಂಗ್ರೆಸ್ ಅನುಕಂಪದ ಮೇಲೆ ಗೆದ್ದಿದೆ. ಈಗಿನ ಭಾರತ ೧೯೭೫ರ ಭಾರತ ಅಲ್ಲ. ಕಾಂಗ್ರೆಸ್ ೭೫ ರ ಕಾಂಗ್ರೆಸ್ ಅಲ್ಲ. ಈಗ ಅವರು ತಮ್ಮ ಮನೆಯನ್ನು ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ೧೯೭೫ ರಲ್ಲಿ ಇಂದದಿರಾ ಗಾಂಧಿಯವರ ಮಾನಸಿಕತೆಯನ್ನು ಗುರುತಿಸುವಲ್ಲಿ ಜನರು ವಿಫಲರಾದರು. ಭಾರತ ಸ್ವಾತಂತ್ರ್ಯದ ವಿಚಾರದಲ್ಲಿ ಯಾರ ಜೊತೆಯೂ ರಾಜಿ ಮಾಡಿಕೊಳ್ಳಲಿಲ್ಲ ಎಂದರು.

ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇತ್ಯಾದಿ ವಿವಿಧ ಪಂಥಗಳಿದ್ದರೂ ಯಾರಿಗೂ ಮತಾಂತರ ಮಾಡುವ ಅಲೋಚನೆ ಬರಲಿಲ್ಲ. ಇಂದಿರಾ ಗಾಂಧಿ ಅವರಿಗೆ ಭಾರತೀಯರ ಜನಜೀವನ, ವೈಚಾರಿಕತೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವ ಹುನ್ನಾರವಿತ್ತು. ಮೊದಲು ಪಕ್ಷ, ಆ ಮೇಲೆ ಆಡಳಿತ, ನಂತರ ದೇಶ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಆ ಮೂಲಕ ಸರ್ವಾಧಿಕಾರಿಯಾದರು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಆಂತರಿಕ, ಬಾಹ್ಯ ತೊಂದರೆಯಾದಾಗ ಅಗತ್ಯಕ್ಕಿಟ್ಟ ಅಂಶಗಳನ್ನು ಇಂದಿರಾ ದುರುಪಯೋಗ ಪಡಿಸಿಕೊಂಡರು ಎಂದು ಟೀಕಿಸಿದರು.
ಈ ದೇಶದಲ್ಲಿ ಸತ್ಯ ಎಂದೂ ಸಾಯುವುದಿಲ್ಲ. ತುರ್ತುಪರಿಸ್ಥಿತಿ ಮತ್ತು ನಂತರದ್ದು ವೀರಗಾಥೆ.
ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಹೋರಾಟ, ಮಹಾತ್ಮಾ ಗಾಂಧೀಜಿ, ಗಾಂಧಿ ಹೆಸರು ಎಂಬ ಈ ಮೂರು ಪುಣ್ಯಗಳಿದ್ದವು. ಆದರೆ ಅದರ ಪ್ರಾಪ್ತಿ ಆಗಲಿಲ್ಲ. ನಮ್ಮಲ್ಲಿ ಭಟ್ರ ಮಗ ಭಟ್ರು ಆಗ್ತಾರೆ. ಶೆಟ್ರ ಮಗ ಶೆಟ್ರು ಆಗ್ತಾರೆ. ಆದರೆ ನೆಹರು ಮಗ ಗಾಂಧಿ ಆಗಿದ್ದು ಭಾರತದಲ್ಲಿ ಮಾತ್ರ. ಸಾಮೂಹಿಕತೆಯನ್ನು ಇಂದಿರಾ ನಾಶ ಮಾಡಲು ಹೊರಟಿದ್ದರು. ಸಂವಿಧಾನದ ಬಗ್ಗೆ ಒಂದು ಭಾವನೆ ಇದೆ. ಸಂವಿಧಾನಕ್ಕೆ ಹೆಚ್ಚು ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಸಂವಿಧಾನ ನಮ್ಮ ದೇಶದ ಇಂದಿನ ಸ್ಮೃತಿ. ಸಮಾಜವಾದ ಮತ್ತು ಜಾತ್ಯಾತೀತತೆ ಅಳವಡಿಕೆಯನ್ನು ಡಾ.ಅಂಬೇಡ್ಕರ್ ವಿರೋಧಿಸಿದ್ದರು. ಇಂದಿರಾ ಗಾಂಧಿಯವರ ಮೂಗಿನ ಕೆಳಕ್ಕೇ ಸಂಜಯ ಗಾಂಧಿ ಅವರ ನೀತಿ ಲಕ್ಷಾಂತರ ನೌಕರರ, ವಿದ್ಯಾರ್ಥಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.
ಲಾಭದ ರುಚಿ ಹಚ್ಚಿಕೊಂಡಾಗ ಹೋರಾಟದ ಕಿಚ್ಚು ದೂರವಾಗುತ್ತದೆ. ಇಂದಿರಾ ಉಪಕೃತ ವರ್ಗವನ್ನು ಸೃಷ್ಡಿಸಿಕೊಂಡಿದ್ರು. ವೈಚಾರಿಕ ಬದ್ಧತೆ, ವೈಚಾರಿ ಸ್ವಾತಂತ್ರ್ಯ ಇತ್ತು. ಈಗ ಉಳಿದುಕೊಂಡಿದ್ಯಾ? ನ್ಯಾಯ ಪರತೆ, ಸತ್ಯ ನಿ?ರತೆಗೆ ಸಮಾಜ ನಿಲ್ಲುತ್ತಾ? ಅದನ್ನು ಉಳಿಸಿಕೊಳ್ಳಬೇಕು. ಸಂಬಂಧಪಟ್ಟವರೆಲ್ಲೂ ಯೋಚನೆ ಮಾಡಬೇಕು. ಆಂತರಿಕ ಶುದ್ಧೀಕರಣ ವ್ಯಕ್ತಿಗೂ ಇದೆ, ಪಕ್ಷಕ್ಕೂ ಇದೆ. ಸಂಘಕ್ಕೂ ಇದೆ. ದೇಶಕ್ಕೂ ಇದೆ. ಸಂಘಟನೆ, ನೇತೃತ್ವ, ಯೋಚನೆಗಳನ್ನು ಜಾಗೃತವಾಗಿಟ್ಟುಕೊಳ್ಳಬೇಕು. ಶಿವಮೊಗ್ಗ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೃಜನಶೀಲವಾಗಿ, ಶಕ್ತಿಯುತವಾಗಿ ಕೆಲಸ ನಿರ್ವಹಿಸಿದೆ ಎಂದರು.
ರಂಗಕರ್ಮಿ ಪ್ರಕಾಶ ಬೆಳವಾಡಿ ಮಾತನಾಡಿ, ತುರ್ತು ಪರಿಸ್ಥಿತಿಯ ಕಾಲದಲ್ಲದ್ದವರೇ ಮರೆತಿದ್ದಾರೆ. ಭಾರತ ಗೊಂದಲ ಹುಟ್ಟಿಸುವ ದೇಶವಾಗಿದೆ. ಇಂದಿರಾಗಾಂಧಿಯವರನ್ನು ಸೋಲಿಸಿದ್ದ ಜನರೇ ಮತ್ತೆ ಇಂದಿರಾ ಗಾಂಧೀಯವರನ್ನು ಗೆಲ್ಲಿಸಿದ್ಯಾಕೆ ಎಂದು ಪ್ರಶ್ನಿಸಿದರು.
ತುರ್ತುಪರಿಸ್ಥಿತಿ ಘೋಷಿಸುವಾಗ ಇದು ತಪ್ಪು ಅಂತ ಹೇಳುವವರು ಯಾರೂ ಇರಲಿಲ್ಲ. ದಕ್ಷಿಣ ಭಾರತಕ್ಕೆ ಏನೂ ತಟ್ಟಿಲ್ವಾ? ಸಿಪಿಐ, ಈಗ ನಾವು ಯಾವುದನ್ನು ಕಟ್ಟಿಕೊಳ್ಳುವುದು? ಯಾವುದನ್ನು ಬಡಬಹುದು ಎಂಬುದನ್ನು ಹೇಳಿಕೊಡುವವರು ಬೇಕು.
ಇಂದಿರಾ ಗಾಂಧಿಯವರು ಭಾರತವನ್ನು ಪ್ರೀತಿಸ್ತದ್ರೋ ಇಲ್ವೊ ಗೊತ್ತಿಲ್ಲ. ಆದರೆ ಈಗಿನವರನ್ನು ನೋಡಿದರೆ ಭಾರತವನ್ನು ಛಿದ್ರ ಮಸೋ ಮಾತಾಡುವವರೇ ಜಾಸ್ತಿ ಆಗಿದ್ದಾರೆ. ಇಂಗ್ಲೀ? ಬಲ್ಲವರಿಗೆ ಬೇರೆ ದೇಶಗಳಲ್ಲಿ ಸದಸ್ಯತ್ವ ಸಿಗುತ್ತದೆ. ಆದರೆ ದೇಸಿ ಜನರಿಗೆ ಭಾರತವೇ ಇಂದಿರಾ ಅವರು ತುರ್ತು ಪರಿಸ್ಥಿತಿಯನ್ನು ಏಕೆ ವಾಪಸ್ ಪಡೆದುಕೊಂಡರು? ಎನ್ನುವುದೇ ಇವತ್ತಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದರು.
ಡಾ.ಸುಧೀಂದ್ರ ಅದ್ಯಕ್ಷತೆ ವಹಿಸಿದ್ದರು. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಉಪಸ್ಥಿತರಿದ್ದರು.