ಶಿವಮೊಗ್ಗ: ಕರ್ನಾಟಕ ಯೋಗಾಸನಾ ಕ್ರೀಡಾ ಸಂಸ್ಥೆ ವತಿಯಿಂದ ಜುಲೈ 20ರಂದು ಬೆಳಗ್ಗೆ 8 ಗಂಟೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಗಾಗಿ ಆಯ್ಕೆ ನಡೆಯಲಿದೆ ಎಂದು ಕಾರ್ಯದರ್ಶಿ ಮಹೇಂದ್ರ ಬಿ.ಆರ್. ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 23, 24ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಯೋಗಾಸನ ಕ್ರೀಡೆ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಶಿವಮೊಗ್ಗದಲ್ಲಿ ಜು. 20ರಂದು ಯೋಗಾಸನ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ಈ ಸ್ಪರ್ಧೆಗಳು ಒಟ್ಟು 6 ವಿಭಾಗದಲ್ಲಿ ನಡೆಯಲಿದ್ದು, ಈ ಆರೂ ವಿಭಾಗಗಳು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿವೆ ಎಂದರು.

ಸ್ಪರ್ಧೆಗಳು 10 ರೀತಿಯ ವಿವಿಧ ಯೋಗಾಸನ ವಿಭಾಗಗಳಲ್ಲಿ ನಡೆಯಲಿದ್ದು, ಸಾಂಪ್ರದಾಯಕ ಯೋಗಾಸನ, ಮುಂದಕ್ಕೆ ಬಾಗಿ ಮಾಡುವ, ಹಿಂದಕ್ಕೆ ಬಾಗಿ ಮಾಡುವ ಆಸನಗಳು, ಲೆಗ್ ಬ್ಯಾಲೆನ್ಸ್ ಆಸನಗಳು, ಕಲಾತ್ಮಕ ಯೋಗಾಸನ ಜೋಡಿ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿವೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಮಾತನಾಡಿ, ಈ ಸ್ಪರ್ಧೆಗಳು ಸಬ್ ಜ್ಯೂನಿಯರ್, ಜ್ಯೂನಿಯರ್, ಸೀನಿಯರ್, ವಿಭಾಗಗಳಲ್ಲಿ ನಡೆಯಲಿವೆ. ಸೀನಿಯರ್ ವಿಭಾಗಗಳಲ್ಲಿ ಮೂರು ರೀತಿಯಲ್ಲಿ ವಿಂಗಡಿಸಲಾಗಿದ್ದು, 28-35 ವರ್ಷ, 35-45 ವರ್ಷ, 45-55 ವರ್ಷ ಎಂದು ಎ.ಬಿ.ಸಿ. ಗ್ರೂಪ್ ಗಳನ್ನಾಗಿ ಮಾಡಲಾಗಿದೆ ಎಂದರು.

ಯೋಗಾಸನ ಕ್ರೀಡಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಜು. 20ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು, ಯುವ ಸಬಲೀಕರಣ, ಆಯುಷ್ ಇಲಾಖೆ, ಯೋಗಾಸನ್ ಭಾರತ್, ಮತ್ತು ಶಿವಮೊಗ್ಗದ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಉದ್ಘಾಟನೆಗೊಳ್ಳಲಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಆಯುಷ್ ಅಧಿಕಾರಿ ಡಾ. ಲಿಂಗರಾಜ್ ಎಸ್. ಹಿಂಡಸಗಟ್ಟಿ, ಶಿವಗಂಗಾ ಯೋಗಕೇಂದ್ರದ ಸಿ.ವಿ. ರುದ್ರಾರಾಧ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಹೆಚ್ಚಿನ ವಿವರಗಳಿಗೆ 9901331588, 8217803576 ಅನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮಂಗಳಾ ಜಿ.ಹೆಚ್., ಮಂಜಪ್ಪ, ವಾಣಿಶ್ರೀ ಮುಂತಾದವರಿದ್ದರು.