ಶಿವಮೊಗ್ಗ: ರಾಜ್ಯದಲ್ಲಿ ಕಳೆದ ಕೆಲವು ದಿನದಿಂದ ಮಾಜಿ ಸಿಎಂ ಸಿದ್ದರಾಮಯ್ಯರ ಸ್ಟಿಂಗ್ ಬಗ್ಗೆ ಚರ್ಚೆಯಾಗ್ತಿದೆ. ಇದರ ಬಗ್ಗೆ ತನಿಖೆಗೆ ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಕಾಣಿಸುತ್ತಿಲ್ಲ ಎಂದು ಬಿ.ಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಕಾಂಗ್ರೆಸ್ ಸರ್ಕಾರ ಇದೆ ಅಂಅಂದ್ರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ಸರ್ಕಾರ ಬರುವಲ್ಲಿ ಅವರ ಪಾತ್ರ ಪ್ರತಿಯೊಬ್ಬರಿಗೂ ಗೊತ್ತಿದೆ. ಸಿದ್ದರಾಮಯ್ಯರನ್ನ ಯೂಸ್ & ಥ್ರೋ ಮಾಡಲಾಗ್ತಿದೆ ಸಿಡಿ, ಪೆನ್ ಡ್ರೈವ್ ಫ್ಯಾಕ್ಟರಿ ಯಾರು ಅಂತಾ ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ ಎಂದರು.

ಕಾಲಹರಣ ಮಾಡೋದು ಬಿಟ್ಟು, ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಇತ್ತೀಚೆಗೆ ಮೈಸೂರು ದಸರಾ ಮುಕ್ತಾಯವಾಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ರಾಜ ಮನೆತನ ನಡುವೆ ವಿಶ್ವಾಸ ಇಲ್ಲದಿರುವುದು ಕಾಣುತ್ತಿದೆ. ಯುವ ದಸರಾ ಹಾಗೂ ಮಹಿಳಾ ದಸರಾದಲ್ಲಿ ಗೊಂದಲ ಆಯ್ತು. ಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು ಎಂದು ಜನ ಮಾತಾಡುತ್ತಿದ್ದಾರೆ. ರಾಜ ಮನೆತನ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ತಮ್ಮ ಪ್ರಚಾರಕ್ಕೆ ತೆಗೆದುಕೊಂಡರು ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಕೂಡ ಅಂಬಾರಿ ಅವಘಡ ಆಯ್ತು. ಉಸ್ತುವಾರಿ ಸಚಿವರು ಕಾಟಚಾರಕ್ಕೆ ಸಭೆ ಮಾಡಿದ್ರು. ತಮ್ಮ ಪ್ರಚಾರದ ಚಟಕ್ಕೆ ಸಿಎಂ ಬಿದ್ದರು. ಹೊರ ರಾಜ್ಯದ ಸಿಎಂ ಕರೆತಂದರು, ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಸಿಎಂ ಪತ್ನಿಯನ್ನ ಕರೆದೊಯ್ದರು, ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಸಿಎಂ ಕೇವಲ ಜನಪ್ರಿಯತೆಗೆ ಕಟ್ಟುಬಿದ್ದಿದ್ದಾರೆ. ಮೈಸೂರು ದಸರಾದಲ್ಲಿ ಡಿಸಿಎಂ ಹಾಗೂ ಉಸ್ತುವಾರಿ ಸಚಿವರ ಫೋಟೊ ಇರಲಿಲ್ಲ. ಆ ಮಟ್ಟಿನ ಪ್ರಚಾರಕ್ಕೆ ಸಿಎಂ ಒಬ್ಬರೇ ಬಿದ್ದಿದ್ದಾರೆ. ಮತ್ತೊಂದು ಕಡೆ ಭ್ರಷ್ಟಾಚಾರ ಹೆಚ್ಚಾಗಿದೆ.

ಕಾರ್ಮಿಕ ಇಲಾಖೆಯಲ್ಲಿ ನೂರಾರು ಕೋಟಿ ಹಗರಣ ನಡೆದಿದೆ. ಅಲ್ಲೊಂದು ಇಲ್ಲೊಂದು ಹೆಲ್ತ್ ಕ್ಯಾಂಪ್ ಮಾಡಿ, ನೂರಾರು ಕೋಟಿ ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದಲ್ಲೂ ಹಗರಣ ಆಯ್ತು. ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ಪಿಂಚಣಿ ಸಹ ನೀಡುತ್ತಿಲ್ಲ. ಬರಗಾಲದ ಸಂದರ್ಭದಲ್ಲಿ ರೈತರ ನೆರವಿಗೆ ಸರ್ಕಾರ ಬರಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಯವರು ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ಹಾಗೂ ಅವರ ತಂದೆಯ ಬಗ್ಗೆ ಮಾತಾಡಿದ್ದಾರೆ. ಈ ಮಾತು ಮಲ್ಲಿಕಾರ್ಜುನ್ ಖರ್ಗೆಯವರ ಬಾಯಲ್ಲಿ ಬಂದಿದೆ. ಈ ಹೇಳಿಕೆ ಮೂಲಕ ಅವರು ರಾಹುಲ್ ಗಾಂಧಿ ಮನಸ್ಥಿತಿಯನ್ನ ಬಿಚ್ಚಿಡುವ ಕೆಲಸ ಮಾಡಿದ್ದಾರೆ. ಗಾಂಧಿ ಕುಟುಂಬ ಬಿಟ್ಟು, ಬೇರೆ ಯಾರು ಪ್ರಧಾನಿಯಾಗಬಾರದು ಎಂಬ ಭಾವನೆ ಅವರದ್ದು ಮಲ್ಲಿಕಾರ್ಜುನ್ ಖರ್ಗೆ ದೇಶದ ಜನರನ್ನ ಬಹಿರಂಗ ಕ್ಷಮೆ ಕೇಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.