ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ನಗರದ ತುಂಗಾ ನದಿಯ ದಡದ ಬಳಿ ಇರುವ ಮಂಟಪದಲ್ಲಿ ವರುಣನ ಪೂಜೆ ಮಾಡಿ ವಿಶೇಷ ಮಂತ್ರ ಪಠಣದ ಮೂಲಕ ಎಲ್ಲರ ಇಷ್ಟಾರ್ಥಗಳು ಈಡೇರಲೆಂದು ತಾಯಿ ತುಂಗೆಗೆ ಬಾಗಿನ ಸಮರ್ಪಿಸಿದರು

.
ಈ ಒಂದು ಶುಭ ಸಂಧರ್ಭದಲ್ಲಿ ಗುರುಗಳಾದ ಶ್ರೀ ಶಬರೀಶ್ ಸ್ವಾಮಿರವರ ದಿವ್ಯ ಉಪಸ್ಥಿತಿಯಲ್ಲಿ ಭಕ್ತ ವೃಂದದವರು ಜೊತೆಗೂಡಿ ಈ ಕಾರ್ಯಕ್ರಮ ನೆರವೇರಿಸಿದರು.

ಪೂಜ್ಯ ಗುರುಗಳು ಈ ಸಂದರ್ಭದಲ್ಲಿ ಶ್ರೀ ರೋಜಾ ಗುರೂಜಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತವೃಂದದ ವತಿಯಿಂದ ವಿಶೇಷ ಪಾದಪೂಜೆಯನ್ನು ನೆರವೇರಿಸಿದರು. ವಿಶೇಷವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ

ಪ್ರಸಾದವನ್ನು ಗುರುಗಳು ತಮ್ಮ ಭಕ್ತ ವೃಂದಕ್ಕೆ ವಿನಿಯೋಗಿಸಿದರು. ಈ ಕಾರ್ಯಕ್ರಮದಲ್ಲಿ ಸಂದೇಶ್, ವೆಂಕಟೇಶ್, ಪಳನಿ, ಸೆಂಥಿಲ್,

ಶಕುಂತಲಾ, ಸೆಲ್ವಿ, ಮುರುಗನ್, ಶಿಕಾರಿಪುರದ ಗುರು,ಅಕ್ಷತಾ, ಪೂಜಾ, ಧನುಷ್, ಅಭಿ, ಲಕ್ಷ್ಮಿ, ಕಾಶಿನಾಥ್, ದರ್ಶನ್, ಬಾನುಪ್ರಿಯ, ವಿವೇಕ್, ಚಂದನ್, ಸೋಮೇಶ್ ಭದ್ರಾವತಿಯ ಸಾಗರ್, ರಘು, ಭೀಮರಾಜ್ ಹಾಗೂ ಯುವಜನರು ಪಾಲ್ಗೊಂಡಿದ್ದರು.