ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ನಿನ್ನೆಯಿಂದ ಮಹಾನಗರ ಪಾಲಿಕೆ ಮುಂಭಾಗ ಪಾಲಿಕೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ೨ನೇ ದಿನಕ್ಕೆ

ಮುಂದುವರೆದಿದೆ.

ಶಿವಮೊಗ್ಗ ನಗರ ಜೆಡಿಎಸ್ ಘಟಕ ಬೆಂಬಲ ವ್ಯಕ್ತಪಡಿಸಿ

ಮುಷ್ಕರದಲ್ಲಿ ಭಾಗವಹಿಸಿತ್ತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ಶಿವಮೊಗ್ಗ ನಗರ ಜೆಡಿಎಸ್
ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಸಂಜಯ್ ಕಶ್ಯಪ್, ಸಿದ್ದೇಶ್, ವೆಂಕಟೇಶ್, ಸುರೇಶ್ ಇನ್ನಿತರರು ಭಾಗವಹಿಸಿದ್ದರು.