ಶಿವಮೊಗ್ಗ: ರಾಜ್ಯದ 10 ಮಹಾನಗರ ಪಾಲಿಕೆ ನೌಕರರ ಸಂಘ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಟವಧಿ ಮುಷ್ಕರಕ್ಕೆ ಕರೆ ನೀಡಿದ್ದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮುಂದೆ ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟವಧಿ ಮುಷ್ಕರ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದವರು ಮಾತನಾಡಿ ನೌಕರರ ಬೇಡಿಕೆ ನ್ಯಾಯಯುತವಾಗಿದೆ. ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ ಈಗಾಗಲೇ ನಾನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಂದು ಮತ್ತೆ ನಾಳೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು ಬಹುತೇಕ ಸಮಸ್ಯೆ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿದೆ ಎಂದರು.

7ನೇ ವೇತನ ಆಯೋಗದ ಸೌಲಭ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಪಾಲಿಕೆ ಅಧಿಕಾರಿ ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು. ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು. ಕೆ ಜಿ ಐ ಡಿ ಜೆ ಪಿ ಎಫ್ ಪಾಲಿಕೆ ನೌಕರರಿಗೂ ಜಾರಿಗೊಳಿಸಬೇಕು ಆರೋಗ್ಯ ಸೌಲಭ್ಯದ ಜ್ಯೋತಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪೌರಕಾರ್ಮಿಕರಿಗೆ ಜಾರಿಗೊಳಿಸಬೇಕು ಮುಂಬಡ್ತಿ ಪಡೆಯಲು ವಂಚಿತರಾಗಿರುವ ಪಾಲಿಕೆ ಅಧಿಕಾರಿಗಳು ಮತ್ತು ನೌಕರರಿಗೆ ವೃಂದ ವಾರು ಮುಂಬಡ್ತಿ ನೀಡಬೇಕು ಮೊದಲಾದ ಪಾಲಿಕೆ ನೌಕರರ ಬೇಡಿಕೆಗಳು ಸರಳ ಮತ್ತು ಸಹಜವಾಗಿದೆ. ಈ ಬೇಡಿಕೆ ಈಡೇರಿಸುವುದು ಸರ್ಕಾರಕ್ಕೆ ಏನು ಕಷ್ಟವಿಲ್ಲ. ನಾಳೆ ನಾನು ಕೂಡ ಸರ್ಕಾರಿ ಅಧಿಕಾರಿಗಳ ಮೀಟಿಂಗ್ನಲ್ಲಿ ಭಾಗವಹಿಸುತ್ತಿದ್ದೇನೆ. ನೌಕರರಲ್ಲಿ ಒಗ್ಗಟ್ಟಿರಬೇಕು ಕೊನೆಯವರೆಗೂ ಹೋರಾಟದ ಮನೋಭಾವವಿರಬೇಕು ನಮ್ಮ ಸಂಘದ ಬೆಂಬಲವು ನಿಮಗಿದೆ ಸದಾ ನಾನು ನಿಮ್ಮೊಂದಿಗೆ ಇದ್ದೇನೆ. ಆರ್ಥಿಕ ಇಲಾಖೆಯಂದಿಗೂ ಮಾತನಾಡಿದ್ದೇನೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು ಈಗಾಗಲೇ ಗಮನಕ್ಕೆ ತಂದಿದ್ದೇನೆ ಎಂದರು.

ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ರಾಜ್ಯಾದ್ಯಂತದ ಈ ಹೋರಾಟಕ್ಕೆ ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸುತ್ತಿರುವುದು ವಿಶೇಷವಾಗಿದ್ದು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳುವ ಭರವಸೆಯಲ್ಲಿ ಕಾರ್ಮಿಕರಿದ್ದಾರೆ. ಇಂದು ನಡೆದ ಮುಷ್ಕರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳಾದ ಪಿ ಕುಮಾರ್ ಎಸ್ ಜಿ ಮಂಜಣ್ಣ ಡಿ ಮೋಹನ್ ಜುಬೇದುಲ್ಲಾ ಲೋಹಿತ್ ತುμÁರ್ ಬಿ ಹೊಸೂರು ಡಿ ನಾಗೇಂದ್ರ ವಿಕಾಸ್ ನಾಗೇಶ್ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.