ಶಿವಮೊಗ್ಗ: ಸಂಚಾರಿ ಪೊಲೀಸರೊಂದಿಗೆ ಕಿರಿಕಿರಿ ಮಾಡಿಕೊಂಡ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವು 4500 ರೂ. ದಂಡ ವಿಧಿಸಿದೆ.

ಇಲ್ಲಿನ ಜೆಪಿಎನ್ ರಸ್ತೆಯಲ್ಲಿ ಕಾರ್ ಮಾಲೀಕರೊಬ್ಬರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಕರ್ತವ್ಯ ನಿರ್ವಹಿಸುತ್ತಿದ್ದ ಭಾರತಿ ಎಂಬ ಟ್ರಾಫಿಕ್ ಪೊಲೀಸ್ ಅಧಿಕಾರಿ ತಡೆದು ಪ್ರಶ್ನೆ ಮಾಡಿದ್ದಕ್ಕೆ ಮಾಲೀಕ ಪೊಲೀಸರೊಂದಿಗೆ ಕಿರಿಕಿರಿ ಮಾಡಿದ್ದಾರೆ. ಸುತ್ತಲ ಜನರ ಸೇರಿಸಿ ವಿಡಿಯೋ ಮಾಡಿ

ಅಧಿಕಾರಿಯನ್ನೇ ಬೆದರಿಸಿದ್ದಾರೆ. ದಂಡ ಪಾವತಿಸಿ ಹೋಗಿ ಎಂದು ಹೇಳಿದರೂ ಆತ ಕೇಳದೇ ಮಹಿಳಾ ಅಧಿಕಾರಿಯೊಂದಿಗೆ ಜಗಳಕ್ಕೆ

ನಿಂತಿದ್ದಾರೆ. ಇದರಿಂದ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮತ್ತು ಸೀಟ್ ಬೆಲ್ಟ್ ಹಾಕಿಲ್ಲ ಎಂದು ಆತನ ಮೇಲೆ ಕೇಸ್ ಹಾಕಿದ್ದಲ್ಲದೇ ತಕ್ಷಣವೇ ನ್ಯಾಯಾಲಯಕ್ಕೂ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ ದಂಡ ವಿಧಿಸಿದೆ.