ಪಾಲಿಕೆ ಸುತ್ತಣದ ಸುದ್ದಿ- ಎ. ರವಿ
ಶಿವಮೊಗ್ಗ :ಜು.7 :
ಈ ಹಿಂದೆ ಪಾಲಿಕೆಯ ಅಯಕ್ತರಾಗಿದ್ದ ಕವಿತಾ ಯೋಗಪ್ಪನವರ್ ಅಡಳಿತ ಅವಧಿಯಲ್ಲಿ ಈ ಸ್ವತ್ತು -ಈ ಅಸ್ತಿ -ಖಾತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ದೂರದಿಂದ ಬರುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಂದಾಯ ವಿಭಾಗವನ್ನು ಉತ್ತರವಲಯ ದಕ್ಷಿಣವಲಯ ಮತ್ತು ಕೇಂದ್ರ ವಲಯ ಎಂದು ಮೂರು ವಲಯಗಳನ್ನಾಗಿ ವಿಂಗಡಿಸಿದ್ದರು. ಅದರೂ ಸಹ ಪಾಲಿಕೆಯ ಕಂದಾಯ ವಿಭಾಗದ ಕೆಲ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ತಮ್ಮ ಚಾಳಿಯನ್ನು ಬಿಡದೆ ಪಾಲಿಕೆಗೆ ತಮ್ಮ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಸಹ ನೀಡದೇ ಸುಖಾ ಸುಮ್ಮನೇ ಸರ್ವರ್ ಸಮಸ್ಯೆ ಇದೆ, ದಾಖಲೆಗಳು ಸರಿಯಾಗಿಲ್ಲ, ನಾಳೆ ಬನ್ನಿ ನಾಡಿದ್ದು ಬನ್ನಿ ಎನ್ನುತ್ತಾ ಸಾರ್ವಜನಿಕರಿಗೆ ಅಲೆದಾಡಿಸುತ್ತಾ ಕಾಲ ಕಳೆದ ಕೆಲ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಈ ಹಿಂದೆ ಬಾರೀ ಅಕ್ರೋಶ ವ್ಯಕ್ತಪಡಿಸಿದ್ದರು.

ಕಂದಾಯ ವಿಭಾಗದ ಅಗಿನ ವ್ಯವಸ್ಥೆಯ ವಿರುದ್ದ ಸಿಡಿದೆದ್ದ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರೂ ಕೂಡ ಪತ್ರಿಕಾಗೋಷ್ಟಿಯ ಮೂಲಕ ಕಂದಾಯ ವಿಭಾಗದ ಕೆಲ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಕೈಗೆ ಹಣ ಕೊಟ್ರೆ ಮಾತ್ರ ಇಲ್ಲಿ ಕೆಲಸ ಎಂಬಂತೆ ಅನೇಕ ಅರೋಪಗಳು ಸಹ ಮಾಡಿದ್ದರು.

ಸಾರ್ವಜನಿಕರ ದೂರಿನ ಮೇರೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಅತೀ ಹೆಚ್ಚು ಬಾರೀ ಲೋಕಾಯುಕ್ತರೂ ಸಹ ಬೇಟಿ ನೀಡಿ ಇಲ್ಲಿನ ವ್ಯವಸ್ಥೆಗೆ ಬಗ್ಗೆ ಛೀಮಾರಿ ಹಾಕಿ ಕೆಲ ದಾಖಲೆಗಳನ್ನು ಕೂಡ ತೆಗೆದುಕೊಂಡು ಹೋಗಿದ್ದರು.
ಅದರೇ ಈಗ ಮಾಯಣ್ಣ ಗೌಡರು ಅಯುಕ್ತರಾದ ಮೇಲೆ ಇಲ್ಲಿನ ಅಧಿಕಾರಿಗಳಿಗೆ ನಡುಕ ಶುರುವಾಗಿದೆ ಎಂದು ತಿಳಿದು ಬಂದಿದೆ.
ಗೌಡರು ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಗೌಡರು ಕಂದಾಯ ವಿಭಾಗ ವಲಯ 2 ಕ್ಕೆ ಬೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಇನ್ನೆರಡು ಕಂದಾಯ ವಿಭಾಗದ ಅಧಿಕಾರಿಗಳಿಗೆ ನಡುಕ ಶುರುವಾಗಿದೆಯಂತೆ.

ಅಯುಕ್ತರಾದ ಮಾಯಣ್ಣ ಗೌಡರು ಯಾವ ಸಮಯದಲ್ಲಾದರೂ ಭೇಟಿ ನೀಡಬಹುದು ಎಂದು ತಿಳಿದ ಅಲ್ಲಿನ ಅಧಿಕಾರಿಗಳು ಸಿಬ್ಬಂದಿಗಳು ಬಾಕಿ ಉಳಿದಿರುವ ತಮ್ಮ ತಮ್ಮ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಮತ್ತೆ ಪಾಲಿಕೆಗೆ ಅಯುಕ್ತರಾಗಿ ವರ್ಗಾವಣೆಯಾಗಿ ಬಂದ ಮಾಯಣ್ಣಗೌಡರಿಂದ ಕಂದಾಯ ವಿಭಾಗಗಳು ಬದಲಾವಣೆ ಅಗಬಹುದು ಎಂದು ಸಾರ್ವಜನಿಕರು ನಿರೀಕ್ಷಿಸಿದ್ದಾರೆ, ಅದು ಹುಸಿಯಾಗದೆಂಬುದು ನಮ್ಮ ನಂಬುಗೆ.
ಮಾಯಣ್ಣಗೌಡರ ಕಂಡೀಷನ್ ಕಂಡದ್ದು ಹೀಗಿತ್ತು…,
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡರ ಕಂಡೀಷನ್ ಹೇಗಿತ್ತು ಗೊತ್ತೇನ್ರೀ.,
ಕಳೆದ ಶನಿವಾರ ಶಿವಮೊಗ್ಗ ಒಂದಿಬ್ಬರು ತಮ್ಮ ಮನೆಯ ಈ ಸ್ವತ್ತಿನ ವಿಚಾರವಾಗಿ ಆಯುಕ್ತರ ಬೇಟಿ ಮಾಡಿದ್ರು.,
ಪಾಲಕೆಯ ತುರ್ತು ಕಾರ್ಯಕ್ರಮಗಳ ಕುರಿತು ಚರ್ಚಿಸುತ್ತಿದ್ದ ಗೌಡರಿಗೆ ಸಡನ್ ಆಗಿ ಸಿಟ್ಟು ಬಂದದ್ದು ಬಂದವರ ಮೇಲಲ್ಲ., ಈ ಸ್ವತ್ತು ಸಿದ್ದಪಡಿಸುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ಹರಿದಿತ್ತು.
ಈ ಸ್ವತ್ತು ದಾಖಲಾತಿಯ ಮೂಲ ಪ್ರತಿಯನ್ನ ಕಂಪ್ಯೂಟರ್ ಸಾಪ್ಟ್ ವೇರ್ ನಲ್ಲಿ ಪತ್ತೆ ಹಚ್ಚಿ ನೌಕರನಿಗೆ ಜಾಡಿಸಿದ್ದು ವಿಶೇಷವಾಗಿತ್ತು.
ನಾನು ನನಗೆ ಈ ಪ್ರತಿ ಬಂದಾಗ ನನ್ನನ್ನ ಸಂಪರ್ಕಿಸಿ ಎಂದು ನಿನಗೆ ಹೇಳಿದ್ದೆ. ಆದರೆ ಸಾರ್ವಜನಿಕರು ಅವರ ಕೆಲಸ ಬಿಟ್ಟು ನನ್ನ ಹತ್ತಿರ ಬರಬೇಕಿತ್ತಾ? ಎಂದರು.
ನಾನು ಕಟ್ಟಿರುವ ಕಂದಾಯ ಹೋಲಿಕೆಯಾಗದ ಬಗ್ಗೆ ನಿನಗೆ ಕೇಳಿ ಉಳಿದದ್ದನ್ನ ಕಟ್ಟಿಸಿಕೊಂಡು ಮುಂದುವರೆಸಿ ಅಂತ ನಿಮಗೆ ಹೇಳಬೇಕಿತ್ತು., ಇನ್ಮುಂದೆ ಸಾರ್ವಜನಿಕರು ಸಮಸ್ಸೆ ಹೇಳಲು ಬಂದರೆ ನಾ ನಿಮ್ಮ ಪಾಲಿಗೆ ಬದಲಾಗಬೇಕಾಗುತ್ತೆ. ಇದೇ ಲಾಸ್ಟ್ ಎಂದು ಎಚ್ಚರಿಸಿದ್ದರಲ್ಲಿ ಅವರ ಕೆಲಸ ತಗೆಯುವ, ಸರ್ವರ ಕಾರ್ಯ ಸಲೀಸಾಗಿ, ಅತಿ ಬೇಗನೆ ಮಾಡುವ ಉದ್ದೇಶ ಸ್ಪಷ್ಟವಾಗಿತ್ತು.