ಸಾಗರ : ವಿಶ್ವವಿಖ್ಯಾತ ಜೋಗ ಜಪಾತಕ್ಕೆ ಚಲನಚಿತ್ರ ನಟ ಡಾ. ಶಿವರಾಜ ಕುಮಾರ್, ಪತ್ನಿ ಗೀತಾ ಶಿವರಾಜ ಕುಮಾರ್ ಮತ್ತವರ ಕುಟುಂಬ

ಭೇಟಿ ನೀಡಿತ್ತು. ಶಿವರಾಜ ಕುಮಾರ್ ಕುಟುಂಬಕ್ಕೆ ಶಾಸಕ ಹಾಗೂ

ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ್, ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ರಾಜು, ಕಲಗೋಡು ರತ್ನಾಕರ್ ಇನ್ನಿತರರು ಹಾಜರಿದ್ದರು.