ಸಾಗರ : ಇಲ್ಲಿನ ಹೊಳೆಬಾಗಿಲು ಲಾಂಚ್ ಗುರುವಾರ ಸಂಜೆ ಸ್ಟೇರಿಂಗ್ ಸೆಂಟರ್ ಲಾಕ್ ಕಟ್ಟಾಗಿ ನಡುನೀರಿನಲ್ಲಿ ಕೆಲಕಾಲ ನಿಂತು ಪ್ರಯಾಣಿಕರು ಭಯಗೊಂಡ ಘಟನೆ ನಡೆದಿದೆ.

ಆಂಬಾರಗೋಡ್ಲು ಕಳಸವಳ್ಳಿ ನಡುವೆ ಚಲಿಸುವ ಲಾಂಚ್ ನಡುನೀರಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ನಿಂತು ಕೊಂಡಿತು. ವಿಪರೀತ ಗಾಳಿ ಮತ್ತು ಮಳೆ ಬರುತ್ತಿದ್ದರಿಂದ ಲಾಂಚ್ ಗಾಳಿಗೆ ಎಲ್ಲಿಯೋ ತೇಲಿ ಹೋಗುವ ಸ್ಥಿತಿ ಸಹ ನಿರ್ಮಾಣವಾಗಿತ್ತು.

ಲಾಂಚ್ನಲ್ಲಿ ನೂರಾರು ಪ್ರಯಾಣಿಕರು, ವಾಹನಗಳು ತುಂಬಿದ್ದವು. ಸ್ಟೇರಿಂಗ್ ಸೆಂಟರ್ ಲಾಕ್ ಕಟ್ ಆಗಿದ್ದರಿಂದ ಲಾಂಚ್ ನಡುನೀರಿನಲ್ಲಿ ನಿಂತು ಕೊಂಡಿತು. ತಕ್ಷಣ ಸೇತುವೆ ಕೆಲಸಕ್ಕೆ ಬಂದಿದ್ದ ಕಂಪನಿಯ ಇನ್ನೊಂದು ಲಾಂಚ್ ತಂದು ಕೆಟ್ಟು ನಿಂತ ಲಾಂಚನ್ನು ದಡಕ್ಕೆ ಸೇರಿಸಲು ಯಶಸ್ವಿಯಾದರು. ಇಲ್ಲವಾದಲ್ಲಿ ಲಾಂಚ್ ಸೇತುವೆ ಕಂಬಕ್ಕೆ ಹೋಗಿ ಡಿಕ್ಕಿ ಹೊಡೆಯುತಿತ್ತು.

ಲಾಂಚ್ನಿಂದ ತಿಂಗಳಿಗೆ ಹೆಚ್ಚು ಆದಾಯವಿದ್ದರೂ ನಿರ್ವಹಣೆಗೆ ಹೆಚ್ಚಿನ ಹಣ ಬಿಡುಗಡೆ ಮಾಡುತ್ತಿಲ್ಲ. ಲಾಂಚ್ನಲ್ಲಿ ಅರೆಕಾಲಿಕ ನೌಕರರೆ ಹೆಚ್ಚು ಇದ್ದು, ಅವರಿಗೆ ವೇತನ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಲಾಂಚಿನ ಸ್ಟೇರಿಂಗ್ ಹಾಳಾಗಿ ವಾರ ಕಳೆದಿತ್ತು. ಆದರೆ ರಿಪೇರಿ ಮಾಡಿಸಿರಲಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಇನ್ನಾದರೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. (ಫೋಟೋ-