ಶಿವಮೊಗ್ಗ,ಜು.03:
ಇಲ್ಲಿನ ಮಹಾನಗರ ಪಾಲಿಕೆಗೆ ನೂತನ ಅಯ್ತುಕ್ತರಾದ ಮಾಯಣ್ಣಗೌಡರಿಂದ ಪಾಲಿಕೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇಂದು ಪಾಲಿಕೆಯ ಕಂದಾಯ ವಲಯ 2 ಕ್ಕೆ ದಿಢೀರ್ ಭೇಟಿ ನೀಡಿ ಇಲ್ಲಿನ ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇ ಸ್ವತ್ತು ಅಥವಾ ಇ ಅಸ್ತಿ ಖಾತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಾರ್ವಜನಿಕರು ಪಾಲಿಕೆಗೆ ಬೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳಾಗಲೀ

ಸಾರ್ವಜನಿಕರೊಂದಿಗೆ ಪ್ರೀತಿಯಿಂದ ಗೌರವದಿಂದ ನಡೆದುಕೊಳ್ಳಿ ಯಾವುದೇ ಮಾನಸಿಕ ಕಿರಿಕಿರಿ ಉಂಟಾಗದಂತೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಎಂದು ಪಾಲಿಕೆಯ ಅಯುಕ್ತ ಮಾಯಣ್ಣಗೌಡರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಪಾಲಿಕೆಯ ಅಯಕ್ತರಾಗಿದ್ದ ಕವಿತಾಯೋಗಪ್ಪನವರ್ ಅವಧಿಯಲ್ಲಿ ಸಾರ್ವಜನಿಕರು
ರಾಜಕೀಯ ನಾಯಕರು, ಹಾಗೂ ವಿವಿಧ ಸಂಘಟನೆಗಳು ಕಂದಾಯ ವಿಭಾಗದಲ್ಲಿ ಲಂಚದ ಹಾವಳಿ ತಾಂಡವವಾಡುತ್ತಿದ್ದೆ ಎಂದು ಅರೋಪಗಳನ್ನು ಕೂಡ ಮಾಡಿದ್ದರು.
ಸಾರ್ವಜನಿಕರ ಗೋಳು ನೋಡಲಾಗದೇ ಲೋಕಾಯುಕ್ತರು ಕೂಡ ಪಾಲಿಕೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಜಾಡಿಸಿದ್ದರು. ಸಾರ್ವಜನಿಕರು ಕೂಡ ಪಾಲಿಕೆಯ ಕಂದಾಯ ವಿಭಾಗದಲ್ಲಿ ನಡೆಯುತ್ತಿದ್ದ ಕೆಲ ವ್ಯವಹಾರಗಳಿಗೇ ಬೇಸತ್ತು ಅಲ್ಲಿನ ಕೆಲ ಅಧಿಕಾರಿಗಳಿಗೆ ಶಾಪ ಹಾಕಿದ್ದು ಉಂಟು.

ನೂತನ ಅಯುಕ್ತರಾದ ಮಾಯಣ್ಣಗೌಡರಿಂದ ಇನ್ಮುಂದೆ ಪಾಲಿಕೆಯ ಕಂದಾಯ ವಿಭಾಗದ ವ್ಯವಸ್ಥೆ ಬದಲಾವಣೆಯಾಗಬಹುದೆಂದು ಸಾರ್ವಜನಿಕರು ಬಯಸಿದ್ದಾರೆ. ಅದರಂತೆ ಗೌಡರ ಮೊದಲ ಕಾರ್ಯ ಆರಂಭಗೊಂಡಿದೆ.