ಶಿವಮೊಗ್ಗ : ತಾಲ್ಲೂಕಿನ ಹಾಡೋನಹಳ್ಳಿ ಹಾಗೂ ಹೊಳಲೂರು ಸಮೀಪದಲ್ಲಿ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿಯಲು ಮುಂದಾಗಿದ್ದು, ಕರಡಿಗಳು ಓಡಾಡುವ ಜಾಗಗಳನ್ನು ಗುರುತಿಸಿ ಬೋನ್ಗಳನ್ನು ಇರಿಸುವ ಕೆಲಸ ಮಾಡಿದ್ದಾರೆ.

ತುಂಗಾ ತರಂಗ ಪತ್ರಿಕೆ ಇಂದು ’ಹಾಡೋನಹಳ್ಳಿಯಲ್ಲಿ ನಾಕೈದು ಕರಡಿಗಳು ಪ್ರತ್ಯಕ್ಷ?!, ಭಯಬೀತರಾದ ಜನತೆ, ಅರಣ್ಯ ಇಲಾಖೆಯವರೇ ಅರ್ಜೆಂಟ್ ಅತ್ತ ಹೋಗ್ರಿ.’ ಎಂಬ ಶೀರ್ಷಿಕೆಯಡಿ ವರದಿಯನ್ನು ಮಾಡಿತ್ತು. ಈ ವರದಿಯನ್ನು ನೋಡಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೋನ್ಗಳನ್ನು ಇರಿಸಿದ್ದಾರೆ.
ಅರಣ್ಯ ಇಲಾಖೆಯ ಪ್ರಕಟಣೆ ಏನು..?
೧) ರಾತ್ರಿಯ ಸಮಯದಲ್ಲಿ ಜನರು ಜಾಸ್ತಿ ಹೊರಗಡೆ ಓಡಾಡದಿರಿ.
೨) ಈ ವ್ಯಾಪ್ತಿಯಲ್ಲಿವ ಜನರು ಸ್ವಲ್ಪ ಜಾಗೃತರಾಗಿ

ಅರಣ್ಯ ಇಲಾಖೆಗೆ ಸಹಕರಿಸಿ, ಭಯಬೀತರಾಗದಿರಿ
ತುಂಗಾ ತರಂಗ ದಿನಪತ್ರಿಕೆ ಸೇರಿದಂತೆ ಸುದ್ದಿಮೂಲಗಳ ಮಾಹಿತಿ ಗಮನಿಸಿ ಅರಣ್ಯ ಇಲಾಖೆ ಜಾಗ್ರತಾ ಅವಸ್ಥೆ ವಹಿಸಿದ್ದು, ಕಾಡಿನಿಂದ ನಾಡಿಗೆ ಬಂದಿರುವ ಕರಡಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆಯನ್ನು ಮಾಡಿದೆ ಜನರು ಯಾವುದೇ ಆತಂಕಕ್ಕೆ ಒಳಪಡದೆ ಅತ್ಯಂತ ಧೈರ್ಯ ಹಾಗೂ ಹೊರಬರದೆ ಕರಡಿಗಳನ್ನು ಹಿಡಿಯುವಿಕೆಗೆ ಸಹಕರಿಸುವಂತೆ ಹೊಳಲೂರಿನ ಬೀಟ್ ಫಾರೆಸ್ಟರ್ ಕೊಟ್ರೇಶ್ ತುಂಗಾ ತರಂಗ ಪತ್ರಿಕೆ ಮೂಲಕ ವಿನಂತಿಸಿದ್ದಾರೆ.