ಶಿವಮೊಗ್ಗ : ನಗರದ ಬಾಲರಾಜ್ ರಸ್ತೆಯಲ್ಲಿರುವ ಲೋಕೋಪಯೋಗಿ ಕಾರ್ಯಪಾಲಕ ಇಂಜಿನೀಯರ್ ಕಚೇರಿ ಆವರಣದಲ್ಲಿರುವ ಬೃಹತ್ ಮರವೊಂದು ಬುಧವಾರ ಸಂಜೆ ಕಡಿತಲೆ ಆಗಿದ್ದು ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಸುಮಾರು ೬೫-೭೦ವರ್ಷ ಹಳೆಯ ಮಳೆ ಮರ (ರೇನ್ ಟ್ರೀ) ಇದಾಗಿದ್ದು ರಸ್ತೆ ರಸ್ತೆ ಕಡೆ ಒಂದು ಬೃಹತ್ ಟೊಂಗೆ ವಾಲಿತ್ತು. ಇನ್ನೊಂದು ಇಲಾಖೆಯ ಕಟ್ಟಡದತ್ತ ವಾಲಿತ್ತು. ಯಾವುದೇ ಸಂದರ್ಭದಲ್ಲಿ ಈ ಟೊಂಗೆಗಳು ಬೀಳುವ ಸಂಭವವಿದ್ದು ಅಪಾಯದ ಮುನ್ಸೂಚನೆ ಇತ್ತು.

ಹಾಗಾಗಿ ಅಪಾಯದ ಟೊಂಗೆಗಳನ್ನಷ್ಟೇ ಕಡಿದಿದ್ದಾಗಿ ಅಧಿಕಾರಿಗಳು ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ.

ನಾವು ಮರದ ಬುಡವನ್ನು ಕಡಿಯಲಿಲ್ಲಿ. ಕಡಿಯುವುದೂ ಇಲ್ಲ. ಟೊಂಗೆ ಮಾತ್ರ ಕಡಿಯಬೇಕಾಗಿತ್ತು. ಕಳೆದ ೧೫ ವರ್ಷದಿಂದ ಅರಣ್ಯ ಇಲಾಖೆ

ಜೊತೆ ಈ ಕುರಿತು ಪತ್ರ ವ್ಯವಹಾರ ನಡೆಸಿದ್ದೆವು. ನಿನ್ನೆ ಅವರೇ ಬಂದು ಟೊಂಗೆ ಕಡಿದು ಹಾಕಿ ಸಂಭವನೀಯ ಅಪಾಯ ತಪ್ಪಿಸಲಾಗಿದೆ ಎಂದರು.