ಶಿವಮೊಗ್ಗ,ಜೂ.20:
ಮೆಗಾನ್ ಆಸ್ಪತ್ರೆ ನಿಜಕ್ಕೂ ನಿತ್ಯ ಸಾವಿರಾರು ರೋಗಿಗಳಿಗೆ ಹೊಸ ಜೀವನ ಕಟ್ಟಿಕೊಡುವ ಆಸ್ಪತ್ರೆ. ಮಾಮೂಲಿಯಾದ ಲಂಚಗುಳಿತನ, ದಿಮಾಕಿನ ಕೆಲ ವೈದ್ಯರು, ನರ್ಸ್ ಗಳು, ಹಾಗೂ ಮ್ಯಾನ್ ಫವರ್ ಏಜೆಸ್ಸಿಯ ಕಾವಲುಗಾರರಿಂದ ಆಸ್ಪತ್ರೆಯ ಸಂಪೂರ್ಣ ವ್ಶವಸ್ಥೆಗೆ ಶಾಪ ತಟ್ಟಿದೆ. ಇಲ್ಲಿ ರೆಕಮೆಂಡ್ ಹಾಗೂ ಕಾಸು ಬಿಚ್ಚಿದರೆ ಭರ್ಜರಿ ಚಿಕಿತ್ಸೆ ದೊರೆಯುತ್ತದೆ ಎಂಬುದಕ್ಕೆ ಕೆಲವೇ ಕೆಲವರು ಕಾರಣರಾಗಿದ್ದಾರೆಂದರೆ ಸುಳ್ಳೇನಲ್ಲ. ಬಹಳಷ್ಟು ಒಳ್ಳೆತನದ ದೇವರಂತ ವೈದ್ಯರಿದ್ದಾರೆ. ನರ್ಸ್ ಗಳೂ ಇದ್ದಾರೆ. ಕೆಲವರಿಂದ ಇವರೂ ಅಪಪ್ರಚಾರ ಹೊರಬೇಕಾಗಿದೆ.
ಜಿಲ್ಲೆಯ ಸರ್ಕಾರಿ ಮೆಗಾನ್ ಅಸ್ಪತ್ರೆ ಎಂದರೆ ಎಷ್ಟೋ ಬಡ ಹಾಗೂ ಮದ್ಯಮ ವರ್ಗದ ರೋಗಿಗಳಿಗೆ ಖಾಸಗಿ ಅಸ್ಪತ್ರೆಗಳಂತೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಅಸ್ಪತ್ರೆಯಾಗಿದೆ.ಅದರೆ ಇತ್ತೀಚಿಗೆ ಈ ಅನ್ ಲೈನ್ಔಷಧಿ ವಿತರಣೆ ಸಾರ್ವಜನಿಕರಿಗೆ ರೋಗಿಗಳಿಗೆ


ಹಾಗೂ ಔಷಧಿ ವಿತರಣಾ ಸಿಬ್ಬಂಧಿಗಳಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ.ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿದ ನಂತರ ಔಷಧಿಗಳನ್ನು ಅನ್ ಲೈನ್ ನಲ್ಲಿ ನಮೂದಿಸಬೇಕಿದೆ. ಅದರೆ ಸರ್ವರ್ ಸಮಸ್ಯೆಯಿಂದ ಅನ್ ಲೈನ್ ನಲ್ಲಿ ನಮೂದಿಸಿಲು ಸಾಧ್ಯವಾಗುತ್ತಿಲ್ಲ.

ಈ ಕಾರಣದಿಂದರೋಗಿಗಳು ಹೃದಯ ಸಂಬಂಧ ಖಾಯಿಲೆ ಇರುವರೋಗಿಗಳು ದಿನವೆಲ್ಲಾ ಸರತಿ ಸಾಲಿನಲ್ಲಿ ನಿಂತರೂ ರೋಗಿಗಳಿಗೆ ಔಷಧಿ ಪಡೆಯಲು ಮಾತ್ರ ಸಾಧ್ಯವಾಗುತ್ತಿಲ್ಲ ಸರ್ಕಾರದ ಈ ಅದೇಶದನ್ವರ ತಪಾಸಣೆ ಮಾಡಿದ ವೈದ್ಯರೇ ಖಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನುಕೇಸ್ ಸೀಟ್ ನಲ್ಲಿ ಬರೆದು ಕಂಪ್ಯೂಟರ್ ದಾಖಲಿಸಬೇಕಿದೆ.ಅನ್ ಲೈನ್ ನಲ್ಲಿ ನವೀಕೃತಗೊಂಡರೆ

ಮಾತ್ರ ಯುಎಚ್ಐಡಿ ಅಧಾರದ ಮೇಲೆ ರೋಗಿಗಳಿಗೆ ಔಷಧಿ ವಿತರಣೆ ಮಾಡುತ್ತಾರೆ.ಒಂದು ವೇಳೆ ತಂತ್ರಂಶದಲ್ಲಿ ದಾಖಲಾಗದಿದ್ದರೆ
ಔಷಧಿ ಕೇಂದ್ರದ ಮುಂದೆ ಅದಷ್ಟೋ ಗಂಟೆಗಳು ಕಾಲ ಕಾದು ನಿಂತರು ಔಷಧಿ ಮಾತ್ರ ದೊರೆಯುವುದಿಲ್ಲ.
ಶಿವಮೊಗ್ಗ ಹಾಗೂ ಹೊರ ಜಿಲ್ಲೆಗಳಿಂದ ಹಳ್ಳಿಗಳಿಂದ್ದ ಪ್ರತಿನಿತ್ಯ ಬರುವ ಸಾವಿರಾರು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ ಅದರೆ ಔಷಧಿಗಳು ವೈದ್ಯರಿಂದ ಈ ಅನ್ ಲೈನ್ ಸರಿಯಾಗಿ ದಾಖಲಾಗದಿದ್ದರೆ ರೋಗಿಗಳು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಎಷ್ಟೋ ರೋಗಿಗಳು ಖಾಸಗಿ ಮೆಡಿಕಲ್ ಗೆ ತೆರಳಿ ಔಷಧಿ ಖರೀದಿಸುತ್ತಿದ್ದಾರೆ ಸರ್ಕಾರದ ಈ ನಿಯಮ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ದೂರದಿಂದ ಬರುವ ಸಾಕಷ್ಟು ರೋಗಿಗಳು ಈ ಅನ್ಲೈನ್ ಔಷಧಿ ವ್ಯವಸ್ಥೆಯಿಂದ ಬೇಸತ್ತು ಹೋಗಿದ್ದಾರೆ .ಹಾಗೂ ಔಷಧಿ ವಿತರಣಾ ಕೇಂದ್ರದಲ್ಲಿ ಸಾಕಷ್ಟು ಸಿಬ್ಬಂದಿಯ ಕೊರತೆ ಇದೆ ಈ ನಿಯಮದಿಂದ ವೈದ್ಯರು ಸಹ ಗೊಂದಲಕ್ಕೆ ಸಿಲುಕುತ್ತಾರೆ.ಈ ನಿಯಮ ಜಾರಿಯಾದ ದಿನದಿಂದ ಅಸ್ಪತ್ರೆ ಯಲ್ಲಿ
ರೋಗಿಗಳು ಔಷಧಿ ವಿತರಣಾ ಸಿಬ್ಬಂದಿಗಳಿಗೆ ದಿನನಿತ್ಯ ವಾಗ್ವಾದ ನಡೆಯುತ್ತಲೇ ಇರುತ್ತದೆ ಎಂದು ಅಸ್ಪತ್ರೆಯ ಸಿಬ್ಬಂಧಿ ತಿಳಿಸಿದರು.
ಈ ನಿಯಮದಿಂದ ಬೇರೆ ಜಿಲ್ಲೆಗಳಿಂದ ಬರುವ ನಮಗೆ ಸರತಿ ಸಾಲಿನಲ್ಲಿ ನಿಂತು ನಿಂತು ಔಷಧಿಗಳು ಸರಿಯಾದ ಸಮಯಕ್ಕೆ ಸಿಗದೇ ಅರೋಗ್ಯದ ಸ್ಥಿತಿಯು ಇನ್ನಷ್ಟು ಗಂಭೀರ ವಾಗುತ್ತಿದೆ ಔಷಧಿ ವಿತರಣೆ ಅನ್ ಲೈನ್ ವ್ಯವಸ್ಥೆ ಬಿಟ್ಟು ಮೊದಲನೇ ವ್ಯವಸ್ಥೆ ಜಾರಿಯಾಗಬೇಕು ಹಾಗೂ ಔಷಧಿ ವಿತರಣಾ ಕೇಂದ್ರದಲ್ಲಿ ಸಿಬ್ವಂದಿಗಳನ್ನು ಇನ್ನು ಹೆಚ್ಚಿಸಬೇಕು.

ಈ ಆನ್ ಲೈನ್ ನಿಯಮದಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಸಾಕಷ್ಟು ಹೊರೆಯಾಗುತ್ತಿದೆ ಅಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಅವರು ಸಂಬಂಧಿಕರು ಅತಂಕ ವ್ಯಕ್ತಪಡಿಸಿದ್ದಾರೆ.ಇನ್ನಾದರೂ ಸರ್ಕಾರ ಅಗಲೀ ಅಥವಾ ಮೇಲಾಧಿಕಾರಿಗಳಾಗಲೀ ರೋಗಿಗಳ ಈ ನೋವುಅಗಲೀ ಗೋಳುಅಗಲೀ ಹಾಗೂ ಸಿಬ್ಬಂದಿಗಳ ಈ ಕೋರಿಕೆಗೆ ಸ್ಪಂದಿಸುತ್ತಾರೋ ಅಥವಾ ಇಲ್ಲವೋ ಎಂದು ಕಾದುನೋಡಬೇಕಿದೆ.
ಅನ್ ಲೈನ್ ಔಷಧಿ ವಿತರಣೆ ವ್ಯವಸ್ಥೆಯಿಂದ ಔಷಧಿಗಳ ಸೋರಿಕೆ ಸಂಪೂರ್ಣ ಬಂದ್ ಅಗಿದೆ
ಸರ್ವರ್ ಸಮಸ್ಯೆ ಎದುರಾಗಿದೆ ಇದನ್ನು ಸರಿಪಡಿಸಲು ಅದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ
ಡಾ.ಟಿ.ಡಿ.ತಿಮ್ಮಪ್ಪ ಅಧೀಕ್ಷಕರು ಮೆಗ್ಗಾನ್ ಆಸ್ಪತ್ರೆ
ಮೊದಲಿನ ಔಷಧಿ ವಿತರಣೆ ವ್ಯವಸ್ಥೆ ಜಾರಿಗೆ ತನ್ನಿ
ಔಷಧಿ ವಿತರಣಾ ಕೇಂದ್ರ ಸೇರಿದಂತೆ ಹೋರರೋಗಿ ನೋಂದಣಿ ವಿಭಾಗದಲ್ಲಿ ಸಿಬ್ಬಂಧಿಗಳನ್ನು ಹೆಚ್ಚಿಸಿ
ಅನ್ ಲೈನ್ ಔಷಧಿ ವಿತರಣೆ ವ್ಯವಸ್ಥೆಯಿಂದ ಸರತಿ ಸಾಲಿನಲ್ಲಿ ನಿಂತು ಬೇಸತ್ತು ಹೋಗಿದ್ದೇವೆ ಸರ್ವರ್ ಸಮಸ್ಯೆಯಿಂದ ಔಷಧಿಗಳು ಸರಿಯಾದ ಸಮಯದಲ್ಲಿ ವೈದ್ಯರಿಂದ ನಮೂದಿಸಲು ಸಾಧ್ಯವಾಗುತ್ತಿಲ್ಲ ಇದ್ದರಿಂದ ತುಂಬಾ ಸಮಸ್ಯೆಯಾಗಿದೆ .
ರೋಗಿ ಹಾಗೂ ಸಂಬಂಧಿಕರು