ಶಿವಮೊಗ್ಗ : ರಾಷ್ಟ್ರಭಕ್ತರ ಬಳಗಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಇಂದು ಹಿಂದುತ್ವದ ಪರವಾಗಿ ಬಂದು ಸೇರಿದ್ದಾರೆ. ಇದು ಕೇವಲ ಟ್ರೇಲರ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ರಾಷ್ಟ್ರಭಕ್ತರ ಬಳಗಕ್ಕೆ ಹಲವರು ಸೇರ್ಪಡೆಯಾಗಲಿದ್ದು, ಪಿಚ್ಚರ್ ಅಬೀ ಬೀ ಬಾಕೀ ಹೈ ಎಂದರು.

ಅವರು ಇಂದು ರಾಷ್ಟ್ರಭಕ್ತರ ಬಳಗಕ್ಕೆ ವಿವಿಧ ಪಕ್ಷಗಳ ಪ್ರಮುಖರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವತ್ತೂ ಪಾಲಿಕೆ ಚುನಾವಣೆ ಬಂದರೂ ರಾಷ್ಟ್ರಭಕ್ತರ ಬಳಗ 35 ಸ್ಥಾನಗಳಲ್ಲಿ ನಿಂತು ಎಲ್ಲಾ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. 100ಕ್ಕೂ 100 ನಮಗೆ ಬಹುಮತ ಸಿಗಲಿದ ಎಂದರು.

ನಾವು ಪ್ರಸ್ತಾವಿಸಿದ ಸಿದ್ಧಾಂತ ಬಿಜೆಪಿಯಲ್ಲಿ ಬರುವವರೆಗೆ ನಾವು ಬಿಜೆಪಿಗೆ ಹೋಗಲ್ಲ. ಕೆಲವರು ರಾಷ್ಟ್ರಭಕ್ತರ ಬಳಗ ಇಲ್ಲವೇ ಇಲ್ಲ. ಅದು ಮುಗಿದ ಅಧ್ಯಾಯ. ಇವತ್ತಲ್ಲ ನಾಳೆ ಈಶ್ವರಪ್ಪ ಬಿಜೆಪಿಗೆ ಸೇರುತ್ತಾರೆ ಎಂದು ಹೇಳುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಲ್ಲಿಂದ ಅಲ್ಲಿಗೆ ಹೋದವರು ಮತ್ತೆ ಮರಳಿದ್ದಾರೆ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ರಾಷ್ಟ್ರಭಕ್ತರ ಬಳಗಕ್ಕೆ ಹಿಂದುತ್ವದ ಕಟ್ಟಾಳುಗಳು ಸೇರಿದ್ದಾರೆ ಎಂದರು.

ನನ್ನ ಮತ್ತು ಬಿ.ಎಸ್. ಯಡಿಯೂರಪ್ಪನವರ ಸಂಬಂಧ ಅಣ್ಣ-ತಮ್ಮಂದಿರ ಸಂಬಂಧ. ನನಗೆ ಹಿರಿಯಣ್ಣ ಇದ್ದಹಾಗೆ. ಹಾಗಂತ ಸ್ನೇಹ, ವಿಶ್ವಾಸ, ರಾಜಕಾರಣ ಎಲ್ಲವೂ ಬೇರೆ ಬೇರೆ. ನನಗೆ ಅನಾರೋಗ್ಯವಾದಾಗ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಅವರ ಮೊಮ್ಮಮಗನ ಮದುವೆಗೆ ನಾನೂ ಕೂಡ ಹೋಗಿ ಶುಭ ಹಾರೈಸಿದ್ದೆ. ಹಾಗಂದ ಮಾತ್ರಕ್ಕೆ ನಾನು ಬಿಜೆಪಿ ಸೇರಿಲ್ಲ. ಒಂದು ಕುಟುಂಬಕ್ಕೆ ಒಂದು ಹುದ್ದೆ ಎಂಬುದು ಮೋದಿಯವರ ನಿಮಯ. ರಾಜ್ಯಾಧ್ಯಕ್ಷರ ಹುದ್ದೆ, ಎಂ.ಪಿ., ಎಂ.ಎಲ್.ಎ. ಎಲ್ಲವೂ ನಿಮ್ಮದೇ ಕುಟುಂಬಕ್ಕೆ ಆದರೆ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಯಾವ ನ್ಯಾಯ ಸಿಗುತ್ತದೆ. ಇಡೀ ರಾಜ್ಯದಲ್ಲಿ ನೊಂದ ಬಿಜೆಪಿ ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ನನ್ನ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಇವತ್ತು ಬಿಜೆಪಿ ಹಿಂದುತ್ವವನ್ನು ಮರೆತುಬಿಟ್ಟಿದೆ. ಈ ಪಕ್ಷದ ಸಮಸ್ಯೆ ಕಲುಷಿತ ವ್ಯವಸ್ಥೆಯಾಗಿದ್ದು, ಶುದ್ಧೀಕರಣ ಆದ ಮೇಲೆ ನಾನು ಬಿಜೆಪಿಗೆ ಸೇರುತ್ತೇನೆ. ಯಾರಿಗೂ ನಾನು ಟಿಕೇಟು ನೀಡುವ ಭರವಸೆ ನೀಡಿಲ್ಲ. ನಾನು ಶಾಸಕನಾಗಿದ್ದಾಗ, ಪ್ರತೀಯೊಂದು ಸಮಾಜಕ್ಕೆ ಅನುದಾನ ನೀಡಿದ್ದೆ. ಯಾವುದೇ ಒಂದು ಸಮಾಜ ನಮ್ಮ ಸಮಾಜಕ್ಕೆ ಈಶ್ವರಪ್ಪನವರು ಸಹಾಯ ಮಾಡಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿಗೆ ಸಿದ್ಧ. ಈಗಿನ ಸರ್ಕಾರ ಒಂದೇ ಒಂದು ರೂ. ಅಭಿವೃದ್ಧಿಗೆ ಬಿಡುಗಡೆಮಾಡಿಲ್ಲ ಎಂದರು.

ಆಶ್ರಯ ಮನೆಗಳಿಗೆ ಬಡವರು ತಮ್ಮ ತಾಳಿಮಾರಿ ಹಣಕಟ್ಟಿ 9 ವರ್ಷವಾದರೂ ಇನ್ನೂ ಅವರಿಗೆ ಮನೆಯ ಬೀಗ ನೀಡಿಲ್ಲ. ಶಾಶ್ವತ ಕುಡಿಯುವ ನೀರು ಮತ್ತು ವಿದ್ಯುತ್ ಒದಗಿಸಲು ಬೇಕಾದ 12 ಕೋಟಿ ರೂ. ಬಿಡುಗಡೆ ಮಾಡುವ ತಾಕತ್ತು ಈ ಸರ್ಕಾರಕ್ಕಿಲ್ಲ. ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಶಿವಮೊಗ್ಗಕ್ಕೆ ಬಂದು ಭಾಷಣಬೀಗಿದ್ದು ಬಿಟ್ಟರೆ ಇದೂವರೆಗೂ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಮುಸಲ್ಮಾನರ ಬೆಂಬಲಿತ ಆಡಳಿತ ನಡೆಯುತ್ತಿದೆ,. ಹಿಂದುತ್ವದ ಕಾರ್ಯಕ್ರಮಕ್ಕೆ ಇಡೀ ರಾಜ್ಯದಲ್ಲಿ ನನ್ನನ್ನು ಕರೆಯುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ತಮ್ಮ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿ, ವಿವಿಧ ಹುದ್ದೆಗಳ ಆಮಿಷವೊಡ್ಡಿದ್ದರು. ಆದರೆ ನಾನು ಅವರಿಗೆ ನೀವು ಹಿಂದುತ್ವದ ಪಕ್ಷವನ್ನಾಗಿ ನಿಮ್ಮ ಪಕ್ಷವನ್ನು ಬದಲಾಯಿಸಿದರೆ ಬರುತ್ತೇನೆ ಎಂದು ತಿರಸ್ಕಾರ ಮಾಡಿದ್ದೆ. ಕುತ್ತಿಗೆ ಕೂಯ್ದರೂ ನಾನು ಬೇರೆ ಪಕ್ಷಕ್ಕೆ ಹೋಗಲ್ಲ. ಜ್ಞಾನಪೀಠ ಪ್ರಶಸ್ತಿ ಮತ್ತು ಪದ್ಮವಿಭೂಷಣ, ತುಳಸಿ ರಾಮಭದ್ರ ಸ್ವಾಮಿಗಳು ಎರಡು ಕಣ್ಣಿಲ್ಲದ ಮಹಾ ಸಂತರು. ಅವರು ಕೂಡ ನನಗೆ ನೀನು ಹಿಂದುತ್ವದ ಪರವಾಗಿದ್ದೀಯಾ, ಮುಂದಿನ ಭಾರಿ ಕರ್ನಾಟಕದಲ್ಲಿ ಹಿಂದುತ್ವದ ಸರ್ಕಾರ ಬರಲಿದ್ದು, ನೀನೇ ಅದರ ನೇತೃತ್ವವಹಿಸಿಕೊಳ್ಳುತ್ತೀಯಾ ಎಂದು ಆಶೀರ್ವದಿಸಿದ್ದಾರೆ.

ಬ್ರೀಗೇಡ್ ಮತ್ತು ರಾಷ್ಟ್ರಭಕ್ತರ ಬಳಗಕ್ಕೆ ರಾಜ್ಯದಲ್ಲಿ ಮುಂದೆ ಉತ್ತಮ ಭವಿಷ್ಯವಿದ್ದು, ಹಿಂದುತ್ವದ ಸರ್ಕಾರವೇ ಮುಂದಿನ ದಿನಗಳಲ್ಲಿ ಅಧಿಕಾಕ್ಕೇರಲಿದೆ ಎಂದರು.

ಈ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಿವಿಧ ಪಕ್ಷಗಳ ಮುಖಂಡರು, ಮಾಜಿ ಕಾರ್ಪೋರೇಟರ್ಗಳಾದ ಸುನೀತಾ ನಾಗರಾಜ್, ಪ್ರಮುಖರಾದ ಸಂಧ್ಯಾ, ರಮೇಶ್, ಸತೀಶ್, ಪ್ರಕಾಶ್, ಚೇತನ್, ಲೋಕೇಶ್, ಮೂರ್ತಿ, ಜಯಮ್ಮ, ಗೀತಮ್ಮ, ಮೋಹನ್ ಶೆಟ್ಟಿ, ಗೋಪಿ, ಬಾಬು, ಶ್ರೇಯಸ್, ರೇಣುಕಮ್ಮ ಮತ್ತಿತರರು ರಾಷ್ಟ್ರಭಕ್ತರ ಬಳಗಕ್ಕೆ ಸೇರ್ಪಡೆಗೊಂಡರು.