ಶಿವಮೊಗ್ಗ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ಐಏನ್ಟಿಯುಸಿ ವತಿಯಿಂದ ಇಂದು ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ನಗರದ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ನಲ್ಲಿ ಬಾಣಂತಿಯರಿಗೆ ಬ್ರೆಡ್ಡು, ಹಣ್ಣು ವಿತರಿಸಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠ ಮತ್ತು ಕಾಮಾಕ್ಷಿ ಬೀದಿಯಲ್ಲಿನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ಡಿ.ಕೆ. ಶಿವಕುಮಾರ್ ಅವರ 65ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.

ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಒಬ್ಬ ಧೀಮಂತ ನಾಯಕ.ಕಾಂಗ್ರೆಸ್ ಕಾರ್ಯಕರ್ತರ ಒಂದು ಶಕ್ತಿ. ಅವರ ಹೆಸರಿನಲ್ಲೇ ಇಂದು ರಾಜ್ಯದಲ್ಲೆಡೆ ವಿದ್ಯಾರ್ಥಿಗಳು ಮತ್ತು ಯುವಕರ ಪ್ರತಿಭಟನೆ ಚಳುವಳಿ ಸತ್ಯಾಗ್ರಹದಂತಹ ಉತ್ತಮ ಹೋರಾಟ ಮಾಡುವ ಮನೋಭಾವನೆ ಬಂದಿದೆ ಎಂದು ಬಣ್ಣಿಸಿದರು.

ಡಿ.ಕೆ. ಶಿವಕುಮಾರ್ ಅವರು ಕೇವಲ ರಾಜಕೀಯವಾಗಿ ಅಲ್ಲದೆ ಸಾಮಾಜಿಕವಾಗಿ ಕೂಡ ಜನಸೇವೆ ಮಾಡುತ್ತಾ ಬಂದಿದ್ದು, ಕೊರೋನ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿಗಳಿಗೆ ಬೆಲೆ ಸಿಗುವಂತೆ ಮಾಡಿದ್ದರು. ಆಗ ಜನರು ಮನೆಯಿಂದ ಹೊರಗಡೆ ಬರದೇ ತರಕಾರಿ ಕೊಳ್ಳುವವರೆ ಇರಲಿಲ್ಲ. ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ತಮ್ಮ ಕೈಯಿಂದ ಹಣಕೊಟ್ಟು ಆ ತರಕಾರಿಗಳನ್ನು ಕೊಂಡುಕೊಂಡು ಮನೆಯಿಂದ ಹೊರ ಬರದ ಜನರಿಗೆ ಹಂಚಿದ್ದರು. ಇದು ಅವರ ಜನಪರ ಕಾಳಜಿಗೆ ಸಾಕ್ಷಿ ಎಂದರು.

ಡಿ.ಕೆ. ಶಿವಕುಮಾರ್ ಅವರು ನಾಡಿನ ರೈತನ ಪಾಲಿಗೆ ಆಶಾಕಿರಣವಾಗಿದ್ದಾರೆ. ಇಂತಹ ನಾಯಕ ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವುದು ರಾಜ್ಯದ ಬಹಳಷ್ಟು ಕಾರ್ಯಕರ್ತರ ಆಸೆ. ಪ್ರತಿ ಬಾರಿಯೂ ರಾಜ್ಯದಲ್ಲಿ ಮಳೆಯಾಗದಿದ್ದಾಗ ಬೇಗನೆ ಸಮೃದ್ಧಿಯಾಗಿ ಮಳೆ ಬರಲೆಂದು ಋಷ್ಯಶೃಂಗದ ಶೃಂಗೇರಿಗೆ ಬಂದು ಪೂಜೆ ಮಾಡಿಸಿ ಮಳೆ ದೇವರಿಗೆ ಬೇಡುವ ಇಂತಹ ವ್ಯಕ್ತಿಯು ನಿಜವಾಗ್ಲೂ ಇವರ ಸಮಾಜ ಸೇವೆ ತುಂಬಾ ಅವಶ್ಯಕತೆ ಇದೆ. ಆದ್ದರಿಂದ ಡಿಕೆ ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲೆಂದು ಆಶಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾರ್ಥಿಸಲಾಯಿತು ಎಂದು
ಈ ಸಂದರ್ಭದಲ್ಲಿ ಜಿಲ್ಲಾ ಐಎನ್ಟಿಯುಸಿ ಮಹಿಳಾ ಅಧ್ಯಕ್ಷ ಕವಿತಾ ರಾಘವೇಂದ್ರ, ಜಿಲ್ಲಾ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಎಂ. ಕುಮಾರ್, ಆಶ್ರಯ ಸಮಿತಿ ಸದಸ್ಯ ಮುನ್ನ, ರಾಜ್ಯ ಕೆಪಿಸಿಸಿ ಸಂಯೋಜಕ ರಾದ ಕವಿತಾ ತೋಟನವರ್, ಮುಖಂಡರಾದ ವಿಠಲಾಪುರ ನವೀನ್, ರಮೇಶ್, ಮುಜಮಿಲ್, ದಯಾನಂದ, ಕವಿತಾ ಶ್ರೀನಿವಾಸ್ ಸೇರಿದಂತೆ ಮುಂತಾದವರು ಹಾಜರಿದ್ದರು.