ಸಾಗರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ
ಉAಟಾಗಿರುವ ಸಮಸ್ಯೆಗಳ ಕುರಿತು ಅತೀ ಶೀಘ್ರದಲ್ಲಿ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಇಂದು ಸಾಗರದ ಕಾಗೋಡ ತಿಮ್ಮಪ್ಪ ಅವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅರಣ್ಯಭೂಮಿ ಮಂಜೂರಿಯಲ್ಲಿ ಉಂಟಾಗಿರುವ ಗೊಂದಲದ ಕುರಿತು ಅವರ ಗಮನಕ್ಕೆ ತಂದಾಗ ಅವರು ಮೇಲಿನಂತೆ ಹೇೆಳಿದರು ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ಅನುಷ್ಠಾನದಲ್ಲಿ ಪದೇ ಪದೇ ವೈಫÀಲ್ಯವಾಗುತ್ತಿರುವುದು, ಕಾನೂನು ವ್ಯತಿರಿಕ್ತವಾಗಿ ಮತ್ತು ಕಾನೂನು ವಿಧಿ ವಿಧಾನ ಅನುಸರಿಸದೇ ಅರ್ಜಿಗಳನ್ನ ಪುನರ್ ಪರಿಶೀಲಿಸುವುದರಿಂದ ಅರಣ್ಯ ಭೂಮಿ ಮಂಜೂರಿ ಪ್ರಕ್ರಿಯೆ ಗೊಂದಲಕ್ಕೆ ಕಾರಣವಾಗಿದೆ ಎಂದು ಚರ್ಚೆಯ ಸಂದರ್ಭದಲ್ಲಿ ಚರ್ಚಿಸಿದ ನಂತರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಹಕ್ಕು ಸಮಿತಿಗಳು ೧೯೩೦ ರ ಪೂರ್ವದ ವಯಕ್ತಿಕ ದಾಖಲೆಗಳನ್ನ ಅರಣ್ಯವಾಸಿಗಳಿಂದ ಕಾನೂನಿಗೆ ವಿರುಧ್ದವಾಗಿ ಅಪೇಕ್ಷೀಸುವುದು ಮತ್ತು ನಾಮ ನಿರ್ಧೇಶನ ಸದಸ್ಯರ ಅನುಪ ಸ್ಥಿತಿಯಲ್ಲಿ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗುತ್ತಿರುವುದು ಕಾನೂನು ಅನುಷ್ಠಾನದಲ್ಲಿ
ಕಾನೂನು ಅರ್ಥ್ಯಸುವಿಕೊಲ್ಲುವುದು ಅವಶ್ಯ:
ಅರಣ್ಯವಾಸಿಗಳ ಸಮಸ್ಯೆಗಳನ್ನ ಈಡೇರಿಸುವಲ್ಲಿ ಕಾನೂನು ಅರಣ್ಯವಾಸಿಗಳ ಪರವಾಗಿ ಇದ್ದಾಗಲೂ, ಕಾನೂನು ಅರ್ಥ್ಯಸುವಿಕೆಯಲ್ಲಿ ಜನ ಪ್ರತಿನಿಧಿಗಳ ಗಂಭೀರ ಚಿಂತನೆ ಅವಶ್ಯ. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಸಲಹೇ ನೀಡಿದರು.