ಶಿವಮೊಗ್ಗ, ಮೇ.14 : ನಗರದ ರವೀಂದ್ರ ನಗರ ಶ್ರೀ ಪ್ರಸನ್ನಗಣಪತಿ (ಬಲಮುರಿ) ದೇವಾಲಯದ 52ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 30 ರ ಶುಕ್ರವಾರದಂದು ಶ್ರೀ ಪ್ರಸನ್ನ ಗಣಪತಿಗೆ ಬೆಳಿಗ್ಗೆ 8.30 ಗಂಟೆಯಿಂದ ಮಹಾಗಣಪತಿ ಹೋಮ, ಬ್ರಹ್ಮ ಕಲಶಾಭಿಷೇಕ, ನವಗ್ರಹ ಹೋಮ

ಹಾಗೂ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ, 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, 12:30ಕ್ಕೆ ಮಹಾಪ್ರಸಾದ ವಿನಿಯೋಗ

ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮೇ 31 ರ ಸೋಮವಾರ ಬೆಳಗ್ಗೆ 8.30 ಕ್ಕೆ ನಾಗಪ್ರತಿಷ್ಠಾಂಗ ಹೋಮ, ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಎರಡೂ ಧಾರ್ಮಿಕ

ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಹಾಗಣಪತಿ ಮತ್ತು ಶ್ರೀ ನಾಗದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ದತ್ತಿ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಎನ್.ಉಮಾಪತಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.