ಕಳೆದ ಬಾರಿ ಅಂಕಣ-43


ಸಾಮಾಜಿಕ ಜಾಲತಾಣದ ಚಿತ್ರಕೃಪೆ
ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಅಲ್ಲ. ಯಾರೋ ಒಬ್ಬ ಹೆಣ್ಣು ಸಹಜತೆಯ ನಡುವೆ ಅಸಹಜತೆ ಮೂಡಿಸಿಕೊಂಡರೆ ಎಲ್ಲಾ ಹೆಣ್ಣು ಮಕ್ಕಳು ಅದೇ ರೀತಿ ಇರುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆ ನಮ್ಮ ನಡುವೆ ಕೆಲವರಿಗೆ ಬೆಳೆಯದಿರುವುದು ನಿಜಕ್ಕೂ ದುರಂತದ ಹಾಗೂ ಮುಂದಿನ ಅವಘಡಗಳ ಮೂಲ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
https://tungataranga.com/?p=42165
ಕೈಲಾಗದಿದ್ದರೂ ಮೈ ಪರಚಿಕೊಳ್ತೀರೋ ಪಾಕಿಸ್ಥಾನದ ನೆಗಿಟೀವ್ ಥಿಂಕಿಂಗ್..!/ ನರಿಬುದ್ದಿ ಬಿಡದಿದ್ದರೆ ಚಿಪ್ಪು ಹಿಡಿದು ಬಿಕ್ಷೆ ಬೇಡಬೇಕಾಗುತ್ತೇನೋ?, ಗಜೇಂದ್ರ ಸ್ವಾಮಿ ಅವರ ವಾರದ 45 ನೇ ಅಂಕಣ ಓದಿ
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ https://chat.whatsapp.com/DvWBmQxqpjV906mtKCFNZ5
ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡುತ್ತಾ, ಸಮಾಜದ ಯೋಗ್ಯ ಮನುಷ್ಯರಲ್ಲಿ ನಾವು ಒಬ್ಬರಾಗಿರಬೇಕು ಎಂಬ ಚಿಂತನೆಯಲ್ಲಿ ಬದುಕುವ ನಮ್ಮ ನಡುವಿನ ಬಹಳಷ್ಟು ಜನರ ನಡುವೆ ಕೆಲವೇ ಕೆಲವು ವಿಕೃತ ಮನಸ್ಸುಗಳು ಎಲ್ಲರನ್ನೂ ಒಂದೇ ವರ್ಗಕ್ಕೆ ಸೇರಿಸಿಕೊಂಡು ದೊಡ್ಡ ಹೀರೋ ಪೋಸ್ ಕೊಡಲು ಹೋದರೆ ಏನಾಗುತ್ತದೆ ಎಂಬುದನ್ನು ಸಾಕಷ್ಟು ನಿದರ್ಶನಗಳಲ್ಲಿ ನಾವು ನೋಡಿದ್ದೇವೆ ಅಲ್ಲವೇ?

ಗಂಡಿನಂತೆ ಹೆಣ್ಣು ಸಹ ಈ ಸಮಾಜದ ಒಂದು ಮಹತ್ತರವಾದ ಆಸ್ತಿಯೇ ಹೌದು, ಅವಳಿಗೆ ಅವಳದೇ ಆದ ಕುಟುಂಬ ಸಂಬಂಧಿಕರು, ಬಂಧು ಬಳಗ ಅತಿ ಹೆಚ್ಚು ಪ್ರೀತಿಯ ಆಸ್ತಿಯಾಗಿರುತ್ತದೆ.
ಪುರುಷ ತನ್ನ ಬಂಧು ಬಳಗದ ಜೊತೆ ಸಮಾಜದ ಚೌಕಟ್ಟಿನೊಳಗೆ ಗುರುತಿಸಿಕೊಳ್ಳುವುದು ವಾಡಿಕೆ. ಹಾಗೆಯೇ ಇರುವ ಹೆಣ್ಣು ಮಕ್ಕಳಿಗೆ ಸುಖಾಸುಮ್ಮನೆ ಕಿರಿಕಿರಿ ನೀಡಿದರೆ ನೀನು ಹೀಗೆ ಮಾಡಬಾರದು., ಇವರನ್ನು ಮಾತನಾಡಿಸಬಾರದು, ಇವರ ಜೊತೆ ಓಡಾಡಬಾರದು ಎಂದು ಮನೆಯ, ಮನದ ಯಜಮಾನನ ತರ ಯಾವನೋ ಬೀದಿಯಲ್ಲಿ ಹೋಗುವವನು ಹೇಳಿದಾಗ ಆ ಮುಗ್ಧ ಮನದ ಹೆಣ್ಣು ಹೇಗೆ ತಾನೇ ಎಷ್ಟು ದಿನ ಇದನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯ.

ಹೆಣ್ಣು ತಿರುಗಿ ಬಿದ್ದರೆ ಚಂಡಿ ಚಾಮುಂಡಿ ಆಗುತ್ತಾಳೆ ಎಂಬ ಸಣ್ಣ ಪರಿಜ್ಞಾನ ಇಲ್ಲದ ಕೆಲವು ವಿಕೃತ ಮನಸ್ಸುಗಳು ಬೆದರಿಸುವ ಗೊಂಬೆ ಎಂದುಕೊಂಡು ಇನ್ನಿಲ್ಲದ ಆಟವಾಡುತ್ತಿದ್ದರೆ ಜನರದರೇ, ಗೂಸಾ ಬೀಳುತ್ತದೆ, ಬಿದ್ದಿರುತ್ತದೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ ಕಾಣುತ್ತೇವೆ ಅಲ್ಲವೇ?
(ಈ ಬರಹ ಯಾವುದೇ ಹೆಣ್ಣುಮಕ್ಕಳನ್ನು ಉದ್ದೇಶಿಸಿ ಬರೆದಿಲ್ಲ, ಸಮಾಜದ ನಮ್ಮ ನಡುವಿನ ವಿಕೃತ ಮನಸಿನವರಿಗೆ ಸಮಾಜಪ್ರಜ್ಞೆ ಮೂಡಿಸುವ ಪ್ರಯತ್ನವಷ್ಟೆ- ಗಜೇಂದ್ರ ಸ್ವಾಮಿ)