ಶಿವಮೊಗ್ಗ : ಪಾಕಿಸ್ತಾನದಲ್ಲಿನ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿರುವುದಕ್ಕೆ ಪೆಹಲ್ಗಾಂ ಉಗ್ರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವುದರ ಮೂಲಕ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ಎಲ್ಲದಕ್ಕೂ ಸೂಕ್ತ ಸಮಯ ಬಂದೇ ಬರುತ್ತದೆ. ನಾವು ಕಾಯಬೇಕು. ನಮ್ಮನ್ನು ಬಿಟ್ಟು ಹೋಗಿರುವ ಮಂಜುನಾಥ್ ಮತ್ತೆ ಬರುವುದಿಲ್ಲ. ಆದರೆ ಪಾಕಿಸ್ತಾನದಲ್ಲಿನ ಉಗ್ರ ಶಿಬಿರದ ಮೇಲೆ ದಾಳಿ ನಡೆಸುವುದರ ಮೂಲಕ ಭಾರತೀಯ ಸೇನೆ ತಕ್ಕ ಉತ್ತರವನ್ನೇ ನೀಡಿದೆ.

ಇದರಿಂದ ನಮ್ಮ ಕುಟುಂಬಕ್ಕೆ ನೆಮ್ಮದಿ ಸಿಕ್ಕಿದೆ. ದುಃಖದಲ್ಲಿದ್ದರೂ ಇಂದೊಂದು ಸಂತೋಷದ ಸಂಗತಿ ಎಂದು ಹೇಳಿದರು.