ಶಿವಮೊಗ್ಗ, ಮೇ.3:
ರಾಜ್ಯಾದ್ಯಂತ ಇಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲೆ ನಾಲ್ಕನೇ (82.29) ಸ್ಥಾನ ಪಡೆಯುವ ಮೂಲಕ ಉತ್ತಮ ಶ್ರೇಣಿಗೆಯಲ್ಲಿ ಇರುವುದು ವಿಶೇಷ.

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಪರೀಕ್ಷಾ ಪಲಿತಾಂಶದ ವಿವರವನ್ನು ನೀಡಿದರು.

ರಾಜ್ಯದಲ್ಲಿ ಈ ಬಾರಿ 66. 14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ ಶಿವಮೊಗ್ಗ ರಾಮಕೃಷ್ಣ ಶಾಲೆಯ ವಿದ್ಯಾ ಕುಲಕರ್ಣಿ ಅವರು 625 ಅಂಕ ಪಡೆಯುವ ಮೂಲಕ ರಾಜ್ಯದ ಪ್ರಥಮ ಸ್ಥಾನದಲ್ಲಿ ಹೆಸರು ಮಾಡಿದ್ದಾರೆ ಅಂತೇ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಮತ್ತೊಂದು ಶಾಲೆಯ ವಿದ್ಯಾರ್ಥಿನಿ ನಮನ ಎಂಬುದು

ವಿಶೇಷವೇ ಹೌದು. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಕಲ್ಬುರ್ಗಿ ಕೊನೆಯ ಸ್ಥಾನ ಪಡೆದಿದೆ ಒಟ್ಟಾರೆ ವಿದ್ಯಾರ್ಥಿಗಳ ಸಾಧನೆ

ವಿಶೇಷವಾಗಿದ್ದು ಸರ್ಕಾರಿ ಶಾಲೆಗಳ ಸಾಧನೆಯೂ ಸಹ ಗಮನಾರ್ಧವಾಗಿದೆ ಎಂಬುದು ಮಧು ಬಂಗಾರಪ್ಪ ಅವರ ಅಭಿಪ್ರಾಯ ಉತ್ತೇಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿರುವ ಮಧು ಬಂಗಾರಪ್ಪ ಅವರು ಅನುತ್ತೀರ್ಣ ವಿದ್ಯಾರ್ಥಿಗಳು ಗಾಬರಿಗೊಳ್ಳದೆ ಸದ್ಯದಲ್ಲೇ ನಡೆದಿರುವ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಕರೆ ನೀಡಿದರು