ಶಿವಮೊಗ್ಗ,ಮೇ.01: ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ಮೃತರಾದ ಕುಟುಂಬಗಳಿಗೆ ತಲಾ ಒಂದು ಕೋಟಿ ನೀಡಬೇಕು ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದೆ.

ಕಾಶ್ಮೀರದ ಫಹಲ್ಘಾಮ್ನಲ್ಲಿ ಭಯೋತ್ಪಾದಕರ ಗುಂಡಿಗೆ ಸುಮಾರು 28 ಜನರು ಮೃತರಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಹುಡುಕಿ ಶಿಕ್ಷೆ ನೀಡಬೇಕು. ಮತ್ತೆ ಮತ್ತೆ ಇಂತ ಘಟನೆಗಳು ಮರುಕಳಿಸಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮೃತಪಟ್ಟ ಎಲ್ಲರಿಗೂ ನಮ್ಮ ಸಂಘಟನೆ ಸಂತಾಪ ಸೂಚಿಸುತ್ತದೆ ಎಂದು ಖಂಡಿಸುತ್ತದೆ. ಮೃತರ ಕುಟುಂಬಗಳಿಗೆ ಪರಿಹಾರವಾಗಿ 1 ಕೋಟಿ ರೂ. ನೀಡುವುದರ ಜೊತೆಗೆ ಅವರ ಮಕ್ಕಳ ವಿಧ್ಯಾಬ್ಯಾಸದ ಜವಾಬ್ದಾರಿಯನ್ನು ಸರ್ಕಾರಗಳೇ ಹೊರಬೇಕು.

ಮೃತಪಟ್ಟ ವ್ಯಕ್ತಿಯ ಕುಟುಂಬಗಳು ಇನ್ನೂ ಸಂಕಟಗಳಿಂದ ಹೊರ ಬಂದಿಲ್ಲ. ಅನೇಕರಿಗೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ಕೆಲವು ರಾಜ್ಯಗಳು ತಮಗೆ ಇಷ್ಟಬಂದುಷ್ಟು ಪರಿಹಾರ ಘೋಷಿಸಿವೆ ನಿಜ. ಆದರೆ ಆ ಪರಿಹಾರ ಅತ್ಯಂತ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಮೃತಪಟ್ಟ ಕುಟುಂಬಗಳಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಲಾಯರ್ಸ್ ಗಿಲ್ಡ್ನ ಅಧ್ಯಕ್ಷ ಕೆ.ಪಿ.ಶ್ರೀಪಾಲ್, ವಿಜಯ್ಕುಮಾರ್, ಅನಿಸ್ ಪಾಷ್, ಶೇರಾಜ್ ಸಿದ್ದಿಕ್ ಸೇರಿದಂತೆ ಮುಂತಾದವರಿದ್ದರು.