ಶಿವಮೊಗ್ಗ: ಶಿವಮೊಗ್ಗ ಬಸವ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ಬಸವ ಜಯಂತಿ ಆಚರಿಸಲಾಯಿತು.
ಬಸವ ಕೇಂದ್ರ ಇರುವ ವೆಂಕಟೇಶ ನಗರದ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರರ ಪುತ್ಥಳಿಯ ಪಲ್ಲಕ್ಕಿ ಉತ್ಸವ ಮಾಡಲಾಯಿತು. ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಬೆಳವಾಡಿ ಭಜನಾ ತಂಡದ ಕಲಾವಿದರ ಭಜನೆ ವಿಶೇಷವಾಗಿ ಗಮನ ಸೆಳೆಯಿತು.

ನಂತರ ಬಸವ ಕೇಂದ್ರದಲ್ಲಿ ನೂರಾಎಂಟು ಬಸವ ನಾಮಾವಳಿ ಹೇಳಿ ಬಸವೇಶ್ವರರನ್ನು ಪೂಜಿಸಲಾಯಿತು.
ಕಾಯಕ ಯೋಗಿಗಳಾದ ಪೌರಕಾರ್ಮಿರನ್ನು ಸನ್ಮಾನಿಸಲಾಯಿತು.

ನಂತರ ರಕ್ತಾಮೃತ ದಾಸೋಹವನ್ನು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬೆನಕಪ್ಪ, ಯೋಗೀಶ್, ಮಹಾರುದ್ರ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.
ಅಂಬಲಿ ದಾಸೋಹ

ಬಸವ ಜಯಂತಿ ಅಂಗವಾಗಿ ನಗರದ ಹದಿನೈದಕ್ಕೂ ಹೆಚ್ಚು ಸ್ಥಳಗಳಲ್ಲಿ ಅಂಬಲಿ ದಾಸೋಹ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ಕೆ ಶರಣ ಸಾಹಿತ್ಯ ಪರಿಷತ್, ಅಕ್ಕನ ಬಳಗ, ಕದಳಿ ವೇದಿಕೆ, ವೀರಶೈವ ಯುವ ಬಳಗ, ಲಿಂಗಾಯತ ವೀರಶೈವ ಸಮಾಜ ಸೇರಿ ಹಲವು ಸಂಘಟನೆಗಳು ಕೈ ಜೋಡಿಸಿದ್ದವು