ವಿಜ್ಞಾನ, ಶಿಕ್ಷಣ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಕೆ. ಕಸ್ತೂರಿ ರಂಗನ್ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ನಿಧನ ದೇಶಕ್ಕೆ ತುಂಬಲಾರದ ನ? ಎಂದು ಖ್ಯಾತ ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಅವರು ಭಾನುವಾರ ಪರ್ಯಾವರಣ ಟ್ರಸ್ಟ್ ವತಿಯಿಂದ ಹೊಯ್ಸಳ ಫೌಂಡೇಶನ್ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಾ, ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹದ ಯೋಜನಾ ನಿರ್ದೇಶಕರಾಗಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ ಎಂದು ನುಡಿದರು .ಬೆಂಗಳೂರಿನ ನ್ಯಾ?ನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸ್ ನ ನಿರ್ದೇಶಕರಾಗಿ, ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡಿದ್ದಾರೆ. ಪಶ್ಚಿಮ ಘಟ್ಟ ಸಂಬಂಧಿಸಿದಂತೆ ಕಸ್ತೂರಿ ರಂಗನ್ ಸಮಿತಿ ಅಧ್ಯಕ್ಷರಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಪರಿಸರ ಕ್ಷೇತ್ರದಲ್ಲಿಯೂ ಶ್ರಮವಹಿಸಿದ್ದಾರೆ. ಈ ವರದಿಯಲ್ಲಿನ ಅಂಶಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿದ್ದು ಹಾಗೂ ಜನರ ಬದುಕಿಗೆ ಮಾರಕವಾಗುವ ಅಂಶಗಳು ಅಡಕವಾಗಿಲ್ಲ ಎಂದು ಜನರಿಗೆ ಮನನ ಮಾಡಿಸಿ ಸರ್ಕಾರವು ವರದಿಯನ್ನು ಅನು?ನಗೊಳಿಸಿದರೆ ಅದೇ ಈ ಮಹಾನ್ ವ್ಯಕ್ತಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಹಾಗೂ ಗೌರವ ಎಂದು ನುಡಿದರು.

ಪರಿಸರ ತಜ್ಞ ಪ್ರೊ. ಶ್ರೀಪತಿ ಎಲ್.ಕೆ. ಮಾತನಾಡಿ ಇಸ್ರೋ ಯೋಜನೆಗಳ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಡಾ. ಕಸ್ತೂರಿ ರಂಗನ್ ರವರು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಯಲ್ಲಿ ಮೂಲಭೂತ ಮಹತ್ತರ ಬದಲಾವಣೆ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣ ಹಾಗೂ ಕೌಶಲ್ಯಾದಾರಿತ ಶಿಕ್ಷಣದಲ್ಲಿ ಇವರ ಸಲಹೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಇಂತಹ ಬಹುಮುಖ ಪ್ರತಿಭೆ ವ್ಯಕ್ತಿ ಯನ್ನು ದೇಶ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ನಗರಸಭಾ ಮಾಜಿ ಅಧ್ಯಕ್ಷ ಎಂ. ಶಂಕರ್ ರವರು ಕಸ್ತೂರಿ ರಂಗನ್ ರವರು ಪದ್ಮಶ್ರೀ, ಪದ್ಮಭೂ?ಣ ಮತ್ತು ಪದ್ಮವಿಭೂ?ಣ ಹೀಗೆ ಮೂರು ಪದ್ಮಪ್ರಶಸ್ತಿ ಪುರಸ್ಕೃತರಾದುದಲ್ಲದೆ ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.
ಸಭೆಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಎನ್.ಬಿ.ಮಂಜುನಾಥ್, ತ್ಯಾಗರಾಜ ಮಿತ್ಯಾಂತ, ಬಾಲಕೃ? ನಾಯ್ಡು, ದಿನೇಶ್ ಶೇಟ್, ರವೀಂದ್ರ ಹೊಯ್ಸಳ ಮುಂತಾದವರು ಉಪಸ್ಥಿತರಿದ್ದರು.