ಮೂಟೆಯೊಳಗೆ ಬಂಧಿತವಾದ ದಾಖಲೆಗಳು ಸರಿಯಾಗಿವೆಯೇ?, ಗೋಡನ್ ನಂತಾದ ಕಛೇರಿ!
ಹುಡುಕಾಟದ ವರದಿ-1
ಶಿವಮೊಗ್ಗ, ಏ.28:
ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗವನ್ನು ಮೂರು ವಿಭಾಗಗಳಾಗಿ ಮೂರು ಕಚೇರಿಗಳ ರೂಪದಲ್ಲಿ ತರಲು

ನಿರ್ಧರಿಸಿರುವುದು ಸರಿಯಷ್ಟೇ. ಇದು ನಿಜವಾಗಿಯೂ ಶಿವಮೊಗ್ಗ ನಗರದ ನಾಗರಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವ ಉತ್ತಮ ಮಾರ್ಗ ಎಂದರೆ ತಪ್ಪಾಗಲಿಕ್ಕಿಲ್ಲ.


ವಲಯ ಮೂರರಲ್ಲಿ ಎರಡನೇ ವಲಯವಾದ ಶೀನಪ್ಪ ಶೆಟ್ಟಿ ವೃತ್ತದಲ್ಲಿ (ಗೋಪಿ ಸರ್ಕಲ್) ಇರುವ ದೇವರಾಜ್ ಅರಸ್ ಕಟ್ಟಡದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು.

ಆದರೆ ಯಾವುದೇ ಸಿದ್ಧತೆಗಳು ಹಾಗೂ ತಯಾರಿಗಳು ನಡೆಯದೇ ಏಕಾಏಕಿ ಎರಡೇ ದಿನದಲ್ಲಿ ಈ ಕಚೇರಿಯನ್ನು ಅಲ್ಲಿನ ಮುಖ್ಯ ಕಂದಾಯ ಅಧಿಕಾರಿ ಹಾಗೂ ನಗರಪಾಲಿಕೆಯ ಕಂದಾಯ ವಿಭಾಗದ ಪ್ರಭಾರ ಉಪ ಆಯುಕ್ತರಾದ ಪೂಜಾರಿ ಅವರ ನೇತೃತ್ವದಲ್ಲಿ ಹೊಸ ಕಚೇರಿಯನ್ನು ಆರಂಭಿಸಲಾಗಿದೆ.


ಅಲ್ಲಿ ಅಧಿಕಾರಿಗಳು ಹಾಗೂ ನೌಕರರು ಕುಳಿತುಕೊಳ್ಳಲು ಯಾವುದೇ ಕೊಠಡಿಗಳ ವ್ಯವಸ್ಥೆ ಇಲ್ಲ. ಅಷ್ಟು ಬೇಗ ಅಲ್ಲಿಗೆ ಹೋಗುವ

ಅವಸರವಾದರೂ ಏನಿತ್ತು? ಎಂಬುದು ಸಾರ್ವಜನಿಕ ಪ್ರಶ್ನೆ.
ಒಂದು ನಮೂನೆಯ ಗೋಡನ್ ನಂತೆ ಇರುವ ಕಚೇರಿಯನ್ನು ಆರಂಭಿಸಲಾಗಿದೆ. ಈ ವಲಯಕ್ಕೆ ಬರುವ ಸಮಗ್ರ ಮಾಹಿತಿಯನ್ನು ಮೂಟೆ ಕಟ್ಟಿ ಸಾಗಿಸಲಾಗಿದೆ. ಮುಖ್ಯ ದಾಖಲೆಗಳು ಹೀಗೆ ಸರಬರಾಜುವಾಗುವ ಸಂದರ್ಭದಲ್ಲಿ ಅಲ್ಲಿ ಹಿರಿಯ ಅಧಿಕಾರಿಗಳು ಗಮನಹರಿಸಬೇಕು. ಆದರೆ ಆ ರೀತಿ ಯಾರು ಗಮನಹರಿಸಿಲ್ಲ ಎಂಬುದು ನಗರ ಪಾಲಿಕೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಅಕಸ್ಮಾತ್ ಯಾವುದಾದರೂ ಮುಖ್ಯ ದಾಖಲಾತಿ ಕಳೆದು ಹೋದರೆ ಅದರ ಜವಾಬ್ದಾರಿಯನ್ನು ಪೂಜಾರಿಯವರು ಬರುತ್ತಾರೆ ಎಂಬುದು

ಇಲ್ಲಿ ಗಂಭೀರ ಪ್ರಶ್ನೆ.
18 ಅಧಿಕಾರಿಗಳು ಹಾಗೂ ನೌಕರರನ್ನು ಈಗಾಗಲೇ ಹೊಸ ಕಚೇರಿಗೆ ಕಳುಹಿಸಲಾಗಿದೆ. ಆದರೆ ಅಲ್ಲಿ ಅವರು ಕುಳಿತುಕೊಳ್ಳುವ ಯಾವುದೇ ಬಗೆಯ ಶಿಸ್ತಾದ ವ್ಯವಸ್ಥೆಗಳು ಇಲ್ಲ ಎಂಬುದು ಕಣ್ಣಾರೆ ಕಂಡವರಿಗೆ ಗೊತ್ತಾಗುತ್ತದೆ. ಅತ್ಯಂತ ಅವಸರದಿಂದ ಈ ಬಗೆಯ ವಿಭಾಗವನ್ನು

ಬದಲಿಸಿದ್ದು ಏಕೆ?
ವಿನೋಬನಗರ ವ್ಯಾಪ್ತಿಯಲ್ಲಿ ಬರುವ ಕಚೇರಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ವಿಧಾನಪರಿಷತ್ ಸದಸ್ಯರೊಬ್ಬರು ಆ ಕಚೇರಿಯನ್ನು ಕೇಳಿದ ಹಿನ್ನೆಲೆಯಲ್ಲಿ ಮೇಲಿನ ಕಟ್ಟಡಕ್ಕೆ ಹೋಗಲು ಅವಶ್ಯವಾದ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ ವಲಯ ಎರಡರ ವಿಭಾಗಕ್ಕೆ ಸಂಬಂಧಪಟ್ಟಂತೆ ತೀರಾ ಅವಸರದಿಂದ ಮಾಡಿದ್ದಾದರೂ ಏಕೆ ಎಂಬುದು ಸಾರ್ವಜನಿಕ ಪ್ರಶ್ನೆ?
ಹಿಂದೆ ಇದ್ದ ನಗರಪಾಲಿಕೆಯ ಕಂದಾಯ ವಿಭಾಗದ ಉಪಯುಕ್ತ ಮಂಜುನಾಥ್ ದಿಢೀರನೆ, ಸುಧೀರ್ಘ ರಜೆ ಹಾಕಿದ್ದಾದರೂ ಏಕೆ ಎಂಬ ಪ್ರಶ್ನೆ ನಗರಪಾಲಿಕೆಯ ವಲಯದಲ್ಲಿ ನೂರಾರು ಬಾರಿ ಕೇಳಿ ಬರುತ್ತಿದೆ. ಇಲ್ಲಿನ ಕೆಲ ಅಧಿಕಾರಿಗಳು ಇಲ್ಲಸಲ್ಲದ ಕಿರುಕುಳ ನೀಡಿದ್ದೆ ಕಾರಣ ಎಂದು ಹೇಳಲಾಗುತ್ತದೆ. ನಗರಪಾಲಿಕೆಯ ಜಾಗ ಹೇಗೆ ಬದಲಾಗುತ್ತದೆ ಎಂಬುದು ಅಲ್ಲಿನ ಸೈಟ್ ವಿಭಾಗಕ್ಕೂ ಗಮನಕ್ಕೆ ಬಾರದಂತೆ ನಡೆಯುತ್ತಿದೆ ಎಂಬುದು ಮತ್ತೊಂದು ಬಲಿಷ್ಠವಾದ ಆರೋಪ ನಗರಪಾಲಿಕೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಈ ವಿಷಯದ ಬಗ್ಗೆ ಆಯುಕ್ತರು ಏಕೆ ಸುಮ್ಮನಿದ್ದಾರೆ ಎಂಬುದು ಪಬ್ಲಿಕ್ ಪ್ರಶ್ನೆ.