ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
ಕೆಲವರಿಗೆ ಈ ಒಂದು ತರಹ ಅಭ್ಯಾಸ ತಮ್ಮ ಮನೆಯಲ್ಲಿ ಎಲ್ಲಾ ಇರುವ ಒಳ್ಳೆತನಗಳನ್ನು, ಅವಕಾಶಗಳನ್ನು, ಸಾಧನೆಯನ್ನು ದೂರವಿಟ್ಟು ಪಕ್ಕದ ಮನೆಯವರ, ನೆಂಟರ ಒಳ್ಳೆಯತನ ಚಂದದ ಬದುಕು ಹೋಲಿಕೆ ಮಾಡುತ್ತಾ ತಮ್ಮ ಮನೆಯನ್ನೇ, ಅಲ್ಲಿರುವ ಒಳ್ಳೆಯತನವನ್ನೇ ಮಂಗ ಮಾಯ ಮಾಡಿಕೊಳ್ಳುವ ಕಾಯಕ ಅತ್ಯಂತ ಆತಂಕಕಾರಿ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ.
https://tungataranga.com/?p=41680
ಮೊಬೈಲ್ ಆಟ- ರಾತ್ರಿ ಬೆದರಿಸುವಿಕೆ, ಬೆಳಿಗ್ಗೆ ಮಂತ್ರಮುಗ್ದ..!?, ಡೈಲಿ ಒಂದೊಂದ್ ಗಿರಾಕಿ ಹುಡ್ಕೊ ಕೆಲ್ಸ…! ಗಜೇಂದ್ರ ಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ
ಸಂಪೂರ್ಣ ಅಂಕಣ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ https://chat.whatsapp.com/DvWBmQxqpjV906mtKCFNZ5
ಇಂತಹ ಘಟನೆಗಳನ್ನು ಬಹಳಷ್ಟು ಕಡೆಯಿಂದ ಉದಾಹರಣೆಗಳನ್ನು ನಾವು ಗಂಭೀರವಾಗಿ ಗಮನಿಸುತ್ತೇವೆ. ಏಕೆಂದರೆ ಕಂಡೋರು ಉದ್ದಾರ ಆಗೋದೇ ಇವರ ಬಾಯಿಯ ಅಸ್ತ್ರ ವಾಗುವುದು ದುರಂತವಲ್ಲವೇ?
ತಮ್ಮ ಮನೆಗೆ, ತಮ್ಮ ಸಮಾಜಕ್ಕೆ, ತಮ್ಮ ಕುಟುಂಬಕ್ಕೆ ತಮ್ಮೊಳಗಿನ ಜಗತ್ತಿಗೆ ಏನು ಬೇಕು ಎಂಬುದನ್ನು ಯೋಚಿಸದೆ ಅದರಲ್ಲಿರುವ ಸಾಧನೆಗಳನ್ನು ಹಾಗೂ ಬೆಳವಣಿಗೆಗಳನ್ನು ಗಮನಿಸದೆ ಅವ ಆಗಿದ್ದಾನೆ, ಅವರು ನೋಡಿ ಗಂಡ ಹೆಂಡತಿ ಹೇಗಿದ್ದಾರೆ? ಆ ಹುಡುಗ ನೋಡಿ ಹೇಗೆ ಓದುತ್ತಿದ್ದಾನೆ, ಅವನು ಆಗಲೇ ಜಾಬಿಗ್ ಹೋದ. ಅವನು ಕಾರು ತಗೊಂಡಿದ್ದಾನೆ. ಅವನು ಬೇಜಾನ್ ಬೆಳೆದಿದ್ದಾನೆ. ಅವಳು ಸೂಪರ್ ಆಗಿ ಓದುತ್ತಿದ್ದಾಳೆ ನೋಡ್ರಿ. ಎಂಥ ಒಳ್ಳೆ ಮನೆಗೆ ಅವರನ್ನು ಕೊಟ್ಟರು ಎಂದು ಬರೀ ಅನ್ಯರ ಬಗ್ಗೆ ಮಾತನಾಡುತ್ತಾ ನಮ್ಮತನವನ್ನು ನಾವು ಮಾರಿಕೊಳ್ಳುವುದು ನಮ್ಮಲ್ಲಿರುವ ಶುದ್ಧತೆಯನ್ನು ನಾವು ಮಾಯ ಮಾಡಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬುದು ಗಂಭೀರ ಪ್ರಶ್ನೆ ಅಲ್ಲವೇ?

ಇಂದಿನ ದಿನಮಾನಗಳಲ್ಲಿ ಬಹಳಷ್ಟು ಶಿಕ್ಷಕರು ಇಂತಹ ಉದಾಹರಣೆಗಳನ್ನು ಪೋಷಕ ವರ್ಗಕ್ಕೆ ನೀಡುವುದನ್ನು ನಾವು ಗಮನಿಸಿದ್ದೇವೆ. ಇನ್ನೊಬ್ಬನ ಬಗ್ಗೆ ಹೋಲಿಕೆ ಮಾಡುವ ಬದಲು ನಿಮ್ಮ ನಿಮ್ಮ ಮಗುವಿನ ಬೆಳವಣಿಗೆಗೆ ಗಮನಹರಿಸಿ ಎನ್ನುವ ಮಾತನ್ನು ಇಲ್ಲಿ ಉಲ್ಲೇಖಿಸಬಹುದು.
ಅವನು ಅಥವಾ ಅವಳು ಹಾಗಾದರೆ ಎನ್ನುವ ಬದಲು ನಿಮ್ಮ ಮನೆಯವನು, ಮನದವನು ಹೇಗಿದ್ದಾನೆ. ಅಲ್ಲಿರುವ ಒಳ್ಳೆಯತನ ಏನು ಎಂಬುದನ್ನು ಗಮನಿಸುವ ಮನೋಭಾವದ ಇಂತಹ ಅಪಕ್ವ ಮನಸುಗಳಿಗೆ ಕಡಿವಾಣ ಬೀಳುವ ಹಾಗೂ ಬದಲಾಗುವ ಅವಶ್ಯಕತೆ ಇದೆ ಅಲ್ಲವೇ?

ಬಹಳ ಜನ ಗಂಡ ಹೆಂಡತಿ ಜನರ ಎದುರಿಗಿದ್ದಾಗ ಅತ್ಯಂತ ಅನ್ಯೂನ್ಯವಾಗಿ ಬಂಗಾರದ ಜೋಡಿಯಂತೆ ಕಾಣುತ್ತಾರೆ. ಅದೇ ಎದುರಿಗೆ ಬಂದಾಗ, ಒಂಟಿಯಾದಾಗ ಪರಸ್ಪರ ತಿರಸ್ಕರಿಸುವ, ಹೀಗಳಿಯುವ, ಇಂತಹ ಮದುವೆಯೆಂದು ಹೇಳುವ ಮಾತು ನಮ್ಮ ನಡುವೆ ಕೆಲವೆಡೆ ಕಂಡುಬರುತ್ತದೆ. ಅಲ್ಲವೇ ಇರುವುದ ಬಿಟ್ಟು ಇಲ್ಲದಿದ್ದರೆಡೆಗೆ ತುಡಿಯುವುದೇ ಜೀವನ ಎಂಬಂತೆ ಕವಿವಾಣಿ ಇಲ್ಲಿ ಎಲ್ಲಾ ಕಡೆ ಆಟ ಆಡುತ್ತದೆ.