ನೆಗಿಟೀವ್ ಥಿಂಕಿಂಗ್
ವಾರದ ಅಂಕಣ – 43
– ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ, (ಮೂಲ- ಅರಹತೊಳಲು, ಭದ್ರಾವತಿ)


ಈ ಸಮಾಜದಲ್ಲಿ ಎಂತೆಂಥವರನ್ನೂ ನೋಡಿದ್ದೇವೆ. ಅದರಲ್ಲಿ ಕೆಲವೇ ಕೆಲವರು ತುಂಬಾ ಡಿಫರೆಂಟ್ ವಿಕೃತ ಮನಸ್ಸಿನವರು ಎಂಬುದು ತುಂಬಾ ಸಲೀಸಾಗಿ ಸುಲಭವಾಗಿ ಗೊತ್ತಾಗುತ್ತದೆ. ಹೀಗೆ ಗೊತ್ತಾಗದೆ ಬಚ್ಚಿಟ್ಟುಕೊಳ್ಳುವ ಮತ್ತೆ ಕೆಲವು ವಿಚಿತ್ರ ಮನಸ್ಸುಗಳು ನಮ್ಮ ನಡುವೆ ಕಾಣಿಸಿಕೊಳ್ಳುತ್ತಿರುವುದು ದುರಂತವೇ ಹೌದು.ವಿಶೇಷವಾಗಿ ಇಲ್ಲಿ ನಾವು ಹೇಳಬೇಕಿರುವುದು ಕೆಲವರು ರಾತ್ರಿ ಹೊತ್ತು ಬೆದರಿಸುತ್ತಾರೆ. ಹಗಲು ಹೊತ್ತಿನಲ್ಲಿ ನೋಡಿದರೆ ಮಂತ್ರಮುಗ್ಧರಂತೆ ದೇವತಾ ಮನುಷ್ಯರಂತೆ ಕೊಳ್ಳುತ್ತಾರೆ ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.








ಈ ಡಿಫರೆಂಟ್ ಮನಸುಗಳ ಈ ವಂಚಕತನದ ಆಟಗಳು ನೂರಾರು ನೈಜ ಮುಗ್ಧ ಮನಸುಗಳ ನೆಮ್ಮದಿಯನ್ನು ಹಾಳುಮಾಡುತ್ತದೆ. ತಪ್ಪು ಎಂದು ಹೇಳಬಹುದಾದ ವಿಷಯವನ್ನು ಬಿಟ್ಟು ಅದನ್ನು ಮತ್ತೊಂದೆಡೆ ಸೇರಿಸಿ ಇನ್ಯಾರದೋ ಜೊತೆ ಸಂಬಂಧ ಹಚ್ಚಿ ಮುಗ್ಧ ಮನಸುಗಳನ್ನು ಸಮಾಜದ ಸ್ವಸ್ಥ ಜಗತ್ತಿಗೆ ಅನಗತ್ಯವಾಗಿ ಕೆಟ್ಟವರೆಂದು ಬಿಂಬಿಸುವ ಕೃತ್ಯ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಸಮಾಜದ ಒಂದು ವರ್ಗ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಏನನ್ನೂ ಹೇಳಲು ಹೋಗಿ ಮತ್ತೇನನ್ನೂ ಸೇರಿಸಿ ಹೇಳುವ ಪರಿಪಾಠ ಕೆಲವರಲ್ಲಿ ಹುದುಗಿದೆ.
ಒಂದು ವಿಷಯವನ್ನು ಬಿಟ್ಟು ಮತ್ತೇನನ್ನೋ ಸೇರಿಸಿ ಅದರೊಳಗೆ “ಬಿರಿಯಾನಿ” ಮಾಡಿಕೊಂಡು ತಿನ್ನುವ ವಿಕೃತ ಮನಸ್ಸುಗಳಿಗೆ ಸಮಾಜದ ಮುಗ್ಧ ಮನಸುಗಳು ತಿರುಗಿ ಒಮ್ಮೆ ಭಾರಿಸುವ ಪರಿಸ್ಥಿತಿ ಬರುತ್ತದೆ, ಕೆಲವರಿಗದು ಬಂದಿದ್ದರೂ ಸಹ ಮತ್ತೆ ಅದೇ ರಾಗ ಅದೇ ಚಾಳಿ ಎಂಬಂತೆ ನಿರಂತರ ತಮ್ಮತನವನ್ನು ಮಾಡಿಕೊಂಡು ಇನ್ನೊಬ್ಬರ ಬದುಕಿನೊಳಗೆ ಆಟ ಆಡುತ್ತಾ ಮುಂದೊಂದು ದಿನ ನನಗೂ ಬದುಕಿದೆ ಎಂಬುದನ್ನು ಮರೆತುಬಿಡುತ್ತಾರೆ.ಇದು ಇತ್ತೀಚಿನ ದಿನಗಳಲ್ಲಿ ನಮ್ಮ ನಡುವೆ ಹೆಚ್ಚುತ್ತಿರುವುದು ಹಾಗೂ ಕೆಲವೇ ಕೆಲವು ವಿಕೃತ ಮನಸ್ಸುಗಳ ಇಂತಹ ವರ್ತನೆ ನಿಜಕ್ಕೂ ಆತಂಕಕಾರಿ ವಿಷಯವೇ ಹೌದು.

ಒಂದೆಡೆ ಸಾಮಾಜಿಕ, ರಾಜಕೀಯ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರದ್ದೆ ಹಾಗೂ ಭಕ್ತಿಯನ್ನು ತೋರಿಸುತ್ತಾ ಮತ್ತೆ ಇನ್ನೊಂದು ಮುಖದಲ್ಲಿ ವಂಚಕತನ ಮೋಸ ಹಾಗೂ ನಾನೆ ಮುಖ್ಯಸ್ಥ ಎಂಬಂತೆ ಬಿಂಬಿಸುವ ಪರಿಪಾಠ ನಮ್ಮ ನಡುವೆ ಕೆಲವರಲ್ಲಿ ಹೆಚ್ಚುತ್ತಿರುವುದು ಅತ್ಯಂತ ನೋವಿನ ವಿಷಯ. ಒಂದು ಸೋಲು ಮತ್ತೊಂದು ಗೆಲುವಿಗೆ ಮೆಟ್ಟಿಲು ಎಂಬ ಮಾತನ್ನು ನಾವು ಹೇಳಿದ್ದೇವೆ ಕೇಳಿದ್ದೇವೆ ಹಾಗೆಯೇ ಅದು ಸತ್ಯ ಎಂಬುದನ್ನು ಸಾಕಷ್ಟು ಭಾರಿ ನೋಡಿದ್ದೇವೆ. ಆದರೆ ಕೆಲವರು ಸೋಲನ್ನೇ ಕಾಯಕ ಮಾಡಿಕೊಂಡು ಗೆಲ್ಲುವ ಯೋಚನೆ ಮಾಡದೆ ತಮ್ಮದೇ ವಂಚನೆಯ ಮನಸ್ಸುಗಳಲ್ಲಿ ಮತ್ತೆ ಗೆಲ್ಲಲು ಪ್ರಯತ್ನಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಹೇಳಿ ಬರುತ್ತಿದೆ.

ಯಾರು ತಲೆತಗ್ಗಿಸಿ ಬಗ್ಗಿ ನಡೆಯುತ್ತಾರೋ ಅವರನ್ನು ಬಗ್ಗಿಸಿ ಬಡಿಯಲು ಸಾಕಷ್ಟು ಜನ ಯೋಚಿಸುವುದು ನಮ್ಮ ನಡುವೆ ಸತ್ಯ ಎನಿಸುತ್ತದೆ. ಆದರೆ ಕೆಲವರು ಅದೇ ವಿಷಯದಲ್ಲಿ ಮಂತ್ರ ಮುಗ್ಧರಾಗಿ ಏನೇನನ್ನು ಕಟ್ಟಿಕೊಂಡು ಇನ್ನೊಬ್ಬರ ಬದುಕೊಳಗೆ ಮನೆಯೊಳಗೆ ಬೆಂಕಿ ಹಚ್ಚುವ ಕಾಯಕ ಮಾಡುವ ಪಂಚಕ ಮನಸುಗಳಿಗೆ ಅದೇ ನೋವು ಅನುಭವಿಸಿದ ಮನ ತಿರುಗಿ ನಿಂತಾಗ ಅದರ ಪರಿಸ್ಥಿತಿ ಏನು ಎಂಬುದನ್ನು ನಾವು ನೋಡುವ ನೋಡಿದ ಅನುಭವಗಳು ನಮಗೆ ಕಾಣಿಸುತ್ತಿದೆ ಹಾಗೂ ಕಂಡಿವೆ ಅಲ್ಲವೇ?