ಸಾಗರ : ಇಲ್ಲಿನ ಭೀಮನೇರಿ ಸಮೀಪ ಶುಂಠಿ ತುಂಬಿದ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಗುರುವಾರ ನಡೆದಿದೆ.
ಸಾಗರದಿಂದ ಶುಂಠಿ ತುಂಬಿಕೊಂಡು ಹುಬ್ಬಳ್ಳಿಗೆ ಹೋಗುತ್ತಿದ್ದ ಲಾರಿ ಮತ್ತು ಹುಬ್ಬಳಿ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.

ರಸ್ತೆಗೆ ಅಡ್ಡವಾಗಿ ಬಂದ ಹಾವನ್ನು ತಪ್ಪಿಸಲು ಹೋಗಿ ಕಾರಿನ ಚಾಲಕ ಎದುರು ಬರುತ್ತಿದ ಲಾರಿಗೆ ಕಾರು ಡಿಕ್ಕಿ ಹೊಡೆಸಿದ್ದಾನೆ.

ಲಾರಿ ಚಾಲಕ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಲಾರಿ ತೆಗೆದುಕೊಂಡು ಹೋದಾಗ ಲಾರಿ ಪಲ್ಟಿಯಾಗಿ

ಶುಂಠಿಚೀಲ ಪೂರ್ಣ ಕೆಳಗೆ ಉರುಳಿದೆ. ಲಾರಿ ಮತ್ತು ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ