ಶಿವಮೊಗ್ಗ:ನಗರದ ಬೈಪಾಸ್ ರಸ್ತೆ ಸರ್ಕಲ್ ಕಿರಣ್ ಬ್ಯಾಟರಿ ಬಳಿ ಇರುವ ಕಾಮಾಕ್ಷಿ ಮೋಟರ್ಸ್ ರಾಯಲ್ ಎನ್ಫೀಲ್ಡ್ ಬೈಕ್ ಶೋರೂಮ್ ನಲ್ಲಿ ಇಂದು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ೬೫೦ ನೂತನ ಬೈಕನ್ನು ಸಂಸದ ಬಿ ವೈ ರಾಘವೇಂದ್ರ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಶಿವಮೊಗ್ಗ ನಗರ ಶರವೇಗದಿಂದ ಬೆಳೆಯುತ್ತಿದ್ದು ದೊಡ್ಡ ದೊಡ್ಡ ಕಂಪನಿಗಳ ವಾಹನಗಳ ಶೋರೂಮ್ಗಳನ್ನು ತೆರೆಯುತ್ತಿದ್ದಾರೆ ಈ ಮೂಲಕ ಜಿಲ್ಲೆಯ ಯುವಕರಿಗೆ ಉದ್ಯೋಗ ಲಭ್ಯವಾಗುತ್ತಿರುವುದು ಸಂತೋ?ದ ವಿಚಾರ.

ಈ ಸಂಸ್ಥೆಗೆ ಶುಭವಾಗಲಿ ಎಂದರು. ಬಿಜಾಪುರದಿಂದ ಬಂದು ಇಲ್ಲಿ ನೂತನ ಬೈಕನ್ನು ಖರೀದಿಸಿದ ಗ್ರಾಹಕರಿಗೆ ಅವರು ಕಿ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ ಹಾಗೂ ಹೋಂ ಗಣೇಶ್ ಟ್ರ್ಯಾಕ್ಟರ್ಸ್ ಮಾಲೀಕರಾದ ಭಾಸ್ಕರ್ ಜಿ ಕಾಮತ್ ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು. ಶೋರೂಮ್ ಮಾಲೀಕರಾದ ದೇವದಾಸ್ ನಾಯಕ್ ನಾಗೇಶ್ ದೇವದಾಸ್ ನಾಯಕ್ ಮತ್ತು ಜಯಂತಿ ನಾಯಕ್ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು