ಹುಡುಕಾಟದ ವರದಿ
ಶಿವಮೊಗ್ಗ, ಏ.15:
ಬೆಳಗ ಕಳೆದ 2014ರ ಸಾಲಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ, ಅದರೊಳಗೆ 63 ಕೋಟಿ ರೂ ಅವ್ಯವಹಾರ ತನಿಖೆಯ ಕೊನೆಯ ಹಂತವನ್ನು ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಹಳೆಯ ದೂರಿನ ಹಿನ್ನೆಲೆಯ ಬಹಳಷ್ಟು ವ್ಯಕ್ತಿಗಳನ್ನು ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯದಲ್ಲೇ ಶಿವಮೊಗ್ಗ ಮುಖ್ಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಅಲ್ಲಿನ ಲೆಕ್ಕಪತ್ರ ವಿಭಾಗ ಹಾಗೂ ಇತರೆ ವಿಭಾಗದ ಹಲವರನ್ನು ಮತ್ತೊಮ್ಮೆ ಸಮಗ್ರವಾಗಿ ಪರಿಶೀಲನೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ನಿವು ಬಿಹೆಚ್ ರಸ್ತೆ ಬ್ಯಾಂಕ್ ಶಾಖೆಯವರು ಬಂಗಾರದ ಸಾಲಕ್ಕೆ ಅಷ್ಟೊಂದು ಹಣ ನೀಡಿದಾಗ ಎರಡು ವರ್ಷವಾದರೂ ಒಮ್ಮೆಯಾದರೂ ಪರಿಶೀಲಿಸಿಲ್ಲದಿರುವುದನ್ನ ಈಗ ವಿಚಾರಣೆಗೊಳಪಡಿಸಲಿದ್ದಾರೆನ್ನಲಾಗಿದೆ.

ಡಿಸಿಸಿ ಬ್ಯಾಂಕ್ ನ ಅವ್ಯವಹಾರದಲ್ಲಿ ಸಾಕಷ್ಟು ಅಮಾಯಕರು ಬಲಿಯಾಗಿರುವುದು ನೋವಿನ ಸಂಗತಿ. ಡಿಸಿಸಿ ಬ್ಯಾಂಕ್ ಬಿ.ಎಚ್ ರಸ್ತೆ ಕಚೇರಿಯ ಅಂದಿನ ಮ್ಯಾನೇಜರ್ ಶೋಭಾ ಅವರ ತಂದೆ ಬಸಪ್ಪ ಹಾಗೂ ತಮ್ಮ ಮಂಜುನಾಥ್ ಅವರು ಹಣ ವಸೂಲಿ ಬಗ್ಗೆ ಕೇಂದ್ರ ಕಚೇರಿಯವರು ಮಾಡಿದ ಒತ್ತಡದ ಹಿನ್ನೆಲೆಯಲ್ಲಿ ನಿಧನರಾಗಿರುವುದು ದುರಂತದ ಸಂಗತಿ. ಈ ಹಿನ್ನೆಲೆಯಲ್ಲಿ ಬಸಪ್ಪ ಅವರ ಪತ್ನಿ ಜಯಮ್ಮ ಅವರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು ಸೇರಿದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ನನ್ನ ಪತಿ ಹಾಗೂ ಮಗನ ಸಾವಿಗೆ ಇಂಥವರು ಕಾರಣ ಎಂದು ಮೂವರ ಹೆಸರನ್ನು ಬರೆದುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಜೈಲಿಗೆ ಹೋದ ಹಲವರು ಮತ್ತೆ ಕೆಲಸಕ್ಕೆ ಸೇರಿದ್ದಾರೆ .ಆದರೆ ಆ ಸಂದರ್ಭದಲ್ಲಿ ಚಾಲಕನಾಗಿದ್ದ ಎಸ್.ಎ. ಶಿವಕುಮಾರ್ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಆಡಳಿತ ಮಂಡಳಿ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ನೋವಿನ ಸಂಗತಿ ಎಂದು ನೊಂದ ಚಾಲಕ ಹೇಳಿದ್ದಾನೆ. 2020ರಲ್ಲಿ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನನೊಂದು ಹೃದಯಘಾತಕ್ಕೆ ಒಳಗಾಗಿದ್ದು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಿವಕುಮಾರ್ ಅವರು ಪತ್ನಿ ಹಾಗೂ ಇಬ್ಬರು ಪತ್ರದೊಂದಿಗೆ ವಾಸಿಸುತ್ತಿದ್ದು,ಪತ್ನಿಯ ವೇತನದಿಂದ ಬದುಕುವ ಅನಿವಾರ್ಯತೆ ಬಂದಿದೆ ಎಂದು ಇಡಿಯವರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮುಖ್ಯ ಕಚೇರಿಯ ಮ್ಯಾನೇಜರ್ ರಾಮಚಂದ್ರ ಅವರು ನಿವೃತ್ತರಾಗಿದ್ದು ಅವರ ಪೆನ್ಷನ್ ಹಾಗೂ ಇತರೆ ಹಣದ ಮೂಲಗಳು ಇಲ್ಲಿಯವರೆಗೆ ಲಭಿಸಿಲ್ಲ. ಸುಮಾರು ಹತ್ತು ವರ್ಷಗಳ ಕಾಲ ಹಣವಿಲ್ಲದೆ ಈಗ ನಾನು ಕ್ಯಾಟರಿಂಗ್ ಕೆಲಸ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದೇವೆ ಎಂದು ಇಡೀ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ನಾಳೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಯ ಮುಖ್ಯ ಸಭೆ ನಡೆಯಲಿದೆ ಎನ್ನಲಾಗುತ್ತಿದ್ದು, ಅಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ ಎನ್ನಲಾಗಿದೆ ಅಂದಿನ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷ ಮಂಜುನಾಥಗೌಡ ಅವರಿಗೆ ಕಳೆದ ಏಪ್ರಿಲ್ ಒಂಬತ್ತರಿಂದ ಇಪ್ಪತ್ತೆರಡರವರೆಗೆ ಈಡಿ ಕಸ್ಟಡಿಗೆ ಪಡೆದಿದೆ. ಒಟ್ಟಾರೆ ಡಿಸಿಸಿ ಬ್ಯಾಂಕ್ ನ ಈ ನಕಲಿ ಚಿನ್ನದ ಹಗರಣ 63 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಹೊಸ ಹೊಸ ತಿರುವುಗಳು ಬರುತ್ತಿದ್ದು ಮುಂದೇನಾಗಲಿದೆ ಎಂಬ ಕೌತುಕ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.