
ಶಿವಮೊಗ್ಗ : ದುರ್ಯೋಧನ ದುಶ್ಯಾಸರನ್ನು ರಕ್ಷಣೆ ಮಾಡಲು ದೃತರಾಷ್ಟ್ರ ಬರುತ್ತಿದ್ದಾನೆ ಎಂದು ಬಿಜೆಪಿ ಯವರ ಜನಾಕ್ರೋಶ ಹೋರಾಟಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಬಿಜೆಪಿ ನಾಯಕರು ನಿಜವಾದ ಹೋರಾಟ ಮಾಡುತ್ತಿಲ್ಲ ಇದು ಒಂದು ಕುಟುಂಬದ ಹೋರಾಟವಾಗಿದೆ ಯಡಿಯೂರಪ್ಪ ಕುಟುಂಬಂದವರೆಲ್ಲರು ಇಂದು ಹೋರಾಟ ಮಾಡುತ್ತಿದ್ದಾರೆ ಹಾಗಾಗಿ ಶಿವಮೊಗ್ಗಕ್ಕೆ ಕುಟುಂಬದ ಯಾತ್ರೆಯ ಆಗಮನವಾಗಲಿದೆ ಎಂದು ಟೀಕಿಸಿದರು.

ಯಡಿಯೂರಪ್ಪ ನವರು ಇಂದು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.ದುರ್ಯೋಧನ ದುಶ್ಯಾಸನ ರಕ್ಷಣೆಗೆ ಭೀಷ್ಮ ಎಂದು ಬಿಂಬಿಸಿ ಕೊಳ್ಳುವ ಧೃತರಾಷ್ಟ್ರ ಬಂದಂತೆ ಕಾಣಿಸುತ್ತಿದೆ ಎಂದರು.
ಹೋರಾಟ ಮಾಡುವವರು ಪ್ರಾಮಾಣಿಕರಾಗಿರಬೇಕು ಆಪ್ರಾಮಾಣಿಕರಾಗಿರಬಾರದು ಇದು ಅಪ್ರಮಾಣಿಕರ ಹೋರಾಟ ವಾಗಿದೆ ಎಂದರು.
ಬೆಲೆ ಏರಿಕೆ ಹಾಗೂ ಹಾಲಿನ ದರ ಏರಿಕೆ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಬೆಲೆ ಏರಿಕೆಗಳು ಯಾವ ರೀತಿ ಏರಿಕೆಯಾಗುತ್ತಿದೆ ಎಂಬ ವಿವರಗಳನ್ನು ಹೇಳಬೇಕು ಬಿಜಿಪಿ ಬೆಲೆಯನ್ನು ಏರಿಕೆಯೇ ಮಾಡಿಲ್ಲವೇ ಹಾಗದ್ರೆ ಸಿಮೆಂಟ್ ,ಪೆಟ್ರೋಲ್, ಗೊಬ್ಬರ,ಕಬ್ಬಿಣ, ಬೆಲೆ ಏರಿಕೆ ಯಾರು ಮಾಡಿದ್ದು..ಇದಕ್ಕೆ ಇವರ ಆಕ್ರೋಶ ಇಲ್ಲವೇ ಎಂದರು.
ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಬೆಲೆಗಳು ಇಂದು 200% ಜಾಸ್ತಿಯಾಗಿದೆ..ಅವರ ಅಸ್ತಿತ್ವದ ಉಳಿವಿಕೆಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.

ಶಾಸಕರ ವೇತನದ ಏರಿಕೆ ಬಗ್ಗೆ ಇವರು ಮಾತನಾಡುತ್ತಿಲ್ಲ,ಶಾಸಕರಿಗೆ ಒಂದು ಲಕ್ಷ ಜಾಸ್ತಿಯಾದಗ ಏಕೆ ಕಣ್ಣೀರು ಬರಲಿಲ್ಲ
4 ರೂ ಜಾಸ್ತಿಯಾಗಿದ್ದಗ ಮಾತ್ರ ಕಣ್ಣಿರು ಬರುತ್ತದಯೇಬಿಜೆಪಿಯವರು ಡಿಸಂಬರ್ ನಲ್ಲಿ ಶಾಸಕರ ವೇತನ ಹೆಚ್ಚಳಕ್ಕೆ ಅರ್ಜಿ ಕೊಟ್ಟಿದ್ದರು ಎಂದರು.
ಅರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗೆ ಇಲ್ಲ. 18 ಜನರ ಅನರ್ಹ ಬಗ್ಗೆ ಇವರು ಮಾತನಾಡುತ್ತಿದ್ದಾರೆ..
ಅವರಿಗೆ ತಿಂಗಳಿಗೆ ಟಿಎ ಡಿಎ ಬರುತ್ತಿಲ್ಲ ಎಂದು ಅವರು ಹೋರಾಟ ಮಾಡುತ್ತಿದ್ದಾರೆ ಎಂದರು.

ಗಾಂಧಿ ಪ್ರತಿಮೆ ಸ್ಥಾಪನೆಗೆ ಸಂಭದಿಸಿದಂತೆ 2011 ರಲ್ಲಿ ಬೆಂಗಳೂರಿನ ವಿಧಾನಸೌಧದ ಬಳಿ ನಿರ್ಮಿಸಿರುವ ಗಾಂಧಿ ಪ್ರತಿಮೆಯ ವೆಚ್ಚ 11 ಕೋಟಿಯಾಗಿತ್ತು.. ಆದ್ರೆ ಮೊನ್ನೆಯμÉ್ಟ ಬೆಳಗಾವಿಯಲ್ಲಿ ನಿರ್ಮಾಣ ಮಾಡಿರುವ ಗಾಂಧಿ ಪ್ರತಿಮೆ ನಿರ್ಮಾಣದ ವಚ್ಚ ಕೇವಲ ನಾಲ್ಕುವರೆ ಕೋಟಿಯಾಗಿದೆ. ಇದರ ಬಗ್ಗೆ ಇಂದೂ ಪ್ರತಿಭಟನೆಯಲ್ಲಿ ಮಾತನಾಡಬೇಕು ಎಂದರು.
ಬೇರೆ ಕಡೆಗಳಲ್ಲಿ ಪಕ್ಷಸಂಘಟನೆ ಮಾಡಿದ ಬಿಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಯಾಕೆ ಮಾಡಲಿಲ್ಲ ಎಂದರೆ ತಮ್ಮ ಮಕ್ಕಳನ್ನು ಅಲ್ಲಿ ಬೆಳೆಸಬೇಕಿತ್ತು. ಹಾಗಾಗಿ ಬೇರೆ ಯಾರಿಗೂ ಅಲ್ಲಿ ಬೆಳೆಯಲು ಯಡಿಯೂರಪ್ಪನವರು ಅವಕಾಶ ಕೊಡಲೇ ಇಲ್ಲ. ಈ ಬಗ್ಗೆಯೂ ಅವರು ಹೇಳಲಿ ಎಂದರು.
ಹಾಗೆಯೇ ಯಡಿಯೂರಪ್ಪನವರು ಎರಡು ಸಾರಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದರು. ಪೂರ್ಣಾವಧಿ ಅವರು ಮಾಡಲೇ ಇಲ್ಲ. ಅವರು ಭ್ರಷ್ಟಚಾರ ಆರೋಪ ಬರಲು ಯಾರು ಕಾರಣ? ಜೈಲಿಗೆ ಹೋಗಲು ಯಾರೂ ಕಾರಣ, ಅದರಲ್ಲೂ ಎರಡನೇ ಬಾರಿ ಕಣ್ಣೀರು ಹಾಕಿ ರಾಜೀನಾಮೆ ನೀಡಿದರೂ? ಅದಕ್ಕೆಲ್ಲಾ ಯಾರೂ ಕಾರಣ, ಪಾಪ ಬಿ.ಎಸ್.ಯೂಡಿಯೂರಪ್ಪನವರ ಮೇಲೆ ನಮಗೆ ಹೆಮ್ಮೆ ಇದೆ. ಅವರು ನಮ್ಮ ಜಿಲ್ಲೆಯವರು ಅವರಿಗೆ ಯಾಕೆ ಈ ಗತಿ ಬಂತು ಎಂದು ಅವರ ಮಕ್ಕಳಾದರೂ ಪ್ರತಿಭಟನೆ ಸಭೆಯಲ್ಲಿ ಹೇಳಲಿ ಎಂದರು.
ಶಿಕಾರಿಪುರದಲ್ಲಿ ಕಾರ್ಯಕರ್ತರನ್ನು ಯಾಕೆ ಬೆಳಸಲಿಲ್ಲ. ನಿಮ್ಮಮಕ್ಕಳನ್ನು ತಂದು ಶಿಕಾರಿಪುರದಲ್ಲಿ ಹಾಕಿದ್ದು ಏಕೆ ಇದು ಪಕ್ಷ ಸಂಘಟನೆಯೋ ಕುಟುಂಬ ಸಂಘಟನೆಯೋ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಜನಾಕ್ರೋಶ ಹೋರಾಟ ಮಾಡುವುದಲ್ಲ, ಅವರು ಆತ್ಮಾಲೋಕನ ಮಾಡಿಕೊಳ್ಳುವ ಕಾಲವಿದು. ಅವರ ಗುಂಪಿನಲ್ಲಿ ಭ್ರಷ್ಟಚಾರಿಗಳೇ ಹೆಚ್ಚಿದ್ದಾರೇ, ಅತ್ಯಾಚಾರಿಗಳು ಇದ್ದಾರೆ. ಈಗಾಗಿ ಅವರಿಗೆ ಕಾಂಗ್ರೆಸ್ನ್ನು ಟೀಕಿಸುವ, ಹೋರಾಟ ಮಾಡುವ ಯಾವ ನೈತಿಕತೆಯೂ ಇಲ್ಲ. 20 ಕೋಟಿ ಚೆಕ್ ಯಾವುದು ಎಂದು ಸಾಗರ ರಸ್ತೆಯಲ್ಲಿ ತಿರುಗಿ ನೋಡಿದರೆ ತಿಳಿಯುತ್ತದೆ. ಮಗನ ಕುರ್ಚಿ ಉಳಿಸಲು ಈ ಅಶ್ವಮೇಧ ಯಾಗ ಮಾಡುತ್ತಿದ್ದಾರೆ. ಅದರ ರಕ್ಷಣೆಗೂ ಯಡಿಯೂರಪ್ಪನವರೇ ಬರಬೇಕಾದದ್ದು ವಿಪರ್ಯಾಸ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಕೆಪಿಸಿಸಿ ಸದಸ್ಯ ವೈ,ಹೆಚ್.ನಾಗರಾಜ್ ಪ್ರಮುಖರಾದ ಕಲೀಂ ಪಾಶ, ದೀರರಾಜ್ ಹೊನ್ನಾವಿಲೆ, ಶಿವಾನಂದ್, ಶಾಮ್ಸುಂದರ್, ಶಿವಣ್ಣ, ನಯಾಜ್ ಅಹಮದ್, ವಿಜಯಲಕ್ಷ್ಮೀ ಪಾಟೀಲ್, ಕೃಷ್ಣಪ್ಪ, ಲಕ್ಷ್ಮಣ್, ಇಮ್ತಿಯಾಜ್ ಮುಂತಾದವರು ಇದ್ದರು.