
ಶಿವಮೊಗ್ಗ : ಜಾತಿ ಮತ್ತು ಕುಲಕಸುಬಿನಿಂದಾಗಿ ಅನೇಕ ಸಮುದಾಯಗಳು ಹಿಂದುಳಿಯುವಂತಾಯಿತು. ಕುಲಕಸುಬನ್ನು ಗೌವಿಸಿದ ಸ್ಥಿತಿಯಿಂದಾಗಿ ಆತ್ಮವಿಶ್ವಾಸವೇ ಇಲ್ಲದಂತಾಗಿತ್ತು ಕಾಂತರಾಜ್ ಹೇಳಿದರು.
ಹಿಂದುಳಿದ ಜನಜಾಗೃತಿ ವೇದಿಕೆ, ಹಿಂದುಳಿದ ಜಾತಿಗಳ ಒಕ್ಕೂಟ, ಅಖಿಲ ಕರ್ನಾಟಕ ಹಿಂದುಳಿದ ವರ್ಗಗಳಲು ಮತ್ತು ಅತೀ ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆ, ಮಿಲಿಂದಬಸಾಲಿಡಟರಿಟಿ ಯೂತ್ ಮೂವ್ ಮೆಂಟ್ ಆಶ್ರಯದಲ್ಲಿ.ಕಾಂತ ರಾಜ್ ಆಯೋಗರ ವರದಿ ಹಿನ್ನೆಲೆ ಮುನ್ನೆಲೆ ಹಿಂದುಳಿದ ವರ್ಗಗಳಿಗಿರುವ ಸವಾಲು ಮತ್ತು ಜವಾಬ್ದಾರಿಗಳು ವಿಚಾರ ಸಂಕಿರಣ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ನ್ಯಾಯವೆಂದರೆ ಮೀಸಲಾತಿ ಮಾತ್ರವಲ್ಲ. ಬಹಳಷ್ಟು ಕಾರ್ಯಕ್ರಮಗಳು ಇವೆ. ಮೀಸಲಾತಿ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಸಂವಿಧಾನ ಎಲ್ಲೂ ಕೂಡ ಶೇ.50 ಮೀರಬಾರದು ಎಂದು ಹೇಳಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯ ಮಾತ್ರ ಇದನ್ನು ಹೇಳಿದೆ. ದತ್ತಾಂಶಗಳನ್ನು ಸಂಗ್ರಹ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು ಎಂದರು.
ಅತೀ ಸಣ್ಣ ಸಮುದಾಯ, ಬುಡಕಟ್ಟುಗಳಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗವೂ ಒಂದಾಗಿದೆ. ಇಂತಹ ಸಮುದಾಯಗಳಿಗೆ ಇದುವರೆಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ.ನ್ಯಾಯ ಕೊಡುವ ಸಲುವಾಗಿ ಈ ಗಣತಿ ಅತೀಮುಖ್ಯವಾಗಿದೆ ಎಂದರು.

ಮಾಜಿಎಂಎಲ್ ಸಿ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಎಲ್ ಜಿ. ಹಾವನೂರು ವರದಿ ಕೂಡ ಸುಲಭವಾಗಿ ಬರಲಿಲ್ಲ 70 ರ ದಶಕದಲ್ಲಿ. ಅದೇ ರೀತಿ ಪರಿಸ್ಥಿತಿ ಕಾಂತರಾಜ್ ವರದಿ ಬಿಡುಗಡೆಯಲ್ಲಿಯೂ ಇದೆ. ಈಗ ಗೊಂದಲಕ್ಕೆ ಒಳಗಾಗಿರುವುದು ಸಮೀಕ್ಷೆಯೋ ಅಥವಾ ಗಣತಿಯೋ ಎಂಬುದು. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡುವ ಬಗ್ಗೆ ಸಂವಿಧಾನ ದಲ್ಲಿಯೇ ಇದೆ. ಇದು ಗಣತಿಯಲ್ಲ, ಸಮೀಕ್ಷೆ. ಇದು ಸಾಂದರ್ಭಿಕ ಸಮೀಕ್ಷೆಯೇ ಹೊರತು ಇದೇ ಅಂತಿಮವಲ್ಲ. ಗಣತಿ ಮಾಡಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಸಾಮಾಜಿಕ ನ್ಯಾಯ ಕಟ್ಟಕಡೆಯ ಸಮುದಾಯಗಳಿಗೆ ಸಿಕ್ಕಿಲ್ಲ. ಅದನ್ನು ಕೊಡುವ ಸಲುವಾಗಿ ವರದಿ ಜಾರಿಯಾಗಬೇಕಿದೆ. ಆದರೆ ಏಳು ವರ್ಷ ಕಳೆದರೂ ವರದಿ ಬಿಡುಗಡೆಯಾಗಲಿಲ್ಲ. ಸುಲಭವಾಗಿ ಈ ವರದಿ ಸ್ವೀಕಾರ ಕೂಡ ಆಗಿಲ್ಲ. ಈ ಸಂಬಂಧ ಸಾಕಷ್ಟು ಹೋರಾಟ ಕೂಡ ನಡೆಸಲಾಯಿತು.ಅಧ್ಯಕ್ಷರ ಮೇಲೆ ಒತ್ತಡ ಹೇಗೆ ಇರುತ್ತದೆ ಎಂದರೆ ಮೂರು ವರ್ಷ ಅಧ್ಯಯನ ಮಾಡಿದ ಬಳಿಕವೂ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದು ಹೇಳಲಾಗಿತ್ತು. ಇದೆಲ್ಲವೂ ಒತ್ತಡದ ತಂತ್ರದ ಭಾಗವೇ ಆಗಿತ್ತು. ಅದೇನೆ ಇದ್ದರೂ ರಾಜ್ಯ ಸರ್ಕಾರ ಈ ವರದಿ ಜಾರಿಗೆ ತರಲೇಬೇಕಿದೆ ಎಂದು ಹೇಳಿದರು.

ಹಿಂದುಳಿದವರ್ಗದವನೊಬ್ಬ ಶಾಸಕನಾಗುತ್ತೇನೆಂದು ಧೈರ್ಯವಾಗಿ ಹೇಳುವ ಯಾವುದೇ ವಾತಾವರಣವಿಲ್ಲ. ಸೋಷಿಯಲ್ ಇಂಜಿನಿಯರಿಂಗ್ ನಿಂದಸೋಷಿಯಲ್ ಜಸ್ಟೀಸ್ ಸಿಕ್ಕುತ್ತಿದೆಯಾ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.
ಎಚ್. ರಾಮಪ್ಪ ಅಧ್ಯಕ್ಷತೆ, ವಿ.ರಾಜು, ತೀ.ನಾ.ಶ್ರೀನಿವಾಸ್, ವರಲಕ್ಷ್ಮೀ, ಆರ್. ಮೋಹನ್, ಅಣ್ಣಪ್ಪ ಕೋಟೆ, ಅಬೀಬುಲ್ಲಾ. ನಗರ ಮಹಾದೇವಪ್ಪ, ನಟರಾಜ ಮತ್ತಿತರರು ಇದ್ದರು.