
ಶಿವಮೊಗ್ಗ: ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ. ಶಬರಿ ಅವರ ನೇತೃತ್ವದಲ್ಲಿ ಏ.13ರ ಭಾನುವಾರ ಮಧ್ಯಾಹ್ನ 1ಕ್ಕೆ ಸೈನ್ಸ್ ಮೈದಾನದಲ್ಲಿ ಏರ್ಪಡಿಸಿದ್ದು, 1,500 ರೂ. ಪ್ರವೇಶ ಶುಲ್ಕವಿರುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂ, ಶ್ರೀಕಾಂತ್, ಶಿವಮೊಗ್ಗ ನಗರ ಶಾಸಕರಾದ ಚನ್ನಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ ಸುನಿಲ್ ಎ. ಹೆಚ್, ವಿನಯ್ ತಾಂದಲೆ. ಪ್ರಭಾಕರ್ ಗೌಡ, ಚಂದ್ರಶೇಖರ್, ಅಶೋಕ, ಮುಪಣ್ಣ ಹಾಗೂ ಹಲವು ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಟಗರು ಕಾಳಗದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ : 9902102787, 8660651102 ಸಂಪರ್ಕಿಸಿ