
ಜೆಸಿಐ ಭಾರತ ವಿಶಾಲವಾದ ಸದಸ್ಯತ್ವವನ್ನು ದೇಶದ ಮೂಲೆ ಮೂಲೆಯಲ್ಲಿ ಹೊಂದಿದೆ. ಶಿವಮೊಗ್ಗ ನಗರದಲ್ಲಿ 10 ರಿಂದ 15 ಜೆಸಿಐ ಘಟಕಗಳಿವೆ 400 ರಿಂದ 500 ಜನ ನಗರದಲ್ಲಿ ಜೆಸಿ ಸದಸ್ಯರಿದ್ದಾರೆ. ಜೆಸಿಸ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನಲ್ಲಿ ಜೆಸಿಐ ಘಟನೆಗಳಲ್ಲಿ ನೊಂದಣಿ ಆಗಿರುವ ಸದಸ್ಯರಿಗೆ ಮಾತ್ರ ಸದಸ್ಯರಾಗಲು ಅವಕಾಶವಿರುತ್ತದೆ.

ಈ ಕ್ಲಬ್ ನಲ್ಲಿ ಮುಖ್ಯವಾಗಿ ಶುಭಕೋಟೆನ ಜೆಸಿ ಚಂದ್ರಹಾಸ್ ಅಧ್ಯಕ್ಷರಾಗಿ, ಜೆಸಿ ಕಿಶೋರ್ ನೆಪ್ಚೂನ್ ಉಪಾಧ್ಯಕ್ಷರಾಗಿ, ಜೆಸಿ ಸುದರ್ಶನ್ ಕಾರ್ಯದರ್ಶಿಯಾಗಿ, ಮತ್ತು ಇತರ 13 ಮಂದಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸದಸ್ಯರುಗಳು ನಿರ್ದೇಶಕರಾಗಿ ನೇಮಕವಾಗಿರುತ್ತಾರೆ. ಜೆಸಿಐ ಹಿರಿಯರನ್ನು ಸಲಹ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿರುತ್ತದೆ.

ಸಂಸ್ಥೆಯ ಉದ್ದೇಶ ಮಲೆನಾಡ ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದಾಗಿದೆ.
ಜೆಸಿಐ ಭಾರತದ ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೇಟರ್ ಸಿಎ ಗೌರೀಶ್ ಭಾರ್ಗವವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,

ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್ ವಿ ಶಾಸ್ತ್ರಿ, ವಲಯದ ಪೂರ್ವ ಅಧ್ಯಕ್ಷರಾದ ಜೆಸಿ ವಸಂತ್ ಕುಮಾರ್, ಜೆಸಿ ಪುಷ್ಪ ಶೆಟ್ಟಿ ಇತರ ಹಿರಿಯರು ಜೆಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ನಾ ಬ್ಯಾನರ್ ಮತ್ತು ಲೋಹಗಳನ್ನು ಲೋಗೋಗಳನ್ನು ಉದ್ಘಟಿಸಿ ಕ್ಲಬ್ ಗೆ ಶುಭ ಕೋರಿರುತ್ತಾರೆ.