

ಶಿವಮೊಗ್ಗ: ಶಿವಮೊಗ್ಗ ನಗರವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರಮುಖ ನಗರಗಳಿಗೆ ನೇರ ವಿಮಾನ ಸಂಪರ್ಕ ಒದಗಿಸುವ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸ್ಪೈಸ್ ಜೆಟ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಸ್ಪೈಸ್ ಜೆಟ್ ಸಂಸ್ಥೆಯು ಫಿಕ್ಕಿ ವಾಣಿಜ್ಯ ಸಂಸ್ಥೆಗೆ ಒದಗಿಸಿರುವ ರಿಯಾಯಿತಿ ಮಾದರಿಯಂತೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಸದಸ್ಯರಿಗೆ ಕಾರ್ಪೊರೇಟ್ ರಿಯಾಯಿತಿ ನೀಡಬೇಕು ಎಂದು ತಿಳಿಸಿದರು.

ಐ ಐ ಎಫ್ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಫೌಂಡ್ರಿ ಉದ್ಯಮಕ್ಕೆ ಹೆಸರಾಗಿದ್ದು, ಪುಣೆಯ ಕೈಗಾರಿಕಾ ಉದ್ಯಮಿಗಳೊಂದಿಗೆ ಕೈಗಾರಿಕಾ ಸಂಬಂಧ ಹೊಂದಿರುವುದರಿಂದ ಶಿವಮೊಗ್ಗದಿಂದ ಪುಣೆಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸುವುದರಿಂದ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಸ್ಪೈಸ್ ಜೆಟ್ ಎಜಿಎಂ ಸೇಲ್ಸ್ ಹಿರಿಯ ಅಧಿಕಾರಿ ಲಲಿತ್ ಆದಿತ್ಯ ಚಲ್ಲ ಮಾತನಾಡಿ, ಶಿವಮೊಗ್ಗ ವಿಮಾನಯಾನದ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾ ವಿಮಾನ ಸಂಪರ್ಕದ ಕುರಿತು ಯಾವುದಾದರೂ ಸಲಹೆ ಸೂಚನೆ ಇದ್ದರೆ ನೀಡಬೇಕು ಎಂದರು.
ಸೇಲ್ಸ್ ಮ್ಯಾನೇಜರ್ ಜೀತು ಥಾಮಸ್ ಮಾತನಾಡಿ ಸ್ಪೈಸ್ ಜೆಟ್ ವಿಮಾನ ಯಾನದ ರಿಯಾಯಿತಿ ಕುರಿತು ಸಭೆಗೆ ವಿವರಿಸಿದರು. ಉದ್ಯಮಿಗಳು ಪುಣೆ, ಅಹಮದಬಾದ್ ನಗರಕ್ಕೆ ವಿಮಾನ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು.

ಶಿವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್. ಮನೋಹರ್, ನಿರ್ದೇಶಕರಾದ ಗಣೇಶ ಎಂ ಅಂಗಡಿ, ಎಸ್.ಪಿ.ಶಂಕರ್, ವಿ.ಕೆ.ಜೈನ್, ಲಕ್ಷ್ಮೀದೇವಿ
ಗೋಪಿನಾಥ್, ಪ್ರದೀಪ್ ಎಲಿ, ರವಿ ಪ್ರಕಾಶ್ ಜನ್ನಿ, ಕಾರ್ಯಕಾರಿ ಕಾರ್ಯದರ್ಶಿ ಎಚ್. ಎಚ್. ಕಮಲಾಕ್ಷರಪ್ಪ ಮತ್ತು ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ, ಐ ಐ ಎಫ್ ದಕ್ಷಿಣ ಪ್ರಾದೇಶಿಕ ಕೇಂದ್ರದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಕಲ್ಲೂರು ಮಂಡಳಿ ಕೈಗಾರಿಕಾ ಸಂಘದ ಅಧ್ಯಕ್ಷ ಗೇವರ್ ಚಂದ್, ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಶ್ವೇಶರಾಯ ಹಾಗೂ ಅನೇಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಿಗಳು ಭಾಗವಹಿಸಿದ್ದರು.