
ಶಿವಮೊಗ್ಗ,ಏ,10:
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಜಯಲಕ್ಷ್ಮೀ ಅವರ ಮೊಮ್ಮಗ, ರಾಷ್ಟಭಕ್ತ ಬಳಗದ ಯುವ ನಾಯಕ ಕಾಂತೇಶ್, ಶಾಲಿನಿ ಕಾಂತೇಶ್ ದಂಪತಿಗಳ ಪುತ್ರ ನಂದನ್ ಅವರು ಶಿವಮೊಗ್ಗದ ಫೇಸ್ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 94ರಷ್ಟು ಅಂಕ ಪಡೆದಿದ್ದಾರೆ.

ಪ್ರತಿ ವಿಧ್ಯಾರ್ಥಿಯ ಜೀವನದಲ್ಲಿ ಪಿಯುಸಿ ಪರೀಕ್ಷೆ ಒಂದು ಮಹತ್ತರವಾದ ಮೈಲಿಗಲ್ಲು. ಸತತ ಪರಿಶ್ರಮ ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ ಸಾಧ್ಯ.

ಹಾಗೇಯೇ ನನ್ನ ಮಗ ನಂದನ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ 94% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದು ಕಾಂತೇಶ್ ಹರ್ಷವ್ಯಕ್ತಪಡಿಸಿದ್ದಾರೆ.

ತಂದೆಯಾಗಿ ಇದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಮುಂದಿನ ಅವನ ವ್ಯಾಸಾಂಗ ಹಾಗು ಜೀವನ ಸುಗಮವಾಗಿರಲೆಂದು ಕಾಂತೇಶ್ ಅವರು ಶುಭಹರಸಿದ್ದಾರೆ.