
ಶಿವಮೊಗ್ಗ : ನಗರದ ಗೋಪಾಲ ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಿಂಡಿ ಗಾಡಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸುವಂತೆ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹಾಗೂ ಸ್ಥಳೀಯ ನಾಗರೀಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಪ್ರಮುಖರು, ಫ್ರೆಂಡ್ಸ್ ಸೆಂಟರ್ ಸಂಸ್ಥೆಯು 1966 ರಿಂದಲೂ ವಿವಿಧ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಹಾಲಿ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ವಿಶಾಲ್ ಮಾಟ್ ಎದುರು ನಮ್ಮ ಸಂಸ್ಥೆಯ ವತಿಯಿಂದ ಫ್ರೆಂಡ್ನ ಸೆಂಟರ್ ನೇತ್ರ ಭಂಡಾರದ ಕಟ್ಟಡವನ್ನು ಹೊಂದಿದ್ದು, ಸಾರ್ವಜನಿಕರಿಗಾಗಿ ಆರೋಗ್ಯದ ದೃಷ್ಟಿಯಿಂದ ಲ್ಯಾಬೋರೇಟರಿ ಕ್ಲಿನಿಕ್ ಮತ್ತು ನಮ್ಮ ಸಭೆ ನೆಡೆಸಲು ಸಭಾಂಗಣವನ್ನು ಹೊಂದಿರುತ್ತೇವೆ.

ಆದರೆ ಈಗ ಪ್ರತಿದಿನ ಸಂಜೆಯ ನಂತರ ತಿಂಡಿಗಾಡಿಗಳನ್ನಿಟ್ಟುಕೊಂಡು ತಮ್ಮ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡು ಮತ್ತು ಅದರ ತ್ಯಾಜ್ಯ ವಸ್ತುಗಳನ್ನು ನಮ್ಮ ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಹತ್ತಿರದಲ್ಲೇ ಹಾಕಿ ಹೋಗುತ್ತಿದ್ದಾರೆ. ಇದರಿಂದ ಬೀಡಾಡಿ ಪ್ರಾಣಿಗಳು ಅವುಗಳನ್ನು ಸೇವಿಸಿ, ಮತ್ತದರ ಉಳಿದ ಭಾಗಗಳನ್ನು ಬಿಟ್ಟು ಹೋಗುತ್ತಿವೆ.

ಆದುದರಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ತಿಂಡಿಗಾಡಿಗಳ ಮಾಲೀಕರಿಗೆ ಬೇರೆಡೆ ತೆರಳಲು ಸೂಚನೆ ನೀಡಿ ನಮ್ಮ ನೇತ್ರ ಭಂಡಾರದ ಆವರಣವನ್ನು ಶುಚಿ ಶುಚಿಯಾಗಿಟ್ಟುಕೊಳ್ಳಲು ಸಹಕರಿಸಬೇಕು. ಇದರಿಂದ ಅಲ್ಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ದಯಮಾಡಿ ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿ ಮನವಿಯಲ್ಲಿ ಕೋರಿದ್ದಾರೆ

ಈ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಧನರಾಜ್, ನೇತ್ರ ಭಂಡಾರದ, ಚೇರ್ಮನ್ ವಿ.ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ಖಜಾಂಚಿ ರಮೇಶ್, ನಿಯೋಜಿತ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರು, ನಿರ್ದೇಶಕ ಎಂ.ಮೋಹನ್ ಮತ್ತು ಫ್ರೆಂಡ್ ಸೆಂಟರ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.