
ಸಾಗರ(ಶಿವಮೊಗ್ಗ),ಏ,೦೭:ಇಲ್ಲಿನ ವರದಹಳ್ಳಿ ರಸ್ತೆ ಹೆಲಿಪ್ಯಾಡ್ ಎದುರಿನ ಅರಣ್ಯ ಇಲಾಖೆಯ ಪವಿತ್ರ ವನ ಉದ್ಯಾನವನದಲ್ಲಿ ಯುವತಿಯೋರ್ವಳು ಜೀವನದಲ್ಲಿನ ಜಿಗುಪ್ಸೆಯಿಂದ ವಿಷ ಕುಡಿದ ಘಟನೆ ವರದಿಯಾಗಿದೆ.

ಮದ್ಯಾಹ್ನ ಸುಮಾರು ೨ ಗಂಟೆ ಸಮಯದಲ್ಲಿ ಪ್ರೇಮಿಗಳಿಬ್ಬರು ಪವಿತ್ರವನದಲ್ಲಿ ಭೇಟಿಯಾಗಿ ಉದ್ಯಾನವನದ ಲ್ಲಿರುವ ಕಾಡುಕೋಣದ ಆಕೃತಿಯ ಸಮೀಪ ಪಿಸುಮಾತುಗಳು ಮುಂದುವರಿದು ಏರುಧ್ವನಿಯಲ್ಲಿ ಸಂಭಾಷಣೆಯಾಗಿದೆ.
ಕೆಲ ಹೊತ್ತಿನಲ್ಲಿಯೇ ಯುವತಿ ವಿಷದ ಬಾಟಲಿ ತೆರೆದು ವಿಷ ಕುಡಿದೇಬಿಟ್ಟಳು.ಈ ಮೊದಲೇ ಬಹುತೇಕ ವಿಷ ಕುಡಿಯುವ ನಿರ್ಧಾರವನ್ನು ಮಾಡಿಯೇ ಯುವತಿ ಸನ್ನದ್ದಳಾಗಿ ಬಂದಿದ್ದರಿಂದ ಯುವಕನೊಂದಿಗೆ ಮಾತನಾಡುತ್ತಿರುವಾಗಲೇ ಉದ್ವೇಗಕ್ಕೆ ಒಳಗಾಗಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ.

ಪ್ರೇಮಿಗಳ ಚಲನವಲನ ಗ್ರಹಿಸಲು ಅರಣ್ಯ ಇಲಾಖೆಯ ಯಾವ ಸಿಬ್ಬಂದಿಗಳು ಇಲ್ಲದ ಸಮಯದಲ್ಲಿ ಯುವತಿ ವಿಷ ಸೇವಿಸಿದ್ದಾಳೆ.ಆದರೇ ಜೊತೆಯಲ್ಲಿಯೇ ಇದ್ದ ಯುವಕ ತಕ್ಷಣ ಸ್ಥಳಿಯರ ಸಹಾಯದಿಂದ ಸಾಗರದ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಜಿಲ್ಲಾಮಟ್ಟದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಶಿಫಾರಸ್ಸು ಮಾಡಿರುವ ಕಾರಣ ತಕ್ಷಣ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ವಿಷಯ ಸಾಗರದ ಸರ್ಕಾರಿ ಆಸ್ಪತ್ರೆಯಿಂದ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಹೆಚ್.ಎಂ.ಆರ್ ವರದಿ ರವಾನೆಯಾಗಿದೆ.ಪೊಲೀಸ್ ಸಿಬ್ಬಂಧಿಗಳು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾವಿಸಿ ಯುವತಿಯ ಹೇಳಿಕೆ ಪಡೆದು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸುವ ಪ್ರಕ್ರಿಯೆಗಳು ಜರುಗುತ್ತವೆ.

ಪವಿತ್ರವನ…ಅಪವಿತ್ರ…!
ಸಾಗರದ ಪವಿತ್ರವನ ಉದ್ಯಾನವನ ಅಪವಿತ್ರವಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡತೊಡಗಿದ್ದಾರೆ.ಇಲ್ಲಿ ಪ್ರೇಮಿಗಳ ಹಾವಳಿ ಹೆಚ್ಚಾಗುತ್ತಿದೆ.ಮಕ್ಕಳನ್ನು ಕರೆದುಕೊಂಡು ಕೆಲ ಹೊತ್ತು ಆಟಿಕೆಗಳಲ್ಲಿ ಆಟವಾಡಿಸಿಕೊಂಡು ಹೋಗೋಣ ಎಂದು ಆಗಮಿಸುವ ಕುಟುಂಬಸ್ಥರುಗಳಿಗೆ ಇಲ್ಲಿನ ಪ್ರೇಮಿಗಳ ಚಲನವಲನ ಮುಜುಗರ ತರುವಂತಾಗುತ್ತಿದೆ.
ಪವಿತ್ರವನದಲ್ಲಿ ಕೆಲವುದಿನಗಳು ಯಾವೊಬ್ಬರೂ ಸಿಬ್ಬಂದಿಗಳು ಕರ್ತವ್ಯದಲ್ಲಿರುವುದಿಲ್ಲ.ಅಂತಹ ಸಮಯದಲ್ಲಿ ಆಗಮಿಸುವ ಪ್ರೇಮಿಗಳು ಪವಿತ್ರವನದಲ್ಲಿರುವ ಕಟ್ಟಡದ ಮಹಡಿ ಮೇಲೇರುವುದು,ಮರ ಸುತ್ತುವುದು ಸೇರಿದಂತೆ ಅವರ ಆಟೋಟಕ್ಕೆ ಕಡಿವಾಣವೇ ಇರುವುದಿಲ್ಲ.
ಇಲ್ಲೋಬ್ಬ ರಾಮು ಎಂಬ ವಾಚರ್ ಕರ್ತವ್ಯಕ್ಕೆ ಬರುವುದು ಮದ್ಯಾಹ್ನ ೧೨ ಗಂಟೆ ನಂತರ ಯಾವುದೇ ಸಮವಸ್ತ್ರವನ್ನು ದರಿಸದೇ ಇಸ್ತ್ರೀ ಮಾಡಿದ ಬಿಳಿ ವಸ್ತ್ರದಲ್ಲಿ ಆಗಮಿಸುವ ರಾಮು ನೋಡಿದರೇ ಇವನೆ ಅರಣ್ಯ ಸಂರಕ್ಷಣಾಧಿಕಾರಿಯಂತೆ ವರ್ತಿಸುತ್ತಾನೆ.
ಪವಿತ್ರವನದಲ್ಲಿರುವ ತೆಂಗಿನಕಾಯಿ,ಹಲಸಿನಕಾಯಿ,ಮಾವಿನಕಾಯಿ ತನ್ನ ಮನೆಗೆ ಸಾಗಿಸುವುದರಲ್ಲಿ ನಿಪುಣನಾಗಿರುವ ರಾಮು ಪ್ರೇಮಿಗಳ ಸ್ವಚ್ಚಂದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಪವಿತ್ರವನ ಅಪವಿತ್ರಗೊಳಿಸುವ ಕೃತ್ಯದಲ್ಲಿ ತೊಡಗಿರುವುದೇ ಅವಾಂತರಗಳಿಗೆ ಕಾರಣವಾಗಿದೆ.
ರಾಮು ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕಲು ಕಾರಣ ರಾಮು ಡಿಎಫ್ಓ ಅವರ ಮನೆ ಚಾಕರಿಗೆ ಮುಂದಾಗುವ ಮೂಲಕ ತರಕಾರಿ,ಮೀನು ಮಟನ್ ಸರಬರಾಜು ಮಾಡುವ ಮೂಲಕ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷಗಳಿಸುತ್ತಾನೆ ಎಂಬ ಕಾರಣ ಈತನ ಕರ್ತವ್ಯ ಲೋಪಗಳ ವಿರುದ್ಧ ಅರಣ್ಯ ಇಲಾಖೆಯ ಉಳಿದ ಅಧಿಕಾರಿಗಳು ತುಟಿಪಿಟಿಕ್ ಎನ್ನುವುದಿಲ್ಲ.
ಅರಣ್ಯ ಇಲಾಖೆಯ ಗಾರ್ಡ್ಗಳು,ಪಾರೆಸ್ಟರ್ಗಳು ರಾಮು ಎಂಬ ವಾಚರ್ಗೆ ಕರ್ತವ್ಯ ಪಾಲನೆ ಕುರಿತು ಸಮಯ ಪಾಲನೆಗೆ ಸೂಚಿಸುವುದಿಲ್ಲ.ಸಮವಸ್ತ್ರವನ್ನಂತು ರಾಮು ಹಾಕಿಕೊಂಡು ಬಂದಿರುವ ದಾಖಲೆಗಳೆ ಇಲ್ಲ. ಇದರ ಜೊತೆಗೆ ಟಿಂಬರ್ ದಲ್ಲಾಳಿ ದಂಧೆಯಲ್ಲಿ ತೊಡಗಿರುವ ವಾಚರ್ ರಾಮು ತಿಂಗಳ ವೇತನ ಎಣಿಸಲು ಮಾತ್ರ ನೆಪ ಮಾತ್ರಕ್ಕೆ ಪವಿತ್ರವನದಲ್ಲಿ ಕರ್ತವ್ಯ ನಿರ್ವಹಿಸುವ ನಾಟಕಮಾಡುತ್ತಲೇ ಮನಸ್ಸಿಗೆ ಬಂದಂತೆ ಹೊತ್ತಿಲ್ಲದ ಹೊತ್ತಿಗೆ ಆಗಮಿಸುವ ಈತನಿಗೆ ಮೂಗುದಾಣ ಹಾಕದೇ ಇದ್ದಲ್ಲಿ ಪವಿತ್ರವನದ ಹೆಸರಿಗೆ ಕಳಂಕ ತಪ್ಪಿದ್ದಲ್ಲ. ಇನ್ನೇನಾದರಾರೂ ರಾತ್ರಿ ಪವಿತ್ರವನ ಕಾಯುವ ಹೊಣೆಗಾರಿಕೆಯನ್ನು ರಾಮುಗೆ ವಹಿಸಿದ್ದರೇ ದೇವರೇಗತಿ.ರಾಮು ಮನೆಯಲ್ಲಿ ಮಲಗಿ ವೇತನ ಎಣಿಸುತ್ತಿದ್ದ,ಹಗಲು ಟಿಂಬರ್ ದಲ್ಲಾಳಿಗೆ ಮತ್ತಷ್ಟು ಸಹಕಾರವಾಗುತ್ತಿತ್ತು.ಯಾವುದಕ್ಕೂ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ರಾಮುವನ್ನು ನರ್ಸರಿಗಳಿಗೆ ವರ್ಗಾಯಿಸಿ ಪವಿತ್ರವನದ ಪಾವಿತ್ರತೆ ಉಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.