
ನಗರದ ಪಿಇಎಸ್ ಐಎಎಮ್ಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಕ್ಲಸ್ಟರ್ ಫೋರಂ ವತಿಯಿಂದ ವೃತ್ತಿಜೀವನ ಅಭಿವೃದ್ಧಿಕುರಿತ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಗೂಗಲ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಶ್ರೀ ಅಮೋಘ್ ಚಂದ್ರಶೇಖರ್ ಅವರು ಆಗಮಿಸಿ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ ಕೋರ್ಸ್ಗಳಲ್ಲಿ ವ್ಯಾಸಂಗವನ್ನು

ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿ ಸಲಹೆಗಳನ್ನು ನೀಡಿದರು. ಬೆಂಗಳೂರಿನಲ್ಲಿರುವ ಗೂಗಲ್ ಕಛೇರಿಯಲ್ಲಿನ ಕಾರ್ಯ ವಿಧಾನಗಳ ಕುರಿತ ನೋಟವನ್ನು ಪರಿಚಯಿಸುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ವಿಶೇಷವಾದ ಕೌಶಲ್ಯಗಳನ್ನು

ಕರಗತಮಾಡಿಕೊಳ್ಳುವ ಅಗತ್ಯತೆಗಳನ್ನು ಮನವರಿಕೆ ಮಾಡಿದರು. ಅಲ್ಲದೆ ಸಂದರ್ಶನವನ್ನು ಎದುರಿಸಲು ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರಯಶಸ್ಸು ಸಿಗಲು ಸಾಧ್ಯವೆಂದು ನುಡಿದರು.

ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಧರ್ಶನ್ ಜಿ. ಎಂ. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಡಿ ಎಸ್, ಕ್ಲಸ್ಟರ್ ಫೋರಂ ಸಂಚಾಲಕರಾದ ಶ್ರೀಮತಿ ರಶ್ಮಿ.ಆರ್, ಅಧ್ಯಾಪಕ ವರ್ಗದವರು ಹಾಗೂ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.