
ಶಿವಮೊಗ್ಗ.ಏ.02
ನೇಯ್ಗೆಯ ಮೂಲಕ ಮನುಕುಲಕ್ಕೆ ಕಾಯಕದ ದಾರಿ ತೋರಿದ ಮಹಾನ್ ಪುರುಷ ಶ್ರೀ ದೇವರ ದಾಸಿಮಯ್ಯನವರು ನೇಯ್ಗೆಯಲ್ಲಿಯೇ ದೇವರನ್ನು ಕಾಣುತ್ತಿದ್ದರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೇಕಾರ ಸಮುದಾಯಗಳ ಒಕ್ಕೂಟ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾಸಿಮಯ್ಯನವರು 10 – 11 ನೇ ಶತಮಾನದ ಮೊಟ್ಟ ಮೊದಲ ವಚನಕಾರರು. ಇವರನ್ನು ವಚನಗಳ ಸಂಸ್ಥಾಪಕರು ಅಥವಾ ವಚನಗಳ ತಂದೆ ಎಂದೆನ್ನಬಹುದು. ಇವರು ದೇವರ ಅಂಗದಿAದ ಜನಿಸಿದವರೆಂಬ ನಂಬಿಕೆಯಿAದ ದೇವಾಂಗ ಎಂದು ಕರೆಯಲಾಗುತ್ತದೆ. ಹಾಗೂ ದೇವಲ ಮಹರ್ಷಿ ಎಂದೂ ಕರೆಯಲಾಗುತ್ತದೆ.
ಯಾರೇ ಆಗಲೀ ದುಡಿಯದೆ ಬದುಕಬಾರದು ಎನ್ನುತ್ತಿದ್ದ ಅವರು ನೇಯ್ಗೆಯಲ್ಲಿಯೇ ದೇವರನ್ನು ಕಾಣುತ್ತಿದ್ದರು. ಬದುಕಿನ ಬಂಡಿ ಸಾಗಿಸುವ ಪ್ರಕ್ರಿಯೆಯಲ್ಲಿ ಸುಳ್ಳು ಹೇಳಬಾರದು, ವಂಚನೆ ಮಾಡಬಾರದು. ಆಸೆ, ಆಮಿಷಗಳಿಗೆ ಗುರಿಯಾಗಬಾರದು. ಮಾನವನ 9 ರಂಧ್ರಗಳನ್ನು ಹತೋಟಿಯಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎನ್ನುತ್ತಿದ್ದರು

.
ಕಾಯಕವನ್ನೇ ನಂಬಿ ಬದುಕುತ್ತಿರುವ ಹಿಂದುಳಿದ ನೇಕಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ಆಗ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹೀಗೆ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.
ಸಾಹಿತಿಗಳು ಹಾಗೂ ಸಂಶೋಧಕರಾದ ಬಾಗೂರು ಆರ್ ನಾಗರಾಜಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನೇಕಾರ ಸಮಾಜದ ಸಂಸ್ಕೃತಿಯ ಪ್ರತೀಕವಾಗಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಗುತ್ತಿದೆ. ಇವರು ಆದ್ಯ ವಚನಕಾರ ಮತ್ತು ಮೊದಲನೇ ಬಂಡಾಯ ವಚನಕಾರರು. ದಾಸಿಮಯ್ಯರ ಕುರಿತಾದ ಆಧಾರಗಳನ್ನು ಪ್ರಾಚೀನ ಶಿಲಾ ಶಾಸನ, ಪುರಣಾಗಳಿಂದ ಪಡೆಯಬಹುದು. 11 ನೇ ಶತಮಾನದ ಅವಧಿಯ 7 ಪುಷ್ಕರಿಣಿಗಳು, ಮುದನೂರಿನ 25 ಶಾಸನಗಳಲ್ಲಿ ಕಾಣಬಹುದು.
ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು. ರಾಮನಾಥನ ಆರಾಧಕರಾದ ಇವರು ‘ರಾಮನಾಥ’ ಎನ್ನುವ ನಾಮಾಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತಮ್ಮ ಕಷ್ಟದಲ್ಲಿಯೂ ದಾಸೋಹ ನಡೆಸುತ್ತಿದ್ದ ಇವರು ಮುಂದೆ ತವನಿಧಿ ವರ ಪಡೆದು ಪವಾಡ ಪುರುಷರಾಗುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ದೇವಾಂಗ ಸಂಘದದ ಅಧ್ಯಕ್ಷ ಟಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನೇಕಾರ ಸಮಾಜದವರು ಸಂಘಟಿತರಾಗಬೇಕು. ನಮ್ಮದು ತುಳಿತಕ್ಕೆ ಒಳಗಾದ ಸಮಾಜವಾಗಿದ್ದು ನಮ್ಮ ಸಮುದಾಯಕ್ಕೆ ಇದುವರೆಗೆ ಯಾವುದೇ ಮೀಸಲಾತಿ ಸಿಕ್ಕಲ್ಲ. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಪಟ್ಟಸಾಲಿ ಸಂಘದ ಅಧ್ಯಕ್ಷ ಕಾಂತೇಶ ಕದರಮಂಡಲಗಿ, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ಜಿಲ್ಲಾ ಪದ್ಮಸಾಲಿ ಸಂಘದ ಅಧ್ಯಕ್ಷ ಜೆ.ರಾಮಕೃಷ್ಣಪ್ಪ, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಜಯಮ್ಮ, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಶಿವಾನಂದ ಶೆಟ್ಟಿ, ಸಮಾಜದ ಮುಖಂಡರಾದ ಸತೀಶ್ ಕುಮಾರ್, ವಿನಾಯಕ್, ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಇತರೆ ಮುಖಂಡರು, ಶಿವಮೊಗ್ಗ ತಹಶೀಲ್ದಾರ್ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಪಾಲ್ಗೊಂಡಿದ್ದರು.