
1

ಶಿವಮೊಗ್ಗ : ನಗರದ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯ ಹಲವು ವಾರ್ಡ್ ಗಳನ್ನು ಸ್ಮಾರ್ಟ್ ಸಿಟಿ ಯಾಗಿ ಮೇಲ್ದರ್ಜೆಗೆರಿಸಲು ಕೋಟ್ಯಂತರ ಹಣವನ್ನು ಸರ್ಕಾರ ನಗರದ ಅಭಿರುದ್ದಿಗೆ ವ್ಯಯ ಮಾಡಿದರೆ, ಕೆಲವು ಕಟ್ಟಡದ ಮಾಲೀಕರು ಇದರ ತದ್ವಿರುದ್ದವಾಗಿ ನಗರದ ಸೌಂದರ್ಯ ಹಾಳು ಮಾಡಲೆಂದು ಅಂದುಕೊಂಡಂತಿದೆ.

ಇದಕ್ಕೆ ಉದಾಹರಣೆಯಾಗಿ ಎನ್.ಟಿ ಮುಖ್ಯ ರಸ್ತೆಯ ಮ್ಯಾಕ್ಸ್ ಹಾಸ್ಪಿಟಲ್ ಎದುರಿನ ಮತ್ತು ಪಕ್ಕದ ಕಟ್ಟಡದ ಮಾಲೀಕರು ಇಟ್ಟಿಗೆ, ಮರಳು ಮತ್ತಿತರ ಸಾಮಗ್ರಿಗಳನ್ನು ಫುಟ್ಬಾತ್-ರಸ್ತೆ ಗಳ ಮೇಲೆ ಹಾಕಿ ಸಾರ್ವಜನಿಕರಿಗೆ,ರೋಗಿಗಳಿಗೆ ಮತ್ತು ಇತರೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿರುವುದು ಕಂಡುಬಂದಿದೆ.

ಈ ಕೂಡಲೇ ಸಂಬಂಧ ಪಟ್ಟ ಇಲಾಖೆ ಯ ಅಧಿಕಾರಿಗಳು ಸಾಮಗ್ರಿ ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿ ಸಾರ್ವಜನಿಕರು-ವಾಹನ ಸವಾರರು ಅಗ್ರಹಿಸಿದ್ದಾರೆ.