
ಶಿವಮೊಗ್ಗ,ಏ.01:
ಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ 20-20 ಪಂದ್ಯಾವಳಿಗಳು ಶಿವಮೊಗ್ಗ ನಗರದಲ್ಲೇ ನಡೆಯಲಿವೆ ಎಂದು ನಿಖರ ಮೂಲಗಳು ತಿಳಿಸಿವೆ.

ಶಿವಮೊಗ್ಗದ ನವುಲೆಲ್ಲಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಸರೆಯ ಕ್ರೀಡಾಂಗಣ, ಜೆಎನ್ ಎನ್ ಸಿ ಹಾಗೂ ಪೆಸೆಟ್ ಕಾಲೇಜುಗಳ ಒಟ್ಟು 5 ಕ್ರೀಡಾಂಗಣಗಳಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ 16 ವಿಶ್ವದ ತಂಡಗಳು ಹಾಗೂ ಅವರ ಜೊತೆಗಿರುವವರು ಉಳಿದುಕೊಳ್ಳಲು ಹರ್ಷಪನ್, ಕಿಮ್ಮನೆ ಗಾಲ್ಪ್, ರಾಯಲ್ ಆರ್ಕೆಡ್, ರೈಸ್ ಬೋಲ್ಡ್ ಮುಂತಾದ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ಇದೇ ಮೂಲಗಳು ತಿಳಿಸಿವೆ.

ಒಟ್ಟು 27 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ ಅಗತ್ಯವಿರುವ ಕ್ರೀಡಾಂಗಣಗಳ ಸುತ್ತ ಪ್ರೇಕ್ಷಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡುವ ಕಾಯಕ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಮೂಲಗಳು ಹೇಳಿವೆ,

ಭಾರತ ತಂಡದ ನಾಯಕ ರೋಹಿತ್ ಶರ್ಮ ಸೇರಿದಂತೆ ತಂಡದ ಎಲ್ಲಾ ಆಟಗಾರರು ರಾಯಲ್ ಆರ್ಕೆಡ್ ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ,
ಡೇ ಅಂಡ್ ನೈಟ್ ಪಂದ್ಯಾವಳಿ ನಡೆಸಲು ಸದ್ಯದಲ್ಲೇ ಕ್ರಮ ಕೈಗೊಳ್ಳಲಿದೆ ಎಂದು ಇದೇ ಮೂಲಗಳು ಸ್ಪಷ್ಟಪಡಿಸಿವೆ.
(ಏಪ್ರಿಲ್ ಒಂದರ ವಿಶೇಷ ಬರಹ)