

ಸಿಗಂದೂರು,ಮಾ.31:
ಇಲ್ಲಿನ ಹೊಳೆಬಾಗಿಲಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ ಕಾಮಗಾರಿಯ ಕಡೆಯ ಸೆಗ್ಮೆಂಟ್ ಜೋಡಣೆಗೆ ಪೂಜೆ ಸಲ್ಲಿಸಲಾಯಿತು. ಉಸ್ತುವಾರಿ ಹೊತ್ತಿರುವ ಅಭಿಯಂತರ ಪೀರ್ ಪಾಶಾ ಮಾಹಿತಿ ನೀಡಿದ್ದು ಹೀಗಿತ್ತು.

ರೋಪ್ ವೇ ಆಳವಡಿಕೆ ಕಾಮಗಾರಿ ಹಾಗೂ ಸೆಗ್ಮೆಂಟ್ ಜೋಡಣೆ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ ಕೇಬಲ್, ಲೈಟಿಂಗ್ ಫಿನಿಷ್, ಸೇತುವೆ ಮೇಲ್ಪಪದರದಲ್ಲಿ ರಸ್ತೆಗೆ ಡಾಂಬಲು ಹಾಕುವ ಕಾಮಗಾರಿ ಆರಂಭವಾಗಿದೆ.

ಅಂಬಾರಗೊಡ್ಲು ಭಾಗದಿಂದ 200 ಮೀಟರ್ ರಸ್ತೆ ಕಾಮಗಾರಿ ಆರಂಭವಾಗಿದೆ. ಇನ್ನು ಎರಡು ತಿಂಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್ ಮೊದಲ ವಾರದಲ್ಲಿ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಸೇತುವೆ ಉಸ್ತುವಾರಿ ಎಂಜಿನಿಯರ್ ಪೀರ್ಪಾಷ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಎಇಇ ಮಮತಾ, ಸುನೀಲ್, ಕಾವ್ಯಾನಂದ, ದಿಲೀಪ್ ಕಂಪೆನಿ ಸಿಬ್ಬಂದಿ ಇದ್ದರು.