
ಸಾಗರ : ಇಲ್ಲಿನ ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ದವವು ಮಾ. ೩೦ರಿಂದ ಏ. ೪ರವರೆಗೆ ಅದ್ದೂರಿಯಾಗಿ ನಡೆಯಲಿದೆ.


ಮಾ. ೩೦ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಮಾ. ೩೧ರಂದು ಮೂಷಕ ಯಂತ್ರೋತ್ಸವ, ಪುಷ್ಪಮಂಜರಿ ಯಂತ್ರೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಏ. ೧ರಂದು ಬೆಳಿಗ್ಗೆ ೯-೪೫ರಿಂದ ೧೦-೦೫ರ ಶುಭ ಲಗ್ನದಲ್ಲಿ ಶ್ರೀ ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ. ರಾತ್ರಿ ಶ್ರೀ ಮಹಾಗಣಪತಿ ದೇವರ ರಥೋತ್ಸವದ ರಾಜಬೀದಿ ಮೆರವಣಿಗೆ ಇರುತ್ತದೆ.

ಏ. ೨ರಂದು ಕುಂಕಮೋತ್ಸವ, ಅವಭೃತ, ಅಂಕುರಾರ್ಪಣೆ ಇರುತ್ತದೆ. ಏ. ೩ರಂದು ದೇವಸ್ಥಾನದಲ್ಲಿ ಗಣಪತಿ ಹವನ, ಏ. ೪ರಂದು ಸಾರ್ವತ್ರಿಕ ಗಣಹೋಮವಿದ್ದು ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ ಇರುತ್ತದೆ. ಜಾತ್ರೋತ್ಸವ ಅಂಗವಾಗಿ ಏ. ೨ರಿಂದ ಐದು ದಿನಗಳ ಕಾಲ ವಿವಿಧ

ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಿ.ಕೆ.ಪ್ರಮಿಳಾಕುಮಾರಿ ತಿಳಿಸಿದ್ದಾರೆ.