ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿ ಕೊಂಡು ಹಾಗೂ ಪೊಲೀಸ್ ಇಲಾ ಖೆಯ ನೆರವಿನೊಂದಿಗೆ ತಮ್ಮ ಪಕ್ಷದ ಶಾಸಕರ ಹಾಗೂ ಅವರ ಕುಟುಂಬ ವರ್ಗದವರ ಮೇಲೆ ಹಲವು ಪ್ರಕರಣ ಗಳನ್ನು ದಾಖಲಿಸುವುದರ ಜೊತೆಗೆ ದೌರ್ಜನ್ಯ ಕೂಡಾ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವತಿ ಯಿಂದ ನಗರದಲ್ಲಿ ಇಂದು ಜನಾಕ್ರೋಶ ಆಂದೋಲನ ನಡೆಯಿತು.

ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದ ವರೆಗೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜಾಥಾ ನಡೆಸಿದರು. ನಂತರ ಸೈನ್ಸ್ ಮೈದಾ ನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಅನೇಕ ಘಟಾನುಘಟಿ ನಾಯಕರು ಮಾತನಾಡಿದರು.
ಭದ್ರಾವತಿ ವಿಧಾನಸಭಾ ಕ್ಷೇತ್ರದ ನಮ್ಮ ಶಾಸಕ ಬಿ.ಕೆ.ಸಂಗಮೇಶ್ ಮತ್ತು ಅವರ ಕುಟುಂಬದ ಹಾಗೂ ನಮ್ಮ ಕಾರ್ಯಕರ್ತರ ವಿರುದ್ಧ ಬಿಜೆಪಿಯ ವರು ಹಲವು ಮೊಕದ್ದಮೆ ದಾಖಲಿ ಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಧಮನಕಾರಿ ನಿಲುವನ್ನು ತೋರಿಸುತ್ತಿದ್ದಾರೆ. ಒಬ್ಬ ಜನಪ್ರತಿನಿಧಿಗೆ ಈ ರೀತಿಯಾದರೆ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕ ಸಭೆ ಯಲ್ಲಿ ಮಾತನಾಡಿದ ಬಹುತೇಕ ಗಣ್ಯರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾ ಧ್ಯಕ್ಷರಾದ ಧ್ರುವ ನಾರಾಯಣ್, ಕೃಷ್ಣಬೈರೇಗೌಡ, ಜಿ. ಪರಮೇಶ್ವರ್, ಪ್ರಿಯಾಂಕ ಖರ್ಗೆ, ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಭದ್ರಾವತಿ ಶಾಸಕ ಸಂಗಮೇಶ್, ಶಾಸಕ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮೊದಲಾದವರು ಆಗಮಿಸಿದ್ದಾರೆ.
ಸಮಾವೇಶಕ್ಕೂ ಒಂದು ವಾರ ಮೊದಲು ಕಾಂಗ್ರೆಸ್ನ ಹಲವು ಮುಖಂಡರು ಪತ್ರಿಕಾಗೋಷ್ಠಿ ನಡೆ ಸುವ ಮೂಲಕ ಸಮಾವೇಶದ ರೂಪು ರೇಷೆಗಳನ್ನು ತಿಳಿಸಿದ್ದರು. ಅಲ್ಲದೆ, ನಗರದ ಎಲ್ಲೆಡೆ ಜನಾಕ್ರೋಶ ಸಮಾ ವೇಶ ಎಂಬ ಪ್ಲೆಕ್ಸ್ಗಳನ್ನು ಅಳವಡಿ ಸಲಾಗಿತ್ತು. ಒಟ್ಟಾರೆ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿ ರುವ ಬಿ.ಕೆ. ಸಂಗಮೇಶ್ ಮತ್ತು ಅವರ ಕುಟುಂ ಬದ ವಿರುದ್ಧ ಪೊಲೀ ಸರು ದಾಖಲಿ ಸಿರುವ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ನಡೆಸಿತು.
ಪ್ರತಿಭಟನೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.