ಶಿವಮೊಗ್ಗ, ಮಾ.12:
ಪೊಲೀಸರಿಗೆ ಸಂಬಳ ನೀಡೋದು ಬಿಎಸ್ ವೈ ಮನೆಯಿಂದ ಅಲ್ಲ ಈಶ್ವರಪ್ಪನವರ ಮನೆಯಿಂದ ಅಲ್ಲ. ಅದರ ಜೊತೆಗೆ ಲಂಚವನ್ನೂ ಪಡೆಯುತ್ತಿದ್ದೀರಿ ನೆನಪಿರಲಿ. ಪೊಲೀಸ್ ರವರನ್ನ ನೇಮಿಸಿಕೊಂಡಿದ್ದು ಕಾನೂನು ಸುವ್ಯವಸ್ಥೆಗೆ. ಇಂಡಿಯನ್ ಪಿನಲ್ ಕೋಡ್ ಸಂವಿಧಾನ ಏನು ಹೇಳುತ್ತದೆ ಅದನ್ನ ಪೊಲೀಸ್ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಬುದ್ದಿಮಾತು ಹೇಳಿದ್ದಾರೆ.
ಅವರು ಇಂದು ಸಂಜೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಜನಾಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದರು.
ಭದ್ರಾವತಿ ಫಟನೆಯ ಕುರಿತು ಜಿಲ್ಲೆಯ ರಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಪ್ರಕರಣ ಕುರಿತಂತೆ ಕೂಡಲೇ “ಬಿ” ರಿಪೋರ್ಟ್ ಹಾಕಿ ಎಂದಿದ್ದೆ. ಯಾರನ್ನೂ ಬಂಧಿಸಬೇಡಿ ಎಂದಿದ್ದೆ. ಆದರೂ ಸಂಗಮೇಶ್ವರ್ ಪುತ್ರನ ಬಂಧಿಸಿದ್ದಾರೆ. ಆಯಿತು ಬಂದಿಸಿದ್ದೀರಿ ಒಳ್ಳೆಯದಾಯಿತು. ಹಾಗಾದರೆ ಪ್ರತಿದೂರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಕಬಡ್ಡಿಯ ಪಂದ್ಯಾವಳಿಯಲ್ಲಿ ಜೈಶ್ರೀರಾಮ್ ಎಂದು ಕೂಗಿ ಗಲಾಟೆಗೆ ಪ್ರಚೋದನೆ ನೀಡಲಾಗಿದೆ ಇದಕ್ಕೆ ಏನು ಕ್ರಮ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಸಂಗಮೇಶ್ವರ್ ಸಹ ಪ್ರತಿದೂರು ನೀಡಿದ್ದಾರೆ. ಬಿಜೆಪಿಯವರ ಮೇಲೆ 307 ಹಾಕಲಾಗಿದೆ. ಹಾಗಾದರೆ ಯಾಕೆ ಪೊಲೀಸ್ ನವರು ಬಿಜೆಪಿಯವರನ್ನ ಬಂಧಿಸಿಲ್ಲ. ಇದು ದೌರ್ಜನ್ಯವಲ್ಲವಾ ಎಂದು ಪ್ರಶ್ನಿಸಿದರು.
ಪೊಲೀಸ್ ದೌರ್ಜನ್ಯ ನಡೆದರೆ ಮುಂದಿನ ದಿನಗಳಲ್ಲಿ ಠಾಣೆಗಳಿಗೆ ಮುತ್ತಿಗೆ ಹಾಕಲಾಗುವುದು. ಇನ್ನೆರಡು ವರ್ಷವಿದೆ ಚುನಾವಣೆಗೆ, ನಾವು ಮತ್ತೆ ಅಧಿಕಾರಕ್ಜೆ ಬರುತ್ತೇವೆ ಬಿಕೇರ್ ಫುಲ್ ಎಂದು ಎಚ್ಚರಿಸಿದರು.
17 ಜನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರನ್ನ ಕೋಟಿಗಟ್ಟಲೆ ಹಣಕೊಟ್ಟು ಖರೀದಿ ಮಾಡಿ ಸರ್ಕಾರ ಮಾಡಿದ್ರಲ್ಲಾ ಇದನ್ನ ಪೊಲೀಸರು ತಡೆಯಬೇಕಿತ್ತು. ಪೊಲೀಸರಿಗೆ ಸಂಬಳ ನೀಡೋದು ಬಿಎಸ್ ವೈ ಮನೆಯಿಂದ ಅಲ್ಲ ಈಶ್ವರಪ್ಪನವರ ಮನೆಯಿಂದ ಅಲ್ಲ. ಅದರ ಜೊತೆಗೆ ಲಂಚವನ್ನೂ ಪಡೆಯುತ್ತಿದ್ದೀರಿ ಎಂದು ಗರ್ಜಿಸಿದರು.
ಬಿಜೆಪಿಯವರಿಗೆ ಅಧಿಕಾರದ ಮದವಿದೆ. ಎಷ್ಟು ದಿನ ಇರ್ತೀರಿ. ನಾವು ಅಧಿಕಾರಕ್ಕೆಬಂದಾಗ ಪೊಲೀಸರನ್ನ ಬಳಸಿಕೊಳ್ಳಲ್ಲ. ನನ್ನಅಧಿಕಾರದಲ್ಲಿ ಒಮ್ಮೆಯೂ ಎಲ್ಲೂ ಪೊಲೀಸರನ್ನ ಬಳಸಿಕೊಂಡಿಲ್ಲ. 307 ನ್ನ ಓದಿಕೊಳ್ಳಿ. ಭದ್ರಾವತಿ ಪ್ರಕರಣದಲ್ಲಿ ಸೆಕ್ಷನ್ 323 ಅಥವಾ 324 ದೂರು ದಾಖಲಾಗಬೇಕಿತ್ತು. 307 ಪ್ರಕರಣ ದಾಖಲಿಸಲಿಕ್ಕೆ ಯಾವ ಆಯುಧ ಬಳಸಲಾಗಿದೆ.
ಪೊಲೀಸರು ವೈದ್ಯರ ವರದಿ ಮೇಲೆ ಕ್ರಮಕೈಗೊಳ್ಳಿ ನೋಡೋಣ ವೆಂದು ಸವಲೆಸೆದರು. ಆತ್ಮಸಾಕ್ಷಿ ಇದೆಯಾನಿಮಗೆ ಎಂದು ಪೊಲೀಸರನ್ನ ತೀರ್ವವಾಗಿ ತರಾಟೆಗೆ ತೆಗೆದುಕೊಂಡರು.
ಎರಡು ವರ್ಷದಲ್ಲಿ ಬಿಎಸ್ ವೈ ಸರ್ಕಾರ ಲೂಟಿ ಮಡಿದ್ದು ಬಿಟ್ಟರೆ ಏನು ಮಾಡಿಲ್ಲ, .ಬಿಎಸ್ ವೈ ಮತ್ತು ಸಚಿವ ಈಶ್ವರಪ್ಪನವರ ನಡುವೆ ಹಣ ಮಾಡುವಲ್ಲಿ ಸ್ಪರ್ಧೆ ಇದೆ. ಬಿಎಸ್ ವೈ ಮತ್ತು ಈಶ್ವರಪ್ಪನವರ ಮನೆಯಲ್ಲಿ ದುಡ್ಡು ಎಣಿಸುವ ಮಿಷಿನ್ ಇಟ್ಕೊಂಡಿದ್ದನ್ನ ಲೇವಡಿ ರೂಪದಲ್ಲಿಯೇ ಹೇಳಿದರು.
2008 ರಲ್ಲಿ ಬಿಎಸ್ ವೈ ಹಸಿರು ಶಾಲು ಹೊದ್ಗೊಂಡು ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡು ಒಂದೇವಾರದಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಲಾಯಿತು.
ಹಸಿರು ಟವಲ್ ಹಾಕಿಕೊಂಡ ಬಿಎಸ್ ವೈಗೆ ಕಾಂಗ್ರೆಸ್ ನ ಉಗ್ರಪ್ಪ ರೈತರ ಸಾಲ ಮನ್ನಾ ಮಾಡಿ ಎಂದು ಹೇಳಿದ್ದರು. ರೈತರ ಸಾಲ ಮನ್ನ ಮಾಡಲು ನಮ್ಮ ಬಳಿ ಹಣ ಪ್ರಿಂಟ್ ಮಾಡುವ ಮಿಷನ್ ಇಲ್ಲವೆಂದಿದ್ದರು.
ಆದರೆ ಪ್ರನಾಳಿಕೆಯಲ್ಲಿ ಬಿಜೆಪಿ ರೈತರ ಸಾಲ ಮನ್ನ ಮಾಡಲಾಗುವುದು ಎಂದು ಬರೆದುಕೊಂಡಿದ್ದಾರೆ. ಆದರೆ ಙ್ನ ಸರ್ಕಾರ ಯಾವ ಪ್ರನಾಳಿಕೆಯಲ್ಲಿಯೂ ಸಾಲ ಮನ್ನ ಮಾಡುವ ಬಗ್ಗೆ ಹೇಳಿಕೊಳ್ಳದಿದ್ದರು 8165 ಕೋಟಿ ಸಾಲ ಮನ್ನಾ ಮಾಡಿದ್ದೆ ಎಂದರು
ಬಿಎಸ್ ವೈ ಸರ್ಕಾರದಲ್ಲಿ 1 ಲಕ್ಷದ 30 ಸಾವಿರ ರೂ ಹಣ ಸಾಲ ಮಾಡಲಾಗಿದೆ. ಕಮಿಟೆಡ್ ಎಕ್ಸಪೆಂಡಿಚರ್ ಎಂದು ಶೇ. 30 ರಷ್ಟು ಇತ್ತು. ಇದುವರೆಗೂ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಶೇ.102 ರಷ್ಟು ಏರಿಸಲಾಗಿದೆ. ಕಮಿಟೆಡ್ ಎಕ್ಸಪೆಂಡಿಚರ್ ಎಂದರೆ ಸಂಬಳ, ಹಾಗೂ ಕಚೇರಿಯ ಮೈಂಟೇನೆನ್ಸ್ ಗೆ ಬಳಸುವುದು. ಇದನ್ನ ಶೇ.72 ರಷ್ಟು ಏರಿಸಲಾಗಿದೆ ಎಂದರು.
17 ಸಾವಿರ ಕೋಟಿ ಹಣ ಸಾಲ ತೆಗೆದುಕೊಂಡು ಬಂದು 19 ಸಾವಿರ ರೂ ಸಾಲ ಕಟ್ಟುವ ಪರಿಸ್ಥಿತಿಯನ್ನ ಬಿಜೆಪಿ ನಿರ್ಮಾಣಮಾಡಿದೆ ಎಂದರು.



