
ಶಿವಮೊಗ್ಗ, ಮಾರ್ಚ್ 25, : ನಗರದ ಖಾಸಗಿ ಬಸ್ ನಿಲ್ದಾಣದ ಫ್ಲಾಟ್ ಫಾರಂ ಮೇಲೆ 35-40 ವಯಸ್ಸಿನ ಗಂಡಸ್ಸು ಪ್ರಜ್ಞೆಯಿಲ್ಲದೆ ಮಲಗಿದ್ದು, ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿಯ ಹೆಸರು, ವಿಳಾಸ ಇರುವುದಿಲ್ಲ.

ಮೃತ ವ್ಯಕ್ತಿಯು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕೈಯ ಮುಂಗೈನ ಮಣಿಕಟ್ಟಿನ ಮುಂಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಹಾವಿನ ಚಿತ್ರವಿರುವ ಹಚ್ಚೆ ಗುರುತು ಮತ್ತು ಒಳಭಾಗದಲ್ಲಿ ನೇತ್ರಾವತಿ ಮತ್ತು

ಸುನಂದಬಾಯಿ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ತಿಳಿನೀಲಿ, ಪಾಚಿ ಹಾಗೂ ಬಿಳಿ ಬಣ್ಣದ ಚೌಕಳಿಯ ತುಂಬು ತೋಳಿನ ಶರ್ಟ್ ನೀಲಿ ಬಣ್ಣದ ಬಿಳಿ ನಕ್ಷತ್ರ ಚುಕ್ಕಿಯಿರುವ ಬರ್ಮಡಾ ಧರಿಸಿರುತ್ತಾನೆ.

ಈ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414/ 9916882544 ನ್ನು ಸಂಪರ್ಕಿಸುವುದು.