ತೀರ್ಥಹಳ್ಳಿ: ರಸ್ತೆ ಅಪಘಾತದ ಕಥೆ ಕಟ್ಟಿ ವಿಧವೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಾಲ್ಲೂಕಿನ ದೇವಂಗಿ ಸಮೀಪ ನೇತ್ರಾವತಿ (35) ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪೊಲೀಸರು ಮಹಿಳೆ ಸಾವಿನ ಕುರಿತ ತನಿಖೆ ತೀವ್ರಗೊಳಿಸಿದ ಪರಿಣಾಮ ಕೊಲೆ ಆರೋಪಿಗಳು ಬಂಧಿತರಾಗಿದ್ದಾರೆ.
ಕೊಲೆಯ ಪ್ರಮುಖ ಆರೋಪಿ ರವೀಶ್ (32) ತಾಲ್ಲೂಕಿನ ಕಮ್ಮರಡಿ ಸಮೀಪದ ಹೊರಣೇಬೈಲು ಗ್ರಾಮದವನಾಗಿದ್ದಾನೆ. ಆದರ್ಶ (31) ಕಮ್ಮರಡಿ ಗ್ರಾಮದವನು. ತೆಲಂಗಾಣ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸಂದೀಪ (30) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನವನು. ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.